Advertisement

ಹಳೆಯದ್ದು ತೆರವು ಮಾಡಿ ಹೊಸ ಕಟ್ಟಡ ನಿರ್ಮಿಸಬೇಕಿದೆ

08:14 PM Sep 21, 2021 | Team Udayavani |

ತೆಕ್ಕಟ್ಟೆ:  ಕುಂದಾಪುರ ತಾಲೂಕಿನ ಹೆಸ್ಕಾತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1957ರಲ್ಲಿ ಆರಂಭಗೊಂಡಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ 2012-13ನೇ ಸಾಲಿನಲ್ಲಿ  ಪೈಲಟ್‌ ಅಧ್ಯಯನದಲ್ಲಿ “ಎ’ ಶ್ರೇಣಿ ಪಡೆದಿದ್ದು ರಾಜ್ಯಮಟ್ಟದಲ್ಲಿ 4ನೇ ಸ್ಥಾನ, ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿದೆ. ಹಲವು ಸವಾಲಿನ ನಡುವೆಯೂ ಕಳೆದ ಹಲವು ವರ್ಷಗಳಿಂದಲೂ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ.

Advertisement

ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಈ ಸರಕಾರಿ ಶಾಲೆಯಲ್ಲಿ  ಪ್ರಸ್ತುತ 241 ವಿದ್ಯಾರ್ಥಿಗಳಿದ್ದಾರೆ. 2021-22ನೇ ಶೈಕ್ಷಣಿಕ  ವರ್ಷದಲ್ಲಿ ಈಗಾಗಲೇ 1ನೇ ತರಗತಿಗೆ ಸುಮಾರು 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2ರಿಂದ 7ನೇ  ತರಗತಿಯಲ್ಲಿ ಸುಮಾರು 211 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಕಲಿಕೆಯನ್ನು ಪ್ರಯೋಗಾತ್ಮಕ ಹಾಗೂ ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ವಿಷಯ ವಾರು ತರಗತಿ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

ಕೊಠಡಿಯ ಕೊರತೆ:

ಸದ್ಯ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸೇರಿ 8 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯ ನಿಯಮದ ಪ್ರಕಾರ ಕನಿಷ್ಠ  9 ಶಿಕ್ಷಕರ ಆವಶ್ಯಕತೆಗಳಿರುವುದರಿಂದ ಓರ್ವ ಶಿಕ್ಷಕರ ಕೊರತೆ ಇದೆ. ಈಗಾಗಲೇ ಶಾಲಾ ಪರಿಸರದಲ್ಲಿಯೇ ಇರುವ ಹಳೆಯ ಕಟ್ಟಡವೊಂದು ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ ಕಳೆದ ಏಳೆಂಟು ವರ್ಷದಿಂದಲೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೂಕ್ತ ತರಗತಿ ಕೋಣೆಗಳಿಲ್ಲದೆ ಸಮಸ್ಯೆಯಾಗಿದೆ. ಶಾಲಾ ವೇದಿಕೆಯಲ್ಲಿ ತರಗತಿ ನಡೆಸುವುದು ಅನಿವಾರ್ಯವಾಗಿದೆ. ಶಾಲಾ ಪ್ರಾರಂಭವಾದಾಗ ಸುಮಾರು 130ಕ್ಕೂ  ಅಧಿಕ ವಿದ್ಯಾರ್ಥಿಗಳು 12 ಕಿ.ಮೀ. ದೂರದ ಗ್ರಾಮೀಣ ಪ್ರದೇಶ ದಿಂದ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ  ಶಾಲಾ ವಾಹನಗಳ ಕೊರತೆಯನ್ನು ಇಲಾಖೆ ನೀಗಿಸಬೇಕಿದೆ.

ಶಾಲಾ ವಾಹನಕ್ಕೆ ಬೇಡಿಕೆ :

Advertisement

ಸುಮಾರು 1.35 ಎಕರೆ ವಿಸ್ತೀರ್ಣದಲ್ಲಿರುವ ಈ ಶಿಕ್ಷಣ ಸಂಸ್ಥೆಗೆ ಯಡಾಡಿ ಮತ್ಯಾಡಿ, ಕೊಳ್ಕೆಬೈಲು, ಯಡ್ತಾಡಿ, ಬಿಲ್ಲಾಡಿ, ದೇಲಟ್ಟು, ಅಸೋಡು, ಜಪ್ತಿ ಸೇರಿದಂತೆ ಗ್ರಾಮೀಣ ಭಾಗಗಳಿಂದ  ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ.  ಆದರೆ  ಗ್ರಾಮಕ್ಕೆ ಸಮರ್ಪಕ ಬಸ್‌ ಸಂಪರ್ಕ ವ್ಯವಸ್ಥೆ ಇಲ್ಲದೆ ಇರುವ ಕಾರಣ

ಹೆತ್ತವರೇ ಮಕ್ಕಳನ್ನು ಶಾಲೆಗೆ ಕರೆ ತರಬೇಕಾಗಿದೆ. 2 ಶಾಲಾ ವಾಹನಗಳು ದೊರೆತರೆ ಶಾಲೆಗೆ ವಿದ್ಯಾರ್ಥಿಗಳಿಗೂ ಅನುಕೂಲವಾದೀತು. ಯೋಗ ಶಿಕ್ಷಣಕ್ಕೆ ಅನುಕೂಲಕರವಾಗುವಂತೆ ಒಳಾಂಗಣ ಸಭಾಂಗಣದ ಅಗತ್ಯವೂ ಇದೆ.

ಹೊಸ ಕಟ್ಟಡದ ಅಗತ್ಯ:

ಶಾಲೆಯಲ್ಲಿ ಮೂಲ ಅಗತ್ಯಗಳ ಈಡೇರಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿಯ ಸಮಸ್ಯೆಗಳಿದೆ. ಅಲ್ಲದೇ ಈಗಾಗಲೇ ಶಾಲಾ ಪರಿಸರದಲ್ಲಿ ಶಿಥಿಲಗೊಂಡ ಕಟ್ಟಡಗಳಿದ್ದು ಅದನ್ನು ತೆರವುಗೊಳಿಸಿ, ನೂತನ  ಕಟ್ಟಡ ನಿರ್ಮಾಣವಾಗಬೇಕಾದ ಅನಿವಾರ್ಯತೆ ಕೂಡಾ ಇದೆ.ಶೇಖರ್‌ ಕುಮಾರ್‌, ಮುಖ್ಯ ಶಿಕ್ಷಕರು

ಸುವ್ಯಸ್ಥಿತ ಮೈದಾನ ಅಗತ್ಯ: 

ಕನ್ನಡ ಶಾಲೆಯಾದರೂ ನ್ಪೋಕನ್‌ ಇಂಗ್ಲಿಷ್‌ ತರಗತಿಯ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಬಗ್ಗೆಯೂ ಅರಿವು ಮೂಡಿಸುತ್ತಿದೆ. ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗುರುಕುಲ ಮಾದರಿ ಕುಟೀರ ನಿರ್ಮಿಸಿ ಪಾಠೇತರ ಚಟುವಟಿಕೆಗಳಿಗೂ  ಅವಕಾಶ ಕಲ್ಪಿಸುವ ಯೋಜನೆ ಇದೆ. ಸುವ್ಯವಸ್ಥಿತ ಆಟದ ಮೈದಾನ ಹಾಗೂ ಸುತ್ತಲೂ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.ಕೃಷ್ಣ ಕೆದ್ಲಾಯ,  ಎಸ್‌ಡಿಎಂಸಿ.ಅಧ್ಯಕ್ಷರು,

 

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next