ಮಹಾನಗರ: ಅಕ್ರಮ ಗೋವು ಸಾಗಾಟ ವಿಷಯದಲ್ಲಿ ಪೊಲೀಸರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್ ಬೆಳ್ಳಾರೆ ಆರೋಪಿಸಿದ್ದು, ಪೊಲೀಸರು ಈ ನೀತಿಯನ್ನು ಮುಂದುವರಿಸಿದರೆ ಮುಂದೆ ಸಂಭವಿಸಬಹುದಾದ ಘಟನೆಗಳಿಗೆ ಪೊಲೀ ಸರು ಮತ್ತು ಜಿಲ್ಲಾಡಳಿತವೇ ಹೊಣೆಯಾಗ ಬೇಕಾಗುತ್ತದೆ ಎಂದು ಹೇಳಿದರು.
ದೇಶಾದ್ಯಂತ ಅಲ್ಪಸಂಖ್ಯಾಕರು ಮತ್ತು ದಲಿತರ ಮೇಲೆ ದೌರ್ಜನ್ಯಗಳು ನಡೆ ಯುತ್ತಿವೆ ಎಂದು ಆರೋಪಿಸಿ ಹಾಗೂ ಅವುಗಳನು ್ನ ನಿಯಂತ್ರಿಸುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಖಂಡಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಸಂಜೆ ಎಸ್‌ಡಿಪಿಐ ಜಿಲ್ಲಾ ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಕ್ರಮ ಗೋವು ಸಾಗಾಟಕ್ಕೆ ಸಂಬಂಧಿಸಿ ಮೂಡುಬಿದಿರೆಯಲ್ಲಿ ಹಾಗೂ ಇತರ ಭಾಗಗಳಲ್ಲಿ ನಡೆದ ಪ್ರಕರಣಗಳಲ್ಲಿ ಪೊಲೀ ಸರು ದ್ವಿಮುಖ ನೀತಿ ಅನುಸರಿಸಿದ್ದಾರೆ ಎಂದರು.
ಗುರುವಾರ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜಾ ಪ್ರಚೋದನಕಾರಿಯಾಗಿ ಮಾತನಾಡಿದ್ದು, ಏಕಪಕ್ಷೀಯವಾಗಿ ವರ್ತಿಸಿದ್ದಾರೆ ಎಂದು ಇಕ್ಬಾಲ್ ಬೆಳ್ಳಾರೆ ಆರೋಪಿಸಿದರು. ಸಾಮರಸ್ಯ ನೆಲೆಸಬೇಕಾಗಿದೆ. ಅದಕ್ಕಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಮಹಮದ್ ಹನೀಫ್ ಕಾಟಿಪಳ್ಳ, ಅಶ್ರಫ್ ಮಾಚಾರ್ ಉಪಸ್ಥಿತರಿದ್ದರು.