Advertisement

ಕಲ್ಲೊಳ್ಳಿಯಲ್ಲೂ ಸೀಲ್‌ಡೌನ್‌

02:10 PM Jun 03, 2020 | Suhan S |

ಘಟಪ್ರಭಾ/ಮೂಡಲಗಿ: ಯಾವುದೇ ಕೋವಿಡ್ ಪ್ರಕರಣ ಇಲ್ಲದೇ ನಿಟ್ಟುಸಿರು ಬಿಟ್ಟಿದ್ದ ಮೂಡಲಗಿ ತಾಲೂಕಿನ ಜನತೆಗೆ ಸಮೀಪದ ಕಲ್ಲೋಳ್ಳಿ ಗ್ರಾಮದಲ್ಲಿ ಮಂಗಳವಾರ ಓರ್ವ ವ್ಯಕ್ತಿಗೆ ಸೋಂಕು ಇರುವ ಬಗ್ಗೆ ದೃಢಪಟ್ಟಿದ್ದು, ಜನರಲ್ಲಿ ಭೀತಿ ಮೂಡಿಸಿದೆ.

Advertisement

ಮುಂಬೈನಿಂದ ಆಗಮಿಸಿದ್ದ ಕಲ್ಲೋಳಿ ಪಟ್ಟಣದ ಮೂವರು ವ್ಯಕ್ತಿಗಳ ಪೈಕಿ ಓರ್ವನಿಗೆ ಕೋವಿಡ್ ಸೋಂಕು ತಗುಲಿದೆ. ಆ ಮೂವರು ವ್ಯಕ್ತಿಗಳನ್ನು ಕಲ್ಲೋಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಕ್ವಾರಂಟೈನ್‌ ಅವಧಿ ಮುಗಿದಿರುವುದರಿಂದ, ಮನೆಯಲ್ಲಿಯೇ ಇರುವಂತೆ ಸೂಚಿಸಿ ಅವರನ್ನು ಕಳೆದ ಎರಡು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆದರೆ ಮಂಗಳವಾರ ಅವರ ಗಂಟಲು ಮಾದರಿಯ ವರದಿಯಲ್ಲಿ ಮೂವರಲ್ಲಿ ಒಬ್ಬನಿಗೆ ಕೊರೊನಾ ಇರುವುದು ಪತ್ತೆಯಾಗಿದೆ.

ತಕ್ಷಣ ಕಾರ್ಯ ಪ್ರವೃರ್ತರಾದ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸೋಂಕು ತಗಲಿರುವ ವ್ಯಕ್ತಿಯನ್ನು ಬಿಮ್ಸ್‌ ಆಸ್ಪತ್ರೆಗೆ ಮತ್ತು ಪ್ರಥಮ ಸಂಪರ್ಕದಲ್ಲಿರುವ ಐದು ಜನರನ್ನು ಕ್ವಾರಂಟೈನ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಿದಂತಾಗಿದೆ.

ಸೋಂಕಿತ ಇರುವ ಪಟ್ಟಣದ ಸಿದ್ಧಾರೂಢಮಠದ ಸಮೀಪದ ಓಣಿಯ ಸುತ್ತಲಿನ ಸುಮಾರು 100ಮೀ. ಪ್ರದೇಶವನ್ನು ಸೀಲ್‌ ಡೌನ್‌ ಮಾಡಲಾಗಿದೆ. ಪಕ್ಕದ ಗ್ರಾಮಸ್ಥರು ಭಯ ಪಡದೇ ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಪೊಲೀಸ್‌, ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next