Advertisement

ಈಗಾಗಲೇ ಸೋಂಕಿಗೆ ಒಳಗಾದವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಅಗತ್ಯವಿಲ್ಲ : ಅಧ್ಯಯನ ವರದಿ

05:54 PM Jun 15, 2021 | Team Udayavani |

ನವ ದೆಹಲಿ : ಕೋವಿಡ್ 19 ಸೋಂಕಿಗೆ ಒಳಗಾದವರಿಗೆ ಲಸಿಕೆಯ ಒಂದು ಡೋಸ್  ಸಾಕು ಎಂದು ಅಧ್ಯಯನವೊಂದು ತಿಳಿಸಿದೆ.

Advertisement

ಎಐಜಿ ಆಸ್ಪತ್ರೆಗಳ ಸಂಶೋಧಕರ ತಂಡ ಮಾಡಿದ ಅಧ್ಯಯನದಲ್ಲಿ, ಸೋಂಕಿಗೆ ಒಳಗಾದವರನ್ನು ಸೋಂಕನ್ನು ಹೊಂದಿರದವರಿಗೆ ಹೋಲಿಸಿದರೆ ಸೋಂಕಿಗೆ ಒಳಗಾದವರಲ್ಲೇ ಹೆಚ್ಚಿನ ಪ್ರತಿಕಾಯ ಕಂಡು ಬಂದಿದೆ. ಹಾಗಾಗಿ, ಸೋಂಕಿಗೆ ಒಳಗಾದವರಿಗೆ ಲಸಿಕೆಯ ಒಂದು ಡೋಸ್  ನೀಡಿದರೆ ಸಾಕು ಎಂದು ಸಂಶೋಧಕರ ತಂಡ ತಿಳಿಸಿದೆ.

ಇದನ್ನೂ ಓದಿ : ತೈಲೋತ್ಪನ್ನಗಳ ಬೆಲೆಯೇರಿಕೆಯಿಂದ ಜನ ಜೀವನ‌ ತತ್ತರ: ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ

ಜನವರಿ 6 ರಿಂದ ಫೇಬ್ರವರಿ 5 ರೊಳಗೆ ಲಸಿಕೆಯನ್ನು ಪಡೆದುಕೊಂಡ 260 ಮಂದಿ ವೈದ್ಯಕೀಯ ಸಿಬ್ಬಂದಿಗಳನ್ನು ಈ ಅಧ‍್ಯಯನಕ್ಕೆ ಒಳಪಡಿಸಲಾಗಿದೆ. ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಪರೀಕ್ಷಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಯಾರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೋ ಅವರು ಕೋವಿಡ್ ಲಸಿಕೆಯ ಮೊದಲ ಡೋಸ್ ಮಾತ್ರ ಪಡೆದರೆ ಸಾಕು. ಎರಡನೇ ಡೋಡಸ್ ಅಗತ್ಯವಿಲ್ಲ.  ಮೊದಲ ಡೋಸ್ ಮೆಮೋರಿ ಸೆಲ್ ಪ್ರಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ. ಡಿ. ನಾಗೇಶ್ವರ ರೆಡ್ಡಿ, ವಿಶ್ವದಾದ್ಯಂತ ಕೋವಿಡ್ ಲಸಿಕೆಯ ಕೊರತೆ ಹಾಗೂ ಲಸಿಕೆಗಳ ಸಂಗ್ರಹಣೆಯ ಸಂದರ್ಭದಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಸೋಂಕಿಗೆ ಒಳಗಾದವರಿಗೆ ಒಂದು ಡೋಸ್ ಲಸಿಕೆ ಸಾಕಾಗುತ್ತದೆ. ಎರಡನೇ ಡೋಸ್ ನೀಡುವ ಅವಶ್ಯಕತೆ ಇಲ್ಲ. ಮೊದಲ ಡೋಸ್ ನಿಂದಲೇ ಸಾಕಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಬ್ರಾಹ್ಮಣ್ಯ ವಿರೋಧಿ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್ ಗೆ ನೋಟಿಸ್

Advertisement

Udayavani is now on Telegram. Click here to join our channel and stay updated with the latest news.

Next