Advertisement

ಇತಿಹಾಸದಲ್ಲೇ ಚಿನ್ನ ಗೆದ್ದ ಹಿರಿಯ ವ್ಯಕ್ತಿ ಸ್ಕಾಟ್ಲೆಂಡಿನ ಜಾರ್ಜ್‌ ಮಿಲ್ಲರ್‌!

09:54 PM Aug 06, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಸ್ಕಾಟ್ಲೆಂಡಿನ ಜಾರ್ಜ್‌ ಮಿಲ್ಲರ್‌ ಈಗ ಕಾಮನ್‌ವೆಲ್ತ್‌ನಲ್ಲಿ ಬಂಗಾರ ಗೆದ್ದಿದ್ದಾರೆ. ಬಂಗಾರ ಗೆದ್ದರೆ ಅದೊಂದು ವಿಶೇಷ ಸುದ್ದಿ. ಆದರೆ ಇಷ್ಟು ಜನಪ್ರಿಯ ಸುದ್ದಿಯಾಗಿರುವುದೇಕೆ? ಇದಕ್ಕೆ ಕಾರಣ ಅವರ ವಯಸ್ಸು! ಅವರಿಗೀಗ 75 ವರ್ಷ, 8 ತಿಂಗಳು.

Advertisement

ಈ ವಯಸ್ಸಿನಲ್ಲಿ ಅವರು ಮಿಕ್ಸೆಡ್‌ ಜೋಡಿ ವಿಭಾಗದಲ್ಲಿ (ಮಿಕ್ಸೆಡ್‌ ಪೇರ್ಸ್‌) ತಮ್ಮ ತಂಡದ ಜತೆಗೂಡಿ ಚಿನ್ನವನ್ನೇ ಗೆದ್ದಿದ್ದಾರೆ. ಇವರು ಕಾಮನ್‌ವೆಲ್ತ್‌ ಇತಿಹಾಸದಲ್ಲೇ ಚಿನ್ನ ಗೆದ್ದ ಅತಿ ಹಿರಿಯ ವ್ಯಕ್ತಿ!

ಇವರು ಪ್ಯಾರಾ ಮಿಶ್ರ ಜೋಡಿ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಇವರ ತಂಡದಲ್ಲಿ ಮೆಲಾನಿ ಇನೆಸ್‌, ರಾಬರ್ಟ್‌ ಬಾರ್‌, ಸಾರಾ ಜೇನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next