Advertisement

ಆಟೋ ಚಾಲಕರಿಗೂ ಕಡ್ಡಾಯ! ಚಾಲಕನಿಗೆ 1 ಸಾವಿರ ರೂ. ದಂಡ

10:32 AM Sep 17, 2019 | Team Udayavani |

ಪಾಟ್ನಾ/ಹೈದರಾಬಾದ್‌: ಈಗ ಎಲ್ಲೆಲ್ಲೂ ಸಾರಿಗೆ ನಿಯಮ ಉಲ್ಲಂ ಸಿದ್ದಕ್ಕೆ ದಂಡ ವಿಧಿಸುವ ಬಗೆಗೆ ಸುದ್ದಿಯೋ ಸುದ್ದಿ. ಆದರೆ ಬಿಹಾರದ ಮುಝಾಫ‌ರ್‌ಪುರದಲ್ಲಿ ಸೀಟ್‌ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕನಿಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ. ಶನಿವಾರ ಈ ಘಟನೆ ನಡೆದಿದೆ. ತಪಾಸಣೆ ವೇಳೆ ಆಟೋ ಚಾಲಕ ಸೀಟ್‌ ಬೆಲ್ಟ್ ಧರಿಸದೇ ಇದ್ದದ್ದು ಕಂಡು ಬಂತು. ಜತೆಗೆ ಆತ ಬಡವ ಎಂದು ಗೊತ್ತಾಯಿತು. ಆದರೂ, ಕನಿಷ್ಠ ದಂಡ ವಿಧಿಸಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರಯಿಯಾ ಠಾಣಾಧಿಕಾರಿ ಅಜಯ ಕುಮಾರ್‌ ಹೇಳಿದ್ದಾರೆ. ಜತೆಗೆ ಇದೊಂದು ತಪ್ಪು ಎನ್ನುವುದು ಗೊತ್ತು ಎಂದಿದ್ದಾರೆ.

Advertisement

ಪೊಲೀಸರ ನೆರವು: ಹೈದರಾಬಾದ್‌ನಲ್ಲಿ ಸಂಚಾರ ಪೊಲೀಸರು ನಿಯಮ ಉಲ್ಲಂ ಸಿ ದವರಿಗೆ ದಂಡ ವಿಧಿಸುವ ಬದಲಾಗಿ, ಹೆಲ್ಮೆಟ್‌ ಖರೀದಿಗೆ ನೆರವಾಗುತ್ತಿದ್ದಾರೆ. ಹೆಲ್ಮೆಟ್‌ ಧರಿಸದವರಿಗೆ, ವಿಮೆ ಮತ್ತು ಪರವಾನಗಿ ದಾಖಲೆಗಳು ಇಲ್ಲದವರಿಗೆ, ಮಾಲಿನ್ಯ ಪ್ರಮಾಣ ಪತ್ರ ಇಲ್ಲದವರಿಗೆ ಅದನ್ನು ಒದಗಿಸಲು ನೆರವಾಗಿದ್ದಾರೆ.

ಇದೇ ವೇಳೆ, ನಾಗಾಲ್ಯಾಂಡ್‌ನ‌ಲ್ಲಿ ನೋಂದಾಯಿಸಿದ ಟ್ರಕ್‌ ಮಾಲೀಕ-ಚಾಲಕ ಶೈಲೇಶ್‌ ಶಂಕರ್‌ ಲಾಲ್‌ ಗುಪ್ತಾಗೆ ಒಡಿಶಾದಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next