Advertisement
ಕರಾವಳಿಯ ಯಾವುದೇ ಭಾಗದಲ್ಲಿ ಭೂಕಂಪ, ಸುನಾಮಿ, ಪ್ರವಾಹ, ಕಟ್ಟಡ ಕುಸಿತ, ಭೂಕುಸಿತ ಸೇರಿದಂತೆ ಯಾವುದೇ ದುರ್ಘಟನೆ ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಿ, ಸ್ಪಂದಿಸಲು “ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ’ (ಎನ್‌ಡಿಆರ್‌ಎಫ್) ಮಾದರಿಯಲ್ಲಿ ರಾಜ್ಯಮಟ್ಟದ ತಂಡವೊಂದರ ಅಗತ್ಯ ವಿತ್ತು. ಹೀಗಾಗಿ ಈ ಹಿಂದಿನ ರಾಜ್ಯ ಸರಕಾರ ಮಂಗಳೂರಿಗೆ ವಿಪತ್ತು ಸ್ಪಂದನಾ ಪಡೆಯ ತುಕುಡಿ ಮಂಜೂರಾತಿ ಮಾಡಿತ್ತು.
ಇದು ಸರ್ವ ಸನ್ನದ್ಧ ತಂಡ. ಸುಮಾರು 100ರಿಂದ 200ರಷ್ಟು ಸಿಬಂದಿ ಇರಲಿದ್ದಾರೆ. ಪ್ರಸಕ್ತ ಇವರು ಬೆಂಗಳೂರಿ ನಲ್ಲಿ ಸೇವೆಯಲ್ಲಿದ್ದಾರೆ. ಕರಾವಳಿ ಭಾಗದಲ್ಲಿ ದೊಡ್ಡ ಅನಾಹುತಗಳು ಸಂಭವಿಸಿದರೆ, ಈ ತಂಡವನ್ನು ಇಲ್ಲಿಗೆ ಕರೆಸಲಾಗುತ್ತದೆ. ಆದರೆ, ಕರಾವಳಿ ಭಾಗ ವಿವಿಧ ಕಾರಣಗಳಿಗಾಗಿ ಅಪಾಯದಿಂದ ಕೂಡಿದ ಪ್ರದೇಶವಾಗಿರುವುದರಿಂದ ಇಲ್ಲಿಯೇ ತುಕುಡಿ ಸ್ಥಾಪನೆ ಮಾಡಬೇಕೆಂಬ ಆಗ್ರಹದಿಂದಾಗಿ ಇದನ್ನು ಕರಾವಳಿಗೆ ಮಂಜೂರು ಮಾಡಲಾಗಿದೆ.
Related Articles
Advertisement
ನೂತನ ಎಸ್.ಡಿ.ಆರ್.ಎಫ್.ಗೆ ಹೊಸ ನೇಮಕಾತಿ ನಡೆಯುವುದಿಲ್ಲ. ಬದಲಾಗಿ, ಕೆಎಸ್‌ಆರ್‌ಪಿ, ಅಗ್ನಿಶಾಮಕದಳ, ಆಂತರಿಕ ಭದ್ರತಾ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಸಿಬಂದಿಯನ್ನೇ ಈ ಕೇಂದ್ರಕ್ಕೆ ನಿಯೋಜನೆ ಮಾಡಲಾಗುತ್ತದೆ. ಈ ಇಲಾಖೆಯಲ್ಲಿರುವ ಆಸಕ್ತ ಸಿಬಂದಿ ನೂತನ ಕೇಂದ್ರಕ್ಕೆ ಸ್ವಹಿತಾಸಕ್ತಿಯಿಂದ ನಿಯೋಜನೆಗೊಳ್ಳಲೂ ಅವಕಾಶವಿದೆ. ಹೀಗೆ ನೇಮಕಗೊಂಡ ಸಿಬಂದಿಗೆ ಬೆಂಗಳೂರಿನ ಅಕಾಡೆಮಿ, ನ್ಯಾಷನಲ್ ಸಿವಿಲ್ ಡಿಫೆನ್ಸ್ ಕಾಲೇಜು ಸಹಿತ ವಿವಿಧ ಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಸ್ಪಂದಿಸುವ ರೀತಿ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಅವರಿಗೆ ತರಬೇತಿ ನೀಡಲಾಗುತ್ತ¨
ರಾಜ್ಯದಲ್ಲಿ 4 ವಿಪತ್ತು ಸ್ಪಂದನ ಪಡೆಬೆಂಗಳೂರು, ಮಂಗಳೂರು, ಗುಲ್ಬರ್ಗ, ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ (ವಿಪತ್ತು ಸ್ಪಂದನಾ ಪಡೆ) ಮಂಜೂರಾಗಿತ್ತು. ಈ ಪೈಕಿ ಬೆಂಗಳೂರಿನ ಕೇಂದ್ರ ಈಗಾಗಲೇ ಸುಸಜ್ಜಿತ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಗುಲ್ಬರ್ಗ, ಬೆಳಗಾವಿಯ ಎರಡು ಕೇಂದ್ರಗಳಿಗೆ ಕೆಲವರ ನೇಮಕಾತಿ ಆಗಿದ್ದು, ಕಾರ್ಯಾಚರಣೆಯ ಹಂತದಲ್ಲಿದೆ. ಮಂಗಳೂರಿನ ಕೇಂದ್ರಕ್ಕೆ ಕೆಎಸ್‌ಆರ್‌ಪಿಯ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನೂತನ ಎಸ್‌ಡಿಆರ್‌ಎಫ್ ತಂಡಕ್ಕೆ ನೇಮಕ ಮಾಡಲಾಗಿದ್ದು, ಅವರು ಪಾಂಡೇಶ್ವರ ಅಗ್ನಿಶಾಮದಳದ ಕಚೇರಿಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ನೇಮಕಾತಿ ಇನ್ನಷ್ಟೇ ನಡೆಯಬೇಕಿದೆ. 10 ಎಕ್ರೆ ಭೂಮಿ ಮಂಜೂರು
ಮಂಗಳೂರಿನಲ್ಲಿ “ವಿಪತ್ತು ಸ್ಪಂದನಾ ಪಡೆ’ ತಂಡ ರಚನೆಗೆ ಸರಕಾರ ಮಂಜೂರಾತಿ ನೀಡಿದ್ದು, ಇದರ ಕೇಂದ್ರ ಸ್ಥಾಪನೆಗಾಗಿ ಎಕ್ಕಾರು ಬಳಿಯ 10 ಎಕರೆ ಜಾಗವನ್ನು ಒಂದು ವಾರದೊಳಗೆ ಪಡೆದುಕೊಳ್ಳಲಿದ್ದೇವೆ. ಬಳಿಕ ತಂಡಕ್ಕೆ ಸಿಬಂದಿಯನ್ನು ನಿಯೋಜಿಸಿ ಯಾವುದೇ ವಿಪತ್ತು ಎದುರಾದಾಗ ಸ್ಪಂದಿಸುವ ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸೂಕ್ತ ತರಬೇತಿ ನೀಡಲಾಗುವುದು.
ಟಿ. ಎನ್. ಶಿವಶಂಕರ್, ಚೀಫ್ ಫೈರ್ ಆಫೀಸರ್, ಮಂಗಳೂರು ದಿನೇಶ್ ಇರಾ