Advertisement

ದ್ವಿತೀಯ ಪಿಯು: ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಪರಿಷ್ಕರಣೆ

01:15 AM Jan 23, 2019 | |

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವನ್ನು ಪರಿಷ್ಕರಿಸಲಾಗಿದೆ. ದ್ವಿತೀಯ ಪಿಯು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರದ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವು ಉಳಿದ ವಿಷಯದ ಪತ್ರಿಕೆಗಳಿಗಿಂತ ಭಿನ್ನವಾಗಿರಲಿದ್ದು, ಬಹುಆಯ್ಕೆ ಮಾದರಿ, ಹೊಂದಿಸಿ ಬರೆಯುವ ಮತ್ತು ಬಿಟ್ಟಸ್ಥಳ ತುಂಬುವುದು ಸೇರಿದಂತೆ ಅಂಕಗಳಲ್ಲಿ ಹೊಸ ಕ್ರಮವನ್ನು ಪರಿಚಯಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಕೂಡ ಸ್ವಾಗತಿಸಿದ್ದಾರೆ.

Advertisement

ಈ ಮೊದಲು ಪ್ರಶ್ನೆ ಪತ್ರಿಕೆಯ “ಎ’ ವಿಭಾಗದಲ್ಲಿ ಒಂದು ಅಂಕದ 10 ಪ್ರಶ್ನೆಗಳು, “ಬಿ’ ವಿಭಾಗದಲ್ಲಿ 2 ಅಂಕಗಳ 10 ಪ್ರಶ್ನೆಗಳು, “ಸಿ’ ವಿಭಾಗದಲ್ಲಿ 5 ಅಂಕದ 8 ಪ್ರಶ್ನೆಗಳು ಇರುತ್ತಿದ್ದವು. “ಡಿ’ ವಿಭಾಗದಲ್ಲಿ 10 ಅಂಕದ 2 ಪ್ರಶ್ನೆಗಳು ಹಾಗೂ “ಇ’ ವಿಭಾಗದಲ್ಲಿ 5 ಅಂಕದ ಎರಡು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿತ್ತು. ಆದರೆ, ಈ ಬಾರಿ “ಎ’ ವಿಭಾಗದಲ್ಲಿ 1 ಅಂಕದ ಬಹು ಆಯ್ಕೆ ಮಾದರಿ (5 ಪ್ರಶ್ನೆ),ಬಿಟ್ಟಸ್ಥಳ ತುಂಬಿರಿ (5 ಅಂಕ), ಹೊಂದಿಸಿ ಬರೆಯಿರಿ (5 ಅಂಕ) ಸೇರಿಸಿ ಪ್ರಶ್ನಾಕ್ರಮ ರಚಿಸಲಾಗಿದೆ. 2 ಅಂಕಗಳ 9 ಪ್ರಶ್ನೆಗಳು, 4 ಅಂಕಗಳ 7 ಪ್ರಶ್ನೆಗಳು, 6 ಅಂಕಗಳ 4 ಪ್ರಶ್ನೆಗಳು ಮತ್ತು 5 ಅಂಕಗಳ 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ. ಈ ಬಹುಆಯ್ಕೆ ಮತ್ತು ಹೊಂದಿಸಿ ಬರೆಯುವಿಕೆಯಲ್ಲಿ ಉತ್ತರಗಳು ಪ್ರಶ್ನೆಪತ್ರಿಕೆಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪೂರಕವಾಗಿದೆ.

ಅವುಗಳನ್ನು ಸರಿಯಾಗಿ ಗುರುತಿಸಿದರೆ, ಉತ್ತಮ ಅಂಕಗಳನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ. ಈ ವರ್ಷದಿಂದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next