ಕುಂದಾಪುರ: ವರ್ತಮಾನದ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಲು ಬುದ್ಧಿ-ಭಾವ-ಯೋಚನೆಗಳ ಪಕ್ವತೆಯೇ ಅನಿವಾರ್ಯ ಹೊರತು, ತರಗತಿಯ ನಾಲ್ಕು ಗೋಡೆಗಳ ನಡುವಿನ ಓದು ಅಥವಾ ಅಂಕ ಗಳಿಕೆಯಲ್ಲ. ಈ ಸೂಕ್ಷ್ಮತೆಯನ್ನು ಅರಿತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಶ್ರಮಿಸುತ್ತಿದೆ ಎಂದು ಕುಂದಾಪುರ ತಾ| ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ| ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು.
ಬುಧವಾರ ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ “ದಶಮಾನೋತ್ಸವ’ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಣಿಪಾಲ ಎಂ.ಐ.ಟಿ.ಯ ಪ್ರಾಧ್ಯಾಪಕ ಹಾಗೂ ಯಕ್ಷಗಾನ ವಿಮರ್ಶಕ ಪ್ರೊ| ಎಸ್. ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲು ಎನ್ನುವಂತೆ ವಿದ್ಯಾರ್ಥಿ ಪೋಷಕ ಯಕ್ಷಗಾನ ಕಲಾವಿದರನ್ನು ಸಮ್ಮಾನಿಸಲಾಗುತ್ತಿದೆ. ಸೈನಿಕ – ಶಿಕ್ಷಕ – ಕೃಷಿಕನಂತೆಯೇ ಕರ್ತವ್ಯ ನಿಷ್ಠೆಯಿಂದ ಸೇವೆಗೈಯ್ಯುವ ಕಲಾವಿದರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಸಮ್ಮಾನ
ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿ ಪೋಷಕ ಯಕ್ಷಗಾನ ಕಲಾವಿದರಾದ ಚಂದ್ರ ಗೌಡ ಗೋಳಿಕೆರೆ, ಆಜ್ರಿ ಉದಯ ಕುಮಾರ್ ಶೆಟ್ಟಿ, ಯಳಬೇರು ಶೇಖರ ಶೆಟ್ಟಿ, ಮಹಾಬಲೇಶ್ವರ ಗೌಡ ಹಾರ¾ಣ್ ಹಾಗೂ ಮಂಜುನಾಥ ಕೊಠಾರಿ ನಾಯ್ಕನಕಟ್ಟೆ ಅವರನ್ನು ಸಮ್ಮಾನಿಸಲಾಯಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಅಧ್ಯಕ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಕೆ. ಸುಧಾಕರ್ ಶೆಟ್ಟಿ ಬಾಂಡ್ಯ ಕಾಲೇಜಿನ ವಾರ್ಷಿಕ ನ್ಯೂಸ್ ಬುಲೆಟಿನ್ “ಕ್ಯಾಂಪಸ್ ವಾಯ್ಸ’ ಬಿಡುಗಡೆಗೊಳಿಸಿದರು.
ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಪ್ರಸ್ತಾವಿಸಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ರಾಜೇಶ್ ಶೆಟ್ಟಿ ವಕ್ವಾಡಿ, ರಕ್ಷಿತ್ ರಾವ್ ಗುಜ್ಜಾಡಿ, ಶಿವರಾಜ್ ಸಿ. ನಾವುಂದ, ಯೋಗೀಶ್ ಶಾನುಭೋಗ್ ಕಾವ್ರಾಡಿ, ಶುಭಾ ಅಡಿಗ, ಚೈತ್ರಾ ಪರಿಚಯಿಸಿದರು. ಅಮೃತಾ ನಿರೂಪಿಸಿ, ವಿಸ್ಮಿತಾ ವಿ. ವಂದಿಸಿದರು.