Advertisement

ಸೂರ್ಯನ ಬೆಳಗಿಸುವ ಕಣ ಪತ್ತೆ! ಪ್ರೊಟೋನ್‌ಗಿಂತ 80 ಪಟ್ಟು ಹೆಚ್ಚು ದ್ರವ್ಯರಾಶಿ

08:01 PM Apr 08, 2022 | Team Udayavani |

ನ್ಯೂಯಾರ್ಕ್‌: ಸೂರ್ಯನು ಪ್ರಖರವಾಗಿ ಹೊಳೆಯುವಂತೆ ಮಾಡುವ ಕಣಗಳು ಯಾವುವು?

Advertisement

ಇಂಥದ್ದೊಂದು ಪ್ರಶ್ನೆಗೆ ಉತ್ತರಿಸುವ ನಿಟ್ಟಿನಲ್ಲಿ ಕಳೆದ ಒಂದು ದಶಕದಿಂದಲೂ ಭೌತ ವಿಜ್ಞಾನಿಗಳು ನಿರಂತರ ಅಧ್ಯಯನ ನಡೆಸುತ್ತಿದ್ದಾರೆ. ಈಗ ಅವರು ಮೂಲ ಕಣವೊಂದನ್ನು ಪತ್ತೆಹಚ್ಚಿದ್ದು, ಅದು ಈವರೆಗೆ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ದ್ರವ್ಯರಾಶಿಯನ್ನು ಹೊಂದಿರುವುದು ತಿಳಿದುಬಂದಿದೆ.

ವಿಜ್ಞಾನಿಗಳ ಈ ಅಂದಾಜು ನಿಜವೆಂದು ಸಾಬೀತಾದರೆ, ಈ ಆವಿಷ್ಕಾರವು ಭೌತ ಜಗತ್ತಿನ ಪ್ರಮುಖ ಮೈಲುಗಲ್ಲಾಗಲಿದೆ.

ಈ ಉಪ ಪರಮಾಣು ಕಣವನ್ನು “ಡಬ್ಲ್ಯು ಬೋಸನ್‌’ ಎಂದು ಕರೆಯುತ್ತಾರೆ. ಇದು ಪರಮಾಣುಗಳ ಕೇಂದ್ರಭಾಗದಲ್ಲಿನ ಬಲಿಷ್ಠ ಶಕ್ತಿಗೇ ಈ ಕಣವೇ ಕಾರಣ. ಇವುಗಳು ಒಂದೆರಡು ಕ್ಷಣ ಮಾತ್ರ ಅಸ್ತಿತ್ವದಲ್ಲಿದ್ದು, ಮರುಕ್ಷಣವೇ ಇತರೆ ಕಣಗಳಲ್ಲಿ ನಶಿಸಿಹೋಗುತ್ತವೆ ಎಂದು ಫ‌ರ್ಮಿಲ್ಯಾಬ್‌ ಕೊಲೈಡರ್‌ ಡಿಟೆಕ್ಟರ್‌(ಸಿಡಿಎಫ್)ನ ಭೌತವಿಜ್ಞಾನಿಗಳು ಹೇಳಿದ್ದಾರೆ.

ಈ ಕಣಗಳನ್ನು ಬಳಸಿಕೊಂಡು ನಮ್ಮ ಬ್ರಹ್ಮಾಂಡದ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

Advertisement

ಅಮೆರಿಕ ಸರ್ಕಾರದ ಫ‌ರ್ಮಿ ನ್ಯಾಷನಲ್‌ ಅಕ್ಸಲರೇಟರ್‌ ಲ್ಯಾಬ್‌ನ ಭೌತ ವಿಜ್ಞಾನಿಗಳು 10 ವರ್ಷಗಳಲ್ಲಿ ಇಂಥ ಕಣಗಳನ್ನು ಒಟ್ಟಾಗಿ ಸ್ಫೋಟಿಸಿ, 40 ಲಕ್ಷ ಡಬ್ಲ್ಯು ಬೋಸನ್‌ಗಳ ದ್ರವ್ಯರಾಶಿಯನ್ನು ಅಳತೆ ಮಾಡಿದ್ದಾರೆ.

ಡಬ್ಲ್ಯು ಬೋಸನ್ಸ್‌ ಎಂದರೆ ದುರ್ಬಲ ಪರಮಾಣುಶಕ್ತಿಯ ಕಣ. ಸೂರ್ಯನು ಬೆಳಗುವಂತೆ ಮಾಡುವ ಪರಮಾಣು ಪ್ರಕ್ರಿಯೆಗಳಿಗೆ ಈ ಕಣಗಳೇ ಕಾರಣ.

ವಿಜ್ಞಾನಿಗಳು ಡಬ್ಲ್ಯು ಬೋಸನ್‌ಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು 1985ರಿಂದ 2011ರವರೆಗೆ ಸಂಗ್ರಹಿಸಿದ್ದರು. ಅವುಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಿದ ಬಳಿಕವೇ ಫ‌ಲಿತಾಂಶವನ್ನು ಬಹಿರಂಗಪಡಿಲಾಗಿದೆ.
ಅದರಂತೆ, ಡಬ್ಲ್ಯು ಬೋಸನ್‌ನ ಒಟ್ಟು ದ್ರವ್ಯರಾಶಿಯು ಪ್ರೊಟೋನ್‌ನ ದ್ರವ್ಯರಾಶಿಯ 80 ಪಟ್ಟು ಹೆಚ್ಚು ಎನ್ನುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ ಎಂದು ಫ‌ರ್ಮಿಲ್ಯಾಬ್‌ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next