ಕೋಟ: ಮಾಬುಕಳ ಸೇತುವೆ ಸಮೀಪ ಸೀತಾನದಿಯ ತಟದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಬಾಂಧವ್ಯ ಬ್ಲಿಡ್ ಕರ್ನಾಟಕ ಸಂಘ ನೇತೃತ್ವದಲ್ಲಿ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮೇ 26ರಂದು 2ನೇ ಹಂತದ ಸ್ವಚ್ಚತಾ ಕಾರ್ಯ ನಡೆಯಿತು.
ಈ ಸಂದರ್ಭ ಕಾರ್ಯಕರ್ತರು ದಿನವಿಡೀ ಹೆದ್ದಾರಿಯ ಎರಡೂ ಕಡೆಯ ಸ್ವತ್ಛ ಮಾಡಿ ತ್ಯಾಜ್ಯವನ್ನು ತೆಗೆದು ಸ್ವತ್ಛಗೊಳಿಸಿದರು.
ಆಸರೆ ಹೆಲ್ಪಿಂಗ್ ಹ್ಯಾಂಡ್ ಉಡುಪಿ, ಸ್ವತ್ಛ ಉಡುಪಿ ಅಭಿಯಾನ ಬಳಗ, ಕ್ಲೀನ್ ಕುಂದಾಪುರ, ಸೂಲ್ಕುದ್ರು ಹಿತರಕ್ಷಣಾ ವೇದಿಕೆ, ಜೇಸಿಐ ಕೋಟ, ಸಮೃದ್ಧಿ ಮಹಿಳಾ ಮಂಡಲಿ ಚೇರ್ಕಾಡಿ ಸಂಸ್ಥೆಗಳು ಸಹಕಾರ ನೀಡಿದವು.
ಸ್ಥಳೀಯರು ಈ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯದಂತೆ ಸ್ವತ್ಛತೆ ನಡೆಸಿದ ಸಂಸ್ಥೆ ಮನವಿ ಮಾಡಿದೆ ಹಾಗೂ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಸಂಸ್ಥೆಯ ಮುಖ್ಯಸ್ಥ ದಿನೇಶ್ ಬಾಂಧವ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.