Advertisement

ದ್ವಿತೀಯ ಪಿಯು: ಪ್ರಶ್ನೆ ಪತ್ರಿಕೆ ನೀಲನಕ್ಷೆ ಬಿಡುಗಡೆ

10:15 PM Dec 22, 2022 | Team Udayavani |

ಬೆಂಗಳೂರು:  ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಾಂಕನ ಮಂಡಳಿಯು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ನೀಲನಕ್ಷೆ ಬಿಡುಗಡೆ ಮಾಡಿದೆ.

Advertisement

ದ್ವಿತೀಯ ಪಿಯು ಫಲಿತಾಂಶ ಹೆಚ್ಚಳವಾಗದಿರುವುದರಿಂದ ಅದನ್ನು ಹೆಚ್ಚಿಸಲು ಇತರ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಮಾರ್ಗಗಳನ್ನು ಪರಿಶೀಲಿಸಿದ ಬಳಿಕವೇ ಪ್ರಶ್ನೆ ಪತ್ರಿಕೆಯ ಮಾದರಿಯನ್ನು ರೂಪಿಸಲಾಗಿದೆ. ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗಿದೆ.

ಫಲಿತಾಂಶ ಹೆಚ್ಚಳದ ಹಿತದೃಷ್ಟಿಯಿಂದ ಈ ವರ್ಷ ಬಹು ಆಯ್ಕೆ ಮಾದರಿಯ ಪ್ರಶ್ನೆ ಸೇರಿಸಲಾಗಿದೆ. 1ರಿಂದ 5 ಅಂಕಗಳ ಪ್ರಶ್ನೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕೊಂಚ ಬದಲಾವಣೆ ಮಾಡಿರುವುದು ಹೊರತುಪಡಿಸಿದರೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಹುದು ಎಂಬ ಕಾರಣಕ್ಕೆ ಹೆಚ್ಚಿನ ಬದಲಾವಣೆ ಮಾಡಲಿಲ್ಲ. ಕನ್ನಡ ಭಾಷೆಯಲ್ಲಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಅಂದಾಜು 10 ಪ್ರಶ್ನೆಗಳನ್ನು ಈ ರೀತಿ ನೀಡಲಾಗಿದೆ. ವಿದ್ಯಾರ್ಥಿಗಳು ವೆಬ್‌ಸೈಟ್‌ https://sslc.karnataka.gov.in/  ಗೆ ಭೇಟಿ ಕೊಟ್ಟು  ಪ್ರಶ್ನೆ ಪತ್ರಿಕೆ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next