Advertisement
ಜಿಲ್ಲೆಯ ತಳಕಲ್ ಹಾಗೂ ಗಂಗಾವತಿಯಲ್ಲಿಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ.ಇಲ್ಲಿ ಹಲವು ವಿದ್ಯಾರ್ಥಿಗಳು ದಾಖಲಾತಿ ಪಡೆದುಬಿಸಿಎಂ, ಸಮಾಜ ಕಲ್ಯಾಣ ಹಾಗೂ ಅಲ್ಪ ಸಂಖ್ಯಾತರಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಪ್ರವೇಶಾತಿಪಡೆದು ಅಭ್ಯಾಸ ಮಾಡುತ್ತಿದ್ದರು. ಆದರೆ ಕೋವಿಡ್‌ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಹಾಸ್ಟೆಲ್‌ಗಳನ್ನುಬಂದ್ ಮಾಡುವಂತೆ ಈಚೆಗೆ ಆದೇಶ ಮಾಡಿದ್ದರಿಂದಜಿಲ್ಲೆಯಲ್ಲಿ ಎಲ್ಲ ಹಾಸ್ಟೆಲ್‌ಗಳನ್ನು ಬಂದ್ ಮಾಡಿವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.
Related Articles
Advertisement
ಇನ್ನೂ ಬಿಸಿಎಂ ಇಲಾಖೆಯಡಿಯಹಾಸ್ಟೆಲ್‌ನಲ್ಲಿ ಗಂಗಾವತಿಯಲ್ಲಿ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಈಚೆಗೆ ಕೆಲವು ವಿದ್ಯಾರ್ಥಿಗಳಿಗೆ ಕೋವಿಡ್‌ದೃಢಪಟ್ಟಿದೆ. ಇದಲ್ಲದೇ ಪ್ರಾಥಮಿಕ ಸಂಪರ್ಕಿತವಿದ್ಯಾರ್ಥಿಗಳನ್ನು ಇನ್ನೊಂದು ಹಾಸ್ಟೆಲ್‌ನಲ್ಲಿಐಸೋಲೇಷನ್ ಮಾಡಲಾಗಿದೆ. ಹಾಗಾಗಿ ಬಿಸಿಎಂಇಲಾಖೆಯಲ್ಲೂ ಪರೀಕ್ಷಾ ವಿದ್ಯಾರ್ಥಿಗಳ ಪ್ರವೇಶಾತಿಗೆಇಲಾಖೆ ಅ ಧಿಕಾರಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ.ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ವಿಟಿಯು ಪರೀಕ್ಷೆಯನ್ನು ಮುಂದೂಡದೇಇರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ.ಹಾಸ್ಟೆಲ್‌ನಲ್ಲಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯಬೇಕಾದವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ವಾಸ್ತವ್ಯ ಇಲ್ಲದೇತುಂಬ ಸಮಸ್ಯೆ ಎದುರಾಗಿದೆ. ಕೂಡಲೇ ಹಾಸ್ಟೆಲ್‌ಗಳನ್ನು ಆರಂಭಿಸಿ, ಪರೀûಾ ವಿದ್ಯಾರ್ಥಿಗಳಿಗೆ ಅವಕಾಶಕಲ್ಪಿಸಬೇಕೆನ್ನುವುದು ವಿದ್ಯಾರ್ಥಿ ಸಂಘಟನೆಗಳಒತ್ತಾಯವಾಗಿದೆ.ಪರೀûಾ ವಿದ್ಯಾರ್ಥಿಗಳಿಗೆ ವಸತಿನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶನೀಡಬೇಕೆಂದು ಸರ್ಕಾರ ಆದೇಶ ಮಾಡಿದೆ.ಹಾಗಾಗಿ ಕೆಲವೊಂದು ಹಾಸ್ಟೆಲ್‌ಗಳನ್ನು ಆರಂಭಿಸಿಅಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದೇವೆ.ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳು ಆಯಾತಾಲೂಕು ಅ ಧಿಕಾರಿಗಳನ್ನು ಸಂಪರ್ಕ ಮಾಡಿಹಾಸ್ಟೆಲ್ ಪ್ರವೇಶ ಮಾಡಬಹುದು.
ನವೀನ್ ಶಿಂತ್ರೆ,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ, ಕೊಪ್ಪಳ