Advertisement

ಮೇ 15ರ ಬಳಿಕ ಶಾಲೆ ಆರಂಭ ಖಚಿತ: ಸಚಿವ ಬಿ.ಸಿ. ನಾಗೇಶ್‌

01:11 AM Apr 28, 2022 | Team Udayavani |

ಮಂಗಳೂರು: ಕೊರೊನಾ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದರೂ ಮೇ 15ರ ಬಳಿಕ ಶಾಲಾ ತರಗತಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

3ನೇ ಅಲೆಯ ಸಂದರ್ಭದಲ್ಲಿ ಆತಂಕ ಇದ್ದರೂ ಶಾಲೆಗಳನ್ನು ತೆರೆದು ತರಗತಿ ನಡೆಸಿದ್ದೇವೆ. ಶಿಕ್ಷಣದ ಗುಣಮಟ್ಟ ಹಾಗೂ ಕಲಿಕಾ ಚೇತರಿಕೆ ಆಗ ಬೇಕಾಗಿರುವುದರಿಂದ ಈಗ ತರಗತಿಗಳನ್ನು ಬೇಗನೆ ಆರಂಭಿಸುವುದು ಅಗತ್ಯ ಎಂದವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ಕಳುಹಿಸುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕರ್ನಾಟಕ ಶಿಕ್ಷಣ ಕಾಯಿದೆಯ ಪ್ರಕಾರ ನೋಂದಣಿ ಮಾಡಿರುವ ಶಾಲೆಗಳಲ್ಲಿ ಧರ್ಮಗಳ ಬೋಧನೆಗೆ ಅವಕಾಶವಿಲ್ಲ. ಬೈಬಲ್‌ ಮತ್ತು ಖುರಾನ್‌ ಧರ್ಮ ಗ್ರಂಥಗಳಾಗಿದ್ದು, ಅವುಗಳ ಬಗ್ಗೆ ಶಾಲೆಯಲ್ಲಿ ಬೋಧಿಸುವಂತಿಲ್ಲ. ಆದರೆ ಭಗವದ್ಗೀತೆ ಧರ್ಮ ಗ್ರಂಥವಲ್ಲ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next