ಅಮೃತಸರ: ಇತ್ತೀಚಿಗೆ ಬೆಂಗಳೂರಿನಿಂದ ದಿಲ್ಲಿಗೆ ಹೊರಟ ವಿಮಾನವೊಂದು ನಿಲ್ದಾಣದಲ್ಲೇ 50 ಮಂದಿ ಪ್ರಯಾಣಿಕರನ್ನು ಬಿಟ್ಟು ಹೋಗಿರುವ ವಿಚಾರ ಹುಸಿಯಾಗಿರುವ ಬೆನ್ನಲ್ಲೇ ಅಮೃತಸರದಲ್ಲೊಂದು ಅಂತಹುದೇ ಘಟನೆ ನಡೆದಿದೆ.
ಅಮೃತಸರದಿಂದ ಸಿಂಗಾಪುರಕ್ಕೆ ತೆರಳಬೇಕಿದ್ದ ವಿಮಾನವೊಂದು 35 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋದ ಪ್ರಸಂಗ ನಡೆದಿದೆ.
ಸ್ಕೂಟ್ ಏರ್ ಲೈನ್ಸ್ ಎಂಬ ಹೆಸರಿನ ವಿಮಾನ ಬುಧವಾರ ಸಂಜೆ 7.55 ನಿಮಿಷಕ್ಕೆ ಅಮೃತಸರದಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿತ್ತು ಆದರೆ ನಿಗದಿತ ಸಮಯಕ್ಕಿಂತ ಐದು ಗಂಟೆ ಮೊದಲೇ ವಿಮಾನ ಅಮೃತಸರ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು ಎಂದು ಪ್ರಯಾಣಿಕರು ದೂರಿದ್ದಾರೆ.
ಪ್ರಯಾಣಿಕರ ದೂರಿನ ಮೇಲೆ ಸ್ಕೂಟ್ ಏರ್ ಲೈನ್ಸ್ ವಿರುದ್ಧ ತನಿಖೆಗೆ ಡಿಜಿಸಿಎ ಆದೇಶ ನೀಡಿದೆ.
Related Articles
ಇದಕ್ಕೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ವಿಮಾನದ ಸಮಯ ಬದಲಾವಣೆ ಮಾಡಲಾಗಿತ್ತು ಹಾಗಾಗಿ ಸಂಜೆ 7.55 ನಿಮಿಷಕ್ಕೆ ಹೊರಡಬೇಕಿದ್ದ ವಿಮಾನ ಮಧ್ಯಾಹ್ನ 3.45 ನಿಮಿಷಕ್ಕೆ ಅಮೃತಸರದಿಂದ ಸಿಂಗಾಪುರಕ್ಕೆ ಹಾರಾಟ ನಡೆಸಬೇಕಾಯಿತು ಕ್ಷಮೆ ಇರಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ರಾಜ್ಯ ಭೇಟಿ ಖೋಖೋ ಆಟದಂತಾಗಿದೆ : ಕುಮಾರಸ್ವಾಮಿ ಟೀಕೆ