Advertisement

ತಿಗಣೆ ಬಾಧೆ ನಿಯಂತ್ರಣಕ್ಕೆ ವಿಜ್ಞಾನಿಗಳ ಸಲಹೆ

08:20 PM Jul 22, 2021 | Team Udayavani |

ಪುತ್ತೂರು: ಕಳೆದೆರಡು ವರ್ಷಗಳಿಂದ ಮಳೆಗಾಲದ ಪ್ರಾರಂಭದಲ್ಲಿ ಎಳೆ ಅಡಿಕೆ ವಿಪರೀತ ಉದುರುತ್ತಿದೆ ಎಂಬ ಕೃಷಿಕರ ಕೂಗು ಹೆಚ್ಚಾಗಿದ್ದು ಉದುರುವಿಕೆ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಹಲವು ಸೂಚನೆಗಳನ್ನು ನೀಡಿದೆ.

Advertisement

ಹಿಂಗಾರ ಒಣಗಿದ ರೋಗದಿಂದ ಪಾರಾದ ಎಳೆ ಅಡಿಕೆಗೆ ಮುಂದಿನ ಹಂತದಲ್ಲಿ ಕಾಡುವುದು ಪೆಂಟಟೊಮಿಡ್‌ ತಿಗಣೆ ಮತ್ತು ಪೆರಿಯಾಂತ್‌ ಮೈಟ್‌. ಇದನ್ನು ನಿರ್ವಹಣೆ ಮಾಡುವಲ್ಲಿ ಕೃಷಿಕರು ಹೈರಾಣಾಗಿದ್ದಾರೆ. ಬೇರೆ ಬೇರೆ ಸಮಯದಲ್ಲಿ ಹಿಂಗಾರ ಒಣಗುವ ರೋಗ, ಪೆಂಟಟೊಮಿಡ್‌ ತಿಗಣೆ ಮತ್ತು ಪೆರಿಯಾಂತ್‌ ಮೈಟ್‌ ಅಡಿಕೆಗೆ ಬಾಧಿಸುವ ಕಾರಣ, ಬೋಡೋì ಸಿಂಪಡಣೆಯೇ ಕಷ್ಟ ಎನ್ನುವ ಸ್ಥಿತಿ ಉಂಟಾಗಿದೆ.

ಕೀಟ ಬಾಧೆಯ ಲಕ್ಷಣ :

ಪೆಂಟಟೊಮಿಡ್‌ ತಿಗಣೆಗೆ ಉದ್ದನೆಯ ಚೂಪಾದ ಬಾಯಿಯ ಅಂಗವಿದ್ದು, ಅದನ್ನು ಹಿಂಗಾರ ಮತ್ತು ಎಳೆಕಾಯಿಗೆ ತೂರಿಸಿ ರಸ ಹೀರುತ್ತವೆ. ಮುಖ್ಯವಾಗಿ ತೊಟ್ಟಿನ ಕೆಳಭಾಗದಲ್ಲಿ. ಇದರಿಂದ ಕಾಯಿಯ ಟರ್ಗರ್‌ ಪ್ರಷರ್‌ ಕಡಿಮೆಯಾಗಿ ಎಳೆಕಾಯಿ ಉದುರುತ್ತದೆ. ಉದುರಿದ ಎಳೆಕಾಯಿಯ ತೊಟ್ಟಿನ ಕೆಳಭಾಗದಲ್ಲಿ ಸೂಜಿಯಿಂದ ಚುಚ್ಚಿದಂತಹ ಕಪ್ಪು ಚುಕ್ಕೆ ಈ ತಿಗಣೆಯ ಬಾಧೆಯನ್ನು ಸೂಚಿಸುವ ಲಕ್ಷಣ. ಇಂತಹ ಎಳೆಕಾಯಿಯನ್ನು ಕತ್ತರಿಸಿ ನೋಡಿದಾಗ ಕಪ್ಪು ಚುಕ್ಕೆಗೆ ಅನುಗುಣವಾಗಿ ಸಿಪ್ಪೆಯ ಒಳಬದಿಯಲ್ಲಿ ಮತ್ತು ಎಳೆ ಅಡಿಕೆಯಲ್ಲಿ ವರ್ಣ ಬದಲಾವಣೆ ಆಗಿರುವುದನ್ನು ಕಾಣಬಹುದು.

ನಿರ್ವಹಣೆ ಹೇಗೆ?:

  1. ಮುಂಗಾರು ಪೂರ್ವದಲ್ಲಿ ಮತ್ತು ಜೂನ್‌-ಜುಲೈ ತಿಂಗಳಲ್ಲಿ ಬಿದ್ದ ಕಾಯಿಗಳನ್ನು ಗಮನಿಸುತ್ತಿರುವುದು ಅತೀ ಮುಖ್ಯ. ಏಕೆಂದರೆ ತಿಗಣೆ ರಸಹೀರಿದ ಎಳೆಕಾಯಿಯು 2-3 ದಿನದಲ್ಲಿ ನೆಲಕ್ಕೆ ಉದುರುತ್ತದೆ ಮತ್ತು ಒಂದು ತಿಗಣೆ ದಿನಕ್ಕೆ ಒಂದೇ ಕಾಯಿಯಿಂದ ರಸ ಹೀರುತ್ತದೆ. ಹಾಗಾಗಿ ಬಿದ್ದ ಎಳೆಕಾಯಿಗಳನ್ನು ಗಮನಿಸಿ ಆ ಮರಕ್ಕೆ ಮತ್ತು ಸುತ್ತಮುತ್ತಲಿನ ಮರಗಳಿಗೆ ಔಷಧ ಸಿಂಪಡಣೆ ಒಳ್ಳೆಯದು.
  2. ನಾವು ಬೆಳೆಸುವ ಅಲಸಂಡೆ, ಬೆಂಡೆ ಕಾಯಿ, ಹಾಗಲಕಾಯಿ, ಕಾಯಿ ಮೆಣಸು, ತೊಂಡೆಕಾಯಿ, ಬೂದು ಕುಂಬಳಕಾಯಿ ಮುಂತಾದುವುಗಳಲ್ಲಿ ತಿಗಣೆಯು ಆಶ್ರಯ ಪಡೆಯುತ್ತವೆ. ಹಾಗಾಗಿ ಇಂತಹ ತರಕಾರಿಗಳಲ್ಲಿ ತಿಗಣೆಯನ್ನು ನಿಯಂತ್ರಣ ಮಾಡಬೇಕು.
  3. ಕಡಿಮೆ ಹಾನಿ ಇದ್ದಲ್ಲಿ, ಬೇವಿನ ಎಣ್ಣೆ (5 ಎಂಎಲ್‌ ಒಂದು ಲೀಟರ್‌ ನೀರಿಗೆ+ಸೋಪ್‌) ಸಿಂಪಡಣೆ ಮಾಡಬಹುದು. ಸಿಂಪಡಣೆ ಮಾಡುವಾಗ ಮರದ ಎಲ್ಲ ಗೊನೆಗಳು ಚೆನ್ನಾಗಿ ಒದ್ದೆ ಆಗಬೇಕು. ಏಕೆಂದರೆ ಈ ಕೀಟದ ಸಂತಾ ನೋತ್ಪತ್ತಿ ಗೊನೆಯಲ್ಲಿಯೇ ಆಗುತ್ತದೆ.
Advertisement

ಪೊಟಾಷ್‌(235-350 ಗ್ರಾಂ) ಬಳಕೆ ಮರದ ಸದೃಢ ಬೆಳವಣಿಗೆಗೆ ಬಹಳ ಮುಖ್ಯ. ಕೆಲವೊಮ್ಮೆ ಪೋಷಕಾಂಶ ಕೊರತೆ ಮತ್ತು ಪೆರಿಯಾಂತ್‌ ಮೈಟ್‌ ಬಾಧೆಯಿಂದ ಎಳೆಕಾಯಿ ಉದುರುತ್ತದೆ. ಹಾಗಾಗಿ ಎಳೆಕಾಯಿಯಲ್ಲಿ ಹಾನಿಯ ಲಕ್ಷಣ ಗಮನಿಸದೆ ಕೀಟನಾಶಕ ಸಿಂಪಡಣೆ ಮಾಡುವುದು ಸರಿಯಲ್ಲ. ಅಲ್ಲದೆ ಬೋರ್ಡೋ ಮಿಶ್ರಣದೊಂದಿಗೆ ಕೀಟನಾಶಕವನ್ನು ಸೇರಿಸಿ ಸಿಂಪಡಣೆ ಮಾಡುವುದು ಒಳ್ಳೆಯದಲ್ಲ.ಡಾ| ಭವಿಷ್ಯ, ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ

ಕೀಟದ ಬಾಧೆ ಹೆಚ್ಚಿದ್ದರೆ ಕ್ಲೋಥಯನಿಡಿನ್‌ Clothianidin 50WDG ಅನ್ನು ಒಂದು ಲೀಟರ್‌ ನೀರಿಗೆ 0.3ರಂತೆ ಹಾಕಿ ಸಿಂಪಡಣೆ ಮಾಡಬೇಕು. ಆದರೆ  ರಾಸಾಯನಿಕ ಕೀಟನಾಶಕವನ್ನು ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಸಿಂಪಡಣೆ ಮಾಡಬೇಕು.  –ಡಾ| ಶಿವಾಜಿ ತುಬೆ, ವಿಟ್ಲ ಸಿಪಿಸಿಆರ್‌ವಿಜ್ಞಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next