Advertisement

ಕರಿಚುಕ್ಕಿ-ಕೊಳೆ ರೋಗಗಳತ್ತ ವೈಜ್ಞಾನಿಕ ಸಂಶೋಧನೆ

06:30 PM Sep 08, 2022 | Nagendra Trasi |

ಸಾಗರ: ಸಾಗರ ಮತ್ತು ಹೊಸನಗರ ತಾಲೂಕಿನ ಅಡಕೆ ತೋಟಗಳಿಗೆ ಬಂದಿರುವ ಕರಿಚುಕ್ಕಿ ರೋಗ ಮತ್ತು ಮಲೆನಾಡಿನ ಅಡಕೆ ತೋಟಗಳನ್ನು ಬಾಧಿ ಸುತ್ತಿರುವ ಕೊಳೆ ರೋಗಕ್ಕೆ ಸಂಬಂಧಪಟ್ಟಂತೆ ವೈಜ್ಞಾನಿಕ ಸಂಶೋಧನೆ ನಡೆಸುವಂತೆ ಆಪ್ಸ್‌ಕೋಸ್‌ ವತಿಯಿಂದ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ| ಆರ್‌.ಸಿ. ಜಗದೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಆಪ್ಸ್‌ಕೋಸ್‌ಗೆ ಭೇಟಿ ನೀಡಿದ್ದ ಕುಲಪತಿಗಳಿಗೆ ನೀಡಿದ ಮನವಿಯಲ್ಲಿ ಸಾಗರ ಮತ್ತು ಹೊಸನಗರ ತಾಲೂಕಿನ ಅಡಕೆ ತೋಟಗಳಲ್ಲಿ ಎಲೆಚುಕ್ಕಿ, ಕರಿಚುಕ್ಕಿ ರೋಗ ಕಾಣಿಸಿಕೊಂಡು ಅಡಕೆ ಮರಗಳು ಒಣಗಿ ಹೋಗುತ್ತಿದೆ. ಅಡಕೆ ಬೆಳೆಗಾರರು ಕೃಷಿ ತಜ್ಞರು ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರದೆ ಉಲ್ಬಣಗೊಳ್ಳುತ್ತಿದೆ.

ತಕ್ಷಣ ವಿಶ್ವವಿದ್ಯಾಲಯದ ವಿಜ್ಞಾನಿಗಳು ತೋಟಕ್ಕೆ ಭೇಟಿ ನೀಡಿ ರೋಗದ ಕುರಿತು ಸಂಶೋಧನೆ ಮತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಲೆನಾಡಿನ ಸಾಗರ, ಸೊರಬ, ಹೊಸನಗರ ತಾಲೂಕಿನ ಎಲ್ಲ ಅಡಕೆ ತೋಟಗಳಿಗೂ ಕೊಳೆ ರೋಗ ಬಂದಿದೆ. ರೈತರು ವಿಜ್ಞಾನಿಗಳು ಸೂಚಿಸಿದ ಬೋಡೋì ದ್ರಾವಣ ಸಿಂಪಡಣೆ ಮಾಡಿದರೂ ಕೊಳೆರೋಗ ನಿಯಂತ್ರಣಕ್ಕೆ ಬರದೆ ಶೇ. 80ರಷ್ಟು ಅಡಕೆ ನಾಶವಾಗಿದೆ. ಈ ಎರಡೂ ರೋಗದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ರೈತರಿಗೆ ಆದ ನಷ್ಟದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಸೂಕ್ತ ಆರ್ಥಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಆಪ್ಸ್‌ಕೋಸ್‌ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ, ಭರತ್‌ ನಾಡಿಗ್‌, ವ್ಯವಸ್ಥಾಪಕ ಲಂಬೋದರ್‌ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next