Advertisement

ಕೃಷಿಯಲ್ಲಿ  ವೈಜ್ಞಾನಿಕ ಮಾದರಿ ಅನಿವಾರ್ಯ

02:52 PM Sep 24, 2022 | Team Udayavani |

ರಾಮನಗರ: ಹೈನುಗಾರಿಕೆ ಹಾಗೂ ಅಣಬೆ ಬೇಸಾಯ ಎರಡು ಸಹ ಲಾಭದಾಯಕ ಉದ್ಯಮಗಳಾಗಿದೆ. ಕೃಷಿಗೆ ಪೂರಕವಾದ ಚಟುವಟಿಕೆಗಳಾಗಿವೆ. ವ್ಯವಸಾಯದ ಜೊತೆಗೆ ಇಂತಹ ಉಪಕಸುಬುಗಳು ಆರ್ಥಿಕ ಮಟ್ಟವನ್ನು ಹೆಚ್ಚಿಸುವತ್ತ ಶ್ರಮಿಸುತ್ತಿವೆ. ಪರಂಪರೆಯಿಂದಲೂ ನಮ್ಮಲ್ಲಿ ಇಂತಹ ಉಪಕಸುಬುಗಳನ್ನು ಮಾಡುತ್ತಿದ್ದರು ವೈಜ್ಞಾನಿಕ ಮಾದರಿಯಲ್ಲಿ ಮಾಡುವುದು ಅನಿವಾರ್ಯವಾಗಿದೆ ಎಂದು ರಾಮನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ್‌ ಪ್ರಭು ಹೇಳಿದರು.

Advertisement

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ನಡೆದ ತರಬೇತಿ ಶಿಬಿರಗಳ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂತಹ ತರಬೇತಿಗಳ ಅವಶ್ಯವಿದೆ. ತರಬೇತಿ ನಂತರ ಈ ವಿಧಾನಗಳನ್ನು ಅಳವಡಿಸಿಕೊಂಡು ಆಧುನೀಕರಣದತ್ತ ಹೆಜ್ಜೆ ಹಾಕಬೇಕು ಎಂದರು.

ಎಲ್ಲಾ ಸೌಲಭ್ಯ ಬಳಸಿಕೊಳ್ಳಿ: ನಬಾರ್ಡ್‌ನ ಡಿಡಿಎಂ ಹರ್ಷಿತ ಮಾತನಾಡಿ, ನಮ್ಮ ನಬಾರ್ಡ್‌ ಇರುವುದೇ ಕೃಷಿ ಚಟುವಟಿಕೆಗಳ ಅಭಿವೃದ್ಧಿಗಾಗಿ, ನಬಾರ್ಡ್‌ನಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಗೆ ಪೂರಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ನಬಾರ್ಡ್‌, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಅಣಬೆ ಬೇಸಾಯ ಇಂತಹ ಎಲ್ಲಾ ಚಟುವಟಿಕೆಗಳಿಗೂ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡುತ್ತಿದೆ. ಆದರೆ, ನಮ್ಮ ರೈತರಿಗೆ ಇದರ ಮಾಹಿತಿಯ ಕೊರತೆಯಿದ್ದು, ಉತ್ತಮ ಮಾಹಿತಿ ಪಡೆದು ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಕೃಷಿ ಚಟುವಟಿಕೆ ನಾಶವಾಗದ ಉದ್ಯಮ: ಜೋಗರದೊಡ್ಡಿ ಕರಕುಶಲ ತರಬೇತಿ ಸಂಸ್ಥೆ ನಿರ್ದೇಶಕ ವಿಠ್ಠಲ್‌ ಗೌರಿ ಮಾತನಾಡಿ, ಎಂದಿಗೂ ನಾಶವಾಗದ ಉದ್ಯಮಗಳೆಂದರೆ ಅದು ಕೃಷಿ ಪೂರಕ ಚಟುವಟಿಕೆಗಳು. ಆಧುನಿಕ ಮಾದರಿಯಲ್ಲಿ ಇಂತಹ ಚಟುವಟಿಕೆ ಕೈಗೊಂಡು ಉತ್ತಮ ಲಾಭಗಳಿಸಿ ಎಂದು ಹಾರೈಸಿದರು.

ಜೀವನ ಮಟ್ಟ ಸುಧಾರಿಸಿಕೊಳ್ಳಿ: ಸಂಸ್ಥೆ ನಿರ್ದೇಶಕ ಸ್ವಾಮಿ.ಎಂ.ಎಸ್‌ ಮಾತನಾಡಿ, ತರಬೇತಿಯಲ್ಲಿ ಕಲಿತ ವಿಷಯಗಳನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ. ಬ್ಯಾಂಕಿನ ವಿಚಾರವಾಗಿ ಪೂರ್ವಗ್ರಹಪೀಡಿತರಾಗಬಾರದು. ಕಲ್ಪನೆಗಿಂತ ವಾಸ್ತವದ ಅನುಭವವಾಗಬೇಕು. ತಮ್ಮೆಲ್ಲರಿಗೂ ಸಂಸ್ಥೆ ಸಹಕಾರ ಯಾವಾಗಲೂ ಇರುತ್ತದೆ. ಬ್ಯಾಂಕಿನಲ್ಲಿ ಲಭ್ಯವಿರುವ ವಿಮೆ ಯೋಜನೆಗಳನ್ನು ಸೂಕ್ತ ಸಮಯಕ್ಕೆ ಮಾಡಿಸಿ, ನಮ್ಮ ಅವಲಂಬಿತರಿಗೆ ನಮ್ಮಿಂದ ಒಂದು ಕೊಡುಗೆಯನ್ನು ಕೊಟ್ಟಂತಾಗುತ್ತದೆ. ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

Advertisement

ಸಂಸ್ಥೆಯ ಉಪನ್ಯಾಸಕರಾದ ದೇವೇಂದ್ರಪ್ಪ, ನೇತ್ರಾವತಿ, ಕನಕಾಂಬರಿ ಮಹಿಳಾ ಒಕ್ಕೂಟದ ಗಂಗಮ್ಮ, ಕವಿತ, ಕಾಂತಮ್ಮ ಧಾನ್‌ ಫೌಂಡೇಷನ್‌ನ ವರಲಕ್ಷ್ಮೀ, ಹುಲಿಬೆಲೆ ಹಾಲಿನ ಡೇರಿ ಸೆಕ್ರೆಟರಿ ಚಲುವರಾಜು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next