ಕಾರವಾರ; ಭಯೋತ್ಪಾದಕ ದಾಳಿ ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಅನುಸರಿಸಬೇಕು ಮತ್ತು ಭದ್ರತಾ ದೃಷ್ಟಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಮತ್ತು ಸಿದ್ಧತೆಗಳು ಯಾವ ರೀತಿ ಸಮರ್ಥವಾಗಿವೆ ಎನ್ನುವುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ಸಾಗರ ಕವಚ ಕಾರ್ಯಾ ಆರಂಭವಾಯಿತು.
ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ಭಾರತೀಯ ನೌಸೇನೆ ಜಂಟಿಯಾಗಿ ಸಾಗರ ಕವಚ ಅಣುಕು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಬುಧುವಾರ ಬೆಳಗಿನ 8 ಗಂಟೆಯಿಂದ ಪ್ರಾರಂಭಿಸಲಾಯಿತು. ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ , ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಬೀಚ್ ಗಳು, ದೇವಸ್ಥಾನ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ವ್ಯಾಪಕ ತಪಾಸಣೆ ನಡೆಯಿತು .ಸಂಜೆತನಕ ಯಾವೊಂದು ಭಯೋತ್ಪಾದಕ ಕೃತ್ಯ ಬಯಲಿಗೆ ಬಂದಿರಲಿಲ್ಲ.
ಇದನ್ನೂ ಓದಿ:ಸಾರಿಗೆ ಬಸ್ಸುಗಳಲ್ಲಿ ಅಪಘಾತ ಮುನ್ಸೂಚನೆಗೆ ಆಧುನಿಕ ವ್ಯವಸ್ಥೆ ಜಾರಿ: ಡಿಸಿಎಂ ಸವದಿ
ಈ ಸಂದರ್ಭ ಪೊಲೀಸರು ಕರಾವಳಿಯ ಚೆಕ್ ಪೋಸ್ಟ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ , ಅಣೆಕಟ್ಟು, ಸೇತುವೆ, ಜಿಲ್ಲಾಧಿಕಾರಿ ಕಚೇರಿ ಬಳಿ ಎಲ್ಲಾ ವಾಹನಗಳ ತಪಾಸಣೆ ನಡೆಸಿದರು.