ಕಟಪಾಡಿ: ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ಸ್ನಾತಕೋತ್ತರ ವಿಭಾಗ ಹಾಗೂ ಸಸ್ಯೋದ್ಯಾನ ಸಮಿತಿಯ ಸಹಭಾಗಿತ್ವದಲ್ಲಿ ವಿಶ್ವ ಅರಣ್ಯ ದಿನಾಚರಣೆಯನ್ನು ಔಷಧಿ ಸಸ್ಯೋದ್ಯಾನ ರಾಜವನದಲ್ಲಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಶಾಲಕ್ಯತಂತ್ರ ವಿಭಾಗದ ಮುಖ್ಯಸ್ಥ ಡಾ| ಕೆ. ರಾಮಚಂದ್ರ ಅವರು ಇಂದಿನ ಜೀವನ ಶೈಲಿಯಲ್ಲಿ ಪರಿಸರ ಸಂರಕ್ಷಣೆ, ಅದರ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು.
ಎಸ್‌ಡಿಎಂ ಸಸ್ಯೋದ್ಯಾನ ಸಮಿತಿಯ ಅಧ್ಯಕ್ಷೆ ಡಾ| ಸುಮಾ ವಿ. ಮಲ್ಯ ಅವರು ಶೆ„ಕ್ಷಣಿಕ ಕ್ಷೇತ್ರ ಹಾಗೂ ಅರಣ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ| ಶ್ರೀಕಾಂತ ಪಿ. ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಮತ್ತು ಅದರ ನಿರ್ವಹಣೆ ಬಗ್ಗೆ ತಿಳಿಸಿದರು. ಕಾಲೇಜಿನ ಉದ್ಯಾನವನದ ಸಸ್ಯಗಳಿಗೆ ನಾಮಫಲಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಬೇಸಗೆಯಲ್ಲಿ ಗಿಡಮರಗಳಿಗೆ ನೀರುಣಿಸುವ ಯೋಜನೆ ಉದ್ಘಾಟಿಸಲಾಯಿತು. ಪ್ರಸೂತಿ ತಂತ್ರ ವಿಭಾಗದ ಉಪನ್ಯಾಸಕಿ ಡಾ| ರಮಾದೇವಿ ಹಾಗೂ ದ್ರವ್ಯಗುಣ ವಿಭಾಗದ ಉಪನ್ಯಾಸಕ ಡಾ| ಮೊಹಮ್ಮದ್,ಸಲ್ ಇಂತಹ ಕಾರ್ಯಕ್ರಮವು ಪ್ರಕೃತಿ ಪರವಾಗಿದ್ದು ದಿನನಿತ್ಯವೂ ಅಳವಡಿಸಿಕೊಳ್ಳಬೇಕೆಂದರು. ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ನಿವೇದಿತಾ ಶೆಟ್ಟಿ ಸ್ವಾಗತಿಸಿದರು. ಡಾ| ತೇಜಸ್ವಿ ನಾಯ್ಕ ವಂದಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಡಾ| ಪಲ್ಲವಿ ಕಶ್ಯಪ್ ನಿರೂಪಿಸಿದರು. 2ನೇ ವರ್ಷದ ಆಯುರ್ವೆàದ ವಿದ್ಯಾರ್ಥಿಗಳು ,ದ್ರವ್ಯಗುಣ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಸಹಕರಿಸಿದರು.