Advertisement

ಎಸ್‌ಡಿಎಂ ಬಿಬಿಎಂ- ಲಂಡನ್‌ ಗ್ರೀಮ್ಸ್‌ಬಿ  ವಿ.ವಿ. ಒಪ್ಪಂದ 

03:45 AM Jul 11, 2017 | |

ಮಂಗಳೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಎಂಬಿಎ ವಿದ್ಯಾರ್ಥಿಗಳಿಗೆ ಲಂಡನ್‌ನ ಗ್ರೀಮ್ಸ್‌ ಬಿ ವಿಶ್ವವಿದ್ಯಾನಿಲಯದಲ್ಲಿ ಅನ್ವೇಷಣೆ ಮತ್ತು ಉತ್ಪಾದಕತೆಯಲ್ಲಿ ವಿಶೇಷ ತರಬೇತಿಯ ಅವಕಾಶ ಕಲ್ಪಿಸಿದ್ದು ಹತ್ತು ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕ ಡಾನ್‌ ಪ್ರಕಾಶ್‌ ಮತ್ತು ನಿರ್ದೇಶಕ ಡಾ| ದೇವರಾಜ್‌ ಕೆ. ಅವರು ಭಾಗವಹಿಸಿದ್ದಾರೆ.ಎಸ್‌ಡಿಎಂ ಎಂಬಿಎ ಸಂಸ್ಥೆ ಜತೆಗೆ ಗ್ರೀಮ್ಸ್‌ ಬಿ ವಿ.ವಿ. ಮುಂದಿನ ಐದು ವರ್ಷಗಳಿಗೆ ತರಬೇತಿಯ ಒಡಂಬಡಿಕೆಯನ್ನು ಮಾಡಲಾಯಿತು ಎಂದು ನಿರ್ದೇಶಕ ದೇವರಾಜ್‌ ಕೆ. ಅವರು ತಿಳಿಸಿದ್ದಾರೆ.

Advertisement

ಜಗತ್ತಿನಲ್ಲಿ ಗ್ರೀಮ್ಸ್‌ಬಿ ವಿವಿ ಅನ್ವೇಷಣೆ ಮತ್ತು ಉತ್ಪಾದಕತೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತಕ್ಕೆ ಸಂಬಂಧಪಟ್ಟ ಅನ್ವೇಷಣೆ, ಅಭಿವೃದ್ಧಿ ಸಾಧ್ಯತೆ, ಶಿಸ್ತು ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next