Advertisement
ಕೈಪುಂಜಾಲು ಕೆಂಪುಗುಡ್ಡೆ ಜ್ವಾಲಿ ಫ್ರೆಂಡ್ಸ್ ಕಟ್ಟೆ, ಅದರ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜ್ಯೋತಿ ಶೆಟ್ಟಿ ಎಂಬವರಿಗೆ ಸೇರಿದ ಗೆಸ್ಟ್ ಹೌಸ್‌ನ ಆವರಣ ಗೋಡೆ ಕುಸಿಯುವ ಭೀತಿಯಿದೆ. ಆವರಣ ಗೋಡೆ ಕುಸಿದರೆ ಇಡೀ ಗೆಸ್ಟ್ ಹೌಸ್ ಧರಾಶಾಯಿಯಾಗುವ ಸಾಧ್ಯತೆಯಿದೆ. ಅದರೊಂದಿಗೆ ದಯಾನಂದ ಸುವರ್ಣ, ಇಂದಿರಾ ಕಾಂಚನ್, ಸುಂದರಿ ಕಾಂಚನ್ ಮತ್ತು ರಮೇಶ್ ಸುವರ್ಣ ಅವರಿಗೆ ಸೇರಿದ ಹತ್ತಾರು ತೆಂಗಿನ ಮರ ,ಗಾಳಿ ಮರಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಸ್ಥಳೀಯರಾದ ಚಂದ್ರಶೇಖರ್ ಕಾಂಚನ್, ಪೂರ್ಣಿಮಾ ಕಾಂಚನ್, ನೇತ್ರಾವತಿ, ಜಗದೀಶ್ ಶ್ರೀಯಾನ್, ಸಂತೋಷ್ ಕಾಂಚನ್, ಮಾಧವ ಮೊದಲಾದವರು ಕಡಲ್ಕೊರೆತ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ, ತಾತ್ಕಾಲಿಕ ತಡೆಗೋಡೆ ರಚಿಸಿಕೊಡುವಂತೆ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಡಿಸಿಗೆ ಮನವಿ
ಕೈಪುಂಜಾಲು,ಮಟ್ಟು ಪ್ರದೇಶದಲ್ಲಿನ ಕಡಲ್ಕೊರೆತ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪ ನಿಧಿ ಬಳಸಿ ಕೊಂಡು ತುರ್ತು ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳಿಂದಲೂ ಪೂರಕ ಸ್ಪಂದನೆ ದೊರಕಿದ್ದು,ತುರ್ತಾಗಿ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು,ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಕರಾವಳಿಯ ಕಡ್ಕೊರೆತದ ಬಗ್ಗೆ ಸರಕಾರದ ಮುಂದೆ ಬಜೆಟ್ ಅಧಿವೇಶನದ ನಡುವೆಯೂ ವಿಷಯ ಮಂಡಿಸಲಾಗಿದ್ದು, ತುರ್ತು ಪರಿಹಾರ ಕಾರ್ಯಾಚರಣೆ ನಡೆಸುವ ಸರಕಾರದಿಂದಲೂ ಭರವಸೆ ದೊರಕಿದೆ.
– ಲಾಲಾಜಿ ಆರ್.ಮೆಂಡನ್,ಶಾಸಕರು ಕಾಪು
Related Articles
ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಇಲ್ಲಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಪ್ರಾಕೃತಿಕ ವಿಕೋಪ ಅಥವಾ ಜಿಲ್ಲಾಧಿಕಾರಿಯವರ ವಿಶೇಷ ಅನುದಾನದಿಂದ ತಾತ್ಕಾಲಿಕ ತಡೆಗೋಡೆ ರಚನೆಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಆದಷ್ಟು ಶೀಘ್ರ ಇಲ್ಲಿ ತಾತ್ಕಾಲಿಕ ತಡೆಗೋಡೆ ರಚನೆಗೆ ಯೋಜನೆ ರೂಪಿಸುತ್ತೇವೆ.
– ಜಯರಾಜ್,ಬಂದರು ಇಲಾಖೆ
Advertisement