Advertisement

ಸಮವಸ್ತ್ರ ಸಮಾಚಾರ: ನಿಮ್ಮ ಮಕ್ಕಳ ಯೂನಿಫಾರಂ ಎಲ್ಲಿಂದ ಬರುತ್ತೆ?

03:58 PM May 16, 2022 | Team Udayavani |

ಸಮವಸ್ತ್ರಧಾರಿ ಶಾಲಾ ಪುಟಾಣಿಗಳು ರಸ್ತೆ ಬದಿಯಲ್ಲಿ ಪುಟುಪುಟು ಹೆಜ್ಜೆ ಹಾಕಿನಡೆಯುವುದನ್ನುನೋಡುವುದೇ ಸೊಗಸು. ನಿತ್ಯಹರಿದ್ವರ್ಣದಂತೆಕಣ್ಣೆದುರು ನಿಲ್ಲುತ್ತಿದ್ದ ಈದೃಶ್ಯ ಕಳೆದರಡುವರ್ಷಗಳಲ್ಲಿ ತೀರಾಅಪರೂಪವಾಗಿತ್ತು.ಕೊರೊನಾ ಕಾರಣದಿಂದಮುಚ್ಚಿದ್ದ ಶಾಲೆಗಳು ತೆರೆದರೂ, ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ಸಮವಸ್ತ್ರವನ್ನು ಕಡ್ಡಾಯಮಾಡಿಕೊಂಡಿರಲಿಲ್ಲ. ಈ ಬಾರಿಕೊರೊನಾ ಭಯ ಅಷ್ಟಾಗಿ ಆವರಿಸಿಕೊಂಡಿಲ್ಲ. ಆದಾಗ್ಯೂ, ಮಕ್ಕಳ ಯೂನಿಫಾರಂಗೆ ಆದ್ಯತೆ ನೀಡಲು ಹಲವು ಶಾಲೆಗಳು ಹಿಂದೇಟು ಹಾಕುತ್ತಿವೆ. ಸಮವಸ್ತ್ರ ತಯಾರಕಾ ಘಟಕಗಳು ಮಾತ್ರಶಿಸ್ತಿನ ಉಡುಗೆ ಸಿದ್ಧಪಡಿಸಿಕೊಂಡು, ಮಕ್ಕಳಿಗಾಗಿ ಕಾಯುತ್ತಿವೆ. ನಮ್ಮ- ನಿಮ್ಮ ಮಕ್ಕಳು ತೊಡುವ ಯೂನಿಫಾರಂ ಎಲ್ಲಿಂದ ಬರುತ್ತೆ? ಕೊರೊನೋತ್ತರ ಕಾಲಘಟ್ಟದಲ್ಲಿ ಅದರ ಮಾರುಕಟ್ಟೆ ಹೇಗಿದೆ?- ಇದರ ಸುತ್ತ ಈ ವಾರದ “ಸುದ್ದಿಸುತ್ತಾಟ’ದ ನೋಟ…

Advertisement

ಕೊರೊನಾಕ್ಕೂ ಮೊದಲು ಆನ್‌ಲೈನ್‌ ತರಗತಿ ಎನ್ನುವ ವಿಚಾರ ಯಾರಿಗೂ ಪರಿಚಯ ಇದ್ದಿರಲಿಲ್ಲ. ಶಾಲೆಯಲ್ಲಿಕುಳಿತುಕೊಂಡು ಪಾಠ ಕೇಳುವುದೇಕಡ್ಡಾಯವಾಗಿತ್ತು. ಪ್ರತಿವರ್ಷ ಏನಿಲ್ಲವೆಂದರೂ60-70 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರಮಾಡಿಕೊಡಲು ನಮಗೆ ಆರ್ಡರ್‌ ಬರುತ್ತಿತ್ತು.ಆದರೆ, “ಈ ವರ್ಷ ಎಷ್ಟೋ ಶಾಲೆಗಳು ಇನ್ನೂಶಾಲೆಯನ್ನು ಸಂಪೂರ್ಣ ಸಾಮರ್ಥ್ಯದೊಂದಿಗೆ ನಡೆಸಲು ಮೀನಾಮೇಷ ಎಣಿಸುತ್ತಿವೆ. ಹಾಗಾಗಿಸಮವಸ್ತ್ರಗಳ ಬೇಡಿಕೆ ಭಾರೀ ಪ್ರಮಾಣದಲ್ಲಿಕುಸಿದಿದೆ. ನಮಗಿನ್ನೂ 20-30 ಸಾವಿರ ಸಮವಸ್ತ್ರಕ್ಕೆ ಆರ್ಡರ್‌ ಬಂದಿದೆಯಷ್ಟೇ’ ಅಂತಾರೆಬೆಂಗಳೂರಿನ ಸಮವಸ್ತ್ರ ತಯಾರಕರಾದ ಭೈರವೇಶ್ವರ ಗಾರ್ಮೆಂಟ್ಸ್‌ನ ಸಂದೇಶ್‌.

ತಡವಾಗಿ ಬರುತ್ತಿವೆ, ಆರ್ಡರ್‌ಗಳು :

ಶಾಲೆಗಳ ಆರಂಭ ಮೇ ಅಂತ್ಯದಲ್ಲಿಹೌದಾದರೂ, ಸಮವಸ್ತ್ರಗಳ ತಯಾರಿ ಜನವರಿಯಿಂದಲೇ ಶುರುವಾಗುತ್ತಿತ್ತು. ಪ್ರತಿ ಶಾಲೆಗಳು ತಮ್ಮ ವಿದ್ಯಾರ್ಥಿಗಳ ಲೆಕ್ಕಾಚಾರವನ್ನು ವರ್ಷಾರಂಭದಲ್ಲೇ ಕೊಟ್ಟು ಸಮವಸ್ತ್ರ ತಯಾರಿಸಿಕೊಳ್ಳುತ್ತಿದ್ದರು. ಜೂನ್‌ ಅಂತ್ಯದೊಳಗೆ ಎಲ್ಲ ಶಾಲೆಗಳಿಗೆ ಸಮವಸ್ತ್ರ ಹಂಚಿಕೆ ಮಾಡಿ ಮುಗಿಸಲಾಗುತ್ತಿತ್ತು. ಆದರೆ, ಈ ವರ್ಷ ಮೇ ಆರಂಭದವರೆಗೂ ಶಾಲೆಯ ಬಾಗಿಲು ತೆರೆಯುವ ಬಗ್ಗೆಯೇ ಅನುಮಾನವಿತ್ತು. ಕೊರೊನಾ 4ನೇ ಅಲೆಯಭಯವೂ ಇದ್ದಿದ್ದರಿಂದಾಗಿ ಶಾಲೆಗಳು ಆರ್ಡರ್‌ ಕೊಟ್ಟಿದ್ದೇ ತುಂಬಾ ತಡ. ಹಾಗಾಗಿ ಇನ್ನೂ ಕೆಲ ತಿಂಗಳ ಕಾಲ ಸಮವಸ್ತ್ರ ಉತ್ಪಾದನೆ ನಡೆಯುವ ಸಾಧ್ಯತೆ ಇದೆ ಎನ್ನುವುದು ಸಂದೇಶ್‌ ಅಭಿಪ್ರಾಯ.

Advertisement

ಬೆಲೆ ಏರಿಕೆಯ ಪೆಟ್ಟು : ಬೇರೆ ಎಲ್ಲ ಕ್ಷೇತ್ರಗಳಿಗೆ ಬೆಲೆ ಏರಿಕೆಯ ಪೆಟ್ಟುಬಿದ್ದಿರುವಂತೆಯೇ ಸಮವಸ್ತ್ರಗಳಿಗೂ ಬೆಲೆಏರಿಕೆಯ ಬಿಸಿ ತಾಗಿದೆ. ಪ್ರತಿವರ್ಷ ಪೋಷಕರುಒಬ್ಬ ವಿದ್ಯಾರ್ಥಿಗೆ 3 ಜೊತೆ ಸಮವಸ್ತ್ರಕ್ಕೆ ಆರ್ಡರ್‌ಕೊಡುತ್ತಿದ್ದರು. ಆದರೆ ಈ ವರ್ಷ ಅದು 2 ಅಥವಾ ಒಂದು ಜೊತೆಗೆ ಇಳಿದಿದೆ. ಕಾರಣ ಬೆಲೆ ಏರಿಕೆ. ಮೊದಲೆಲ್ಲ 60-70 ರೂಪಾಯಿಗೆ

ಒಂದು ಮೀಟರ್‌ ಸಮವಸ್ತ್ರದ ಬಟ್ಟೆ ಸಿಗುತ್ತಿತ್ತು. ಆದರೆ, ಈಗ ಆ ಬೆಲೆ 120 ರೂಪಾಯಿಗೆ ಏರಿದೆ.ಒಂದೇ ಸಲಕ್ಕೆ ಶೇ.50ರಷ್ಟು ಬೆಲೆ ಏರಿಕೆಯಾಗಿದೆ.ಹಾಗಾಗಿ ಉತ್ಪಾದಕರಿಗೆ ಸಮವಸ್ತ್ರಗಳ ಬೆಲೆ ಏರಿಕೆಮಾಡದೆ ಬೇರೆ ದಾರಿಯಿಲ್ಲ. ಬೆಲೆ ಏರಿಸಿದ್ದರಿಂದಾಗಿ ಪೋಷಕರು ಸಮವಸ್ತ್ರ ಕೊಳ್ಳುವುದಕ್ಕೂ ಹಿಂದೇಟು ಹಾಕಲಾರಂಭಿಸಿದ್ದಾರೆ.

ಹೊಸ ವಿದ್ಯಾರ್ಥಿಗಳೇ ಹೆಚ್ಚು : ಪ್ರತಿವರ್ಷವೂ ಹೆಚ್ಚು ಬೇಡಿಕೆ ಬರುವುದುಈಗ ತಾನೆ ಶಾಲೆ ಸೇರಿದ ಹೊಸ ವಿದ್ಯಾರ್ಥಿಗಳ ಸಮವಸ್ತ್ರಕ್ಕೇ. ಹಳೇ ವಿದ್ಯಾರ್ಥಿಗಳು ಮತ್ತೆ ಹಳೇ ಸಮವಸ್ತ್ರವನ್ನು ಮರುಬಳಸುವುದರಿಂದ ಅದಕ್ಕೆ ಬೇಡಿಕೆ ಕಡಿಮೆ. ಈ ವರ್ಷವೂ ಶಾಲೆಗೆ ನೋಂದಣಿ ಆಗಿರುವ ವಿದ್ಯಾರ್ಥಿಗಳ ಸಮವಸ್ತ್ರ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ.

ಒಂದು ಸಮವಸ್ತ್ರದ ಬಜೆಟ್‌ :

ಒಂದೇ ರೀತಿಯ ಸಮವಸ್ತ್ರಗಳನ್ನು ಹಲವು ಗುಣಮಟ್ಟಗಳಲ್ಲಿ ತಯಾರಿಸಲಾಗುವುದು.ಪ್ರತಿಷ್ಠಿತ ಶಾಲೆಗಳು ಹೆಚ್ಚು ಖರ್ಚಾದರೂ ಉತ್ತಮಗುಣಮಟ್ಟ ಬೇಕೆಂದು ಹೇಳಿದರೆ ಕೆಲವು ಶಾಲೆಗಳುಖರ್ಚು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕುತ್ತವೆ. ಸಮವಸ್ತ್ರಗಳ ಬೆಲೆ 600ರಿಂದ 1300 ರೂ.ವರೆಗೂ ಇದೆ.

3 ನಿಮಿಷದಲ್ಲಿ 1 ಯೂನಿಫಾರಂ ರೆಡಿ! :  ಸಮವಸ್ತ್ರ ತಯಾರಿಕೆಗೆ ಬೇಕಾಗುವ ಸಮಯವು ಆಯಾ ಸಿಬ್ಬಂದಿ ಬ್ಯಾಚ್‌, ಅವರ ಸಂಖ್ಯಾಬಲ ಮತ್ತುಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.ಸರಾಸರಿಯಾಗಿ ಲೆಕ್ಕ ಹಾಕಿದರೆ ಒಂದು ಸಮವಸ್ತ್ರ ತಯಾರಾಗುವುದಕ್ಕೆ 3 ಗಂಟೆ ಸಮಯ ಬೇಕಾಗುತ್ತದೆ.ನಿಮಿಷಕ್ಕೆ ಒಂದು ಸಮವಸ್ತ್ರದ ಚಡ್ಡಿ ತಯಾರಿಸಿಕೊಡುವಸಾಮರ್ಥ್ಯವೂ ಬ್ಯಾಚ್‌ಗಳಿಗಿದೆ. ಹಾಗೆಯೇ ಗಂಟೆಗೆ 150ಸಮವಸ್ತ್ರಗಳನ್ನು ತಯಾರಿಸಿಕೊಡುವ ಸಾಮರ್ಥ್ಯವೂಅವರಿಗುಂಟು. 200 ಸಿಬ್ಬಂದಿ ಇರುವ ಘಟಕದಲ್ಲಿ ದಿನಕ್ಕೆ ಏನಿಲ್ಲವೆಂದರೂ 1,500-2,000 ಜೊತೆ ಸಮವಸ್ತ್ರಗಳನ್ನು ಸಿದ್ಧಪಡಿಸಲಾಗುತ್ತದೆ.

ಬಟ್ಟೆ ಎಲ್ಲಿಂದ ಬರುತ್ತೆ? :

ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಬಹುತೇಕ ಸಮವಸ್ತ್ರ ತಯಾರಕರು ಬಟ್ಟೆಗಾಗಿ ಏಜೆನ್ಸಿಗಳನ್ನು ಅವಲಂಬಿಸಿವೆ. ನಮ್ಮ ಬೆಂಗಳೂರಿನ ವಿದ್ಯಾರ್ಥಿಗಳು ಧರಿಸುವ ಯಾವಸಮವಸ್ತ್ರವೂ ಕರ್ನಾಟಕದ ಬಟ್ಟೆಯಿಂದಮಾಡಿದ್ದಲ್ಲ. ಕಾರಣ ಇಲ್ಲಿರುವ ಸೌಲಭ್ಯ ಮತ್ತು ಬಟ್ಟೆ ಕೊರತೆ. ಬಹುತೇಕ ಎಲ್ಲ ಸಮವಸ್ತ್ರಉತ್ಪಾದಕರೂ ಬಟ್ಟೆಗೆ ಗುಜರಾತ್‌ನಅಹಮದಾಬಾದ್‌, ಮಹಾರಾಷ್ಟ್ರದ ಮುಂಬೈ, ಪಂಜಾಬ್‌ನ ಲುಧಿಯಾನಾ ಮತ್ತು ತಮಿಳುನಾಡಿನ ಈರೋಡ್‌ ಮೇಲೆಅವಲಂಬಿತರಾಗಿದ್ದಾರೆ. ಅದರಲ್ಲೂ ಮುಂಬೈಮತ್ತು ಅಹಮದಾಬಾದ್‌ ಬಟ್ಟೆಯ ಅತ್ಯಂತದೊಡ್ಡ ಮೂಲಗಳೆನ್ನಬಹುದು. ಒಂದು ವೇಳೆಕರ್ನಾಟಕದಲ್ಲೇ ಬಟ್ಟೆ ಲಭ್ಯವಾದರೂ ಅದರವೆಚ್ಚ ಬೇರೆ ರಾಜ್ಯಗಳಿಂದ ತರಿಸಿಕೊಳ್ಳುವು  ದಕ್ಕಿಂತ ಹೆಚ್ಚಾಗುತ್ತದೆ ಎನ್ನುತ್ತಾರೆ ಸಮವಸ್ತ್ರ ಉತ್ಪಾದಕರು.

ಶಾಲಾ ವಾಹನ ಶುಲ್ಕ ಕೂಡ ಹೆಚ್ಚಳ? :

ಎರಡು ವರ್ಷಗಳ ನಂತರ ಶಾಲೆಗಳು ಆರಂಭವಾಗುತ್ತಿದ್ದು,ಖಾಸಗಿ ಶಾಲೆಗಳು ಅಗತ್ಯಮೂಲಸೌಕರ್ಯಗಳನ್ನು ಸಿದ್ಧತೆಮಾಡಿಕೊಂಡು ಶಾಲೆಗಳನ್ನುಆರಂಭಿಸುತ್ತಿವೆ. ಆದರೆ, ಈ ಬಾರಿ ಪೆಟ್ರೋಲ್‌ ಮತ್ತುಡೀಸೆಲ್‌ ದರ ಗಗನಕ್ಕೆ ಏರಿರುವಪರಿಣಾಮ, ಶಾಲಾ ವಾಹನದಶುಲ್ಕ ಪೋಷಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಲಿದೆ.

ಬಹುತೇಕ ಶಾಲೆಗಳು ಕೊರೊನಾ ಮೊದಲಿನ ದರಕ್ಕೂಪ್ರಸ್ತುತ ದರಕ್ಕೂ ಹೋಲಿಸಿದರೆ ದುಪ್ಪಟ್ಟು ಹೆಚ್ಚಳ ಮಾಡಿವೆ. 1ರಿಂದ 2 ಕಿ.ಮೀ. ವ್ಯಾಪ್ತಿಯಶಾಲಾ ವಾಹನಕ್ಕೂ 5 ರಿಂದ 6 ಸಾವಿರ ರೂ. ದರಗಳನ್ನು ನಿಗದಿ ಮಾಡಲಾಗಿದೆ.

ಎರಡು ವರ್ಷಗಳಿಂದ ವಾಹನಗಳು ನಿಂತಲ್ಲೇ ನಿಂತಿವೆ. ಚಾಲಕರಿಗೆ ವೇತನನೀಡಲಾಗಿದೆ. ವಾಹನದ ವಿಮೆಯನ್ನು ಪಾವತಿ ಮಾಡಿದ್ದೇವೆ. ಇದೀಗ ಡೀಸೆಲ್‌ ದರಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಈ ಎಲ್ಲಾಕಾರಣಗಳಿಂದ ಶಾಲಾ ವಾಹನದ ಶುಲ್ಕವನ್ನುಹೆಚ್ಚಳ ಮಾಡುವುದು ಅನಿವಾರ್ಯ.ಹಿಂದಿನ ವರ್ಷ 10 ಸಾವಿರ ರೂ. ದೊಳಗೆಮುಗಿಯುತ್ತಿದ್ದ ವಾಹನ ಶುಲ್ಕ ಈ ಬಾರಿದುಪ್ಪಟ್ಟಾಗುವ ಸಾಧ್ಯತೆಗಳಿವೆ. ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆಎನ್ನುತ್ತಾರೆ ಸಾಂದೀಪನಿ ಶಾಲೆ ಮುಖ್ಯಸ್ಥ ಲೋಕೇಶ್‌ ತಾಳಿಕಟ್ಟೆ.

ವಾಹನ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಹೆಚ್ಚಿನ ಮಕ್ಕಳನ್ನುತುಂಬುವಂತಿಲ್ಲ. ನಿಗದಿತ ಸೀಟುಗಳಷ್ಟೇಮಕ್ಕಳಿರಬೇಕು. ಶಾಲಾ ವಾಹನಕ್ಕೆ ಚಾಲಕರು ಮತ್ತು ಒಬ್ಬರು ಸಹಾಯಕರು ಇರಬೇಕು. ಅವರಿಗೂ ವೇತನ ನೀಡಬೇಕಿರುವುದರಿಂದ ಹೆಚ್ಚಳ ಮಾಡಲೇಬೇಕಿದೆ.

3-4 ಕಿ.ಮೀ. ಇದ್ದರೆ ಸೈಕಲ್‌ ಬೆಸ್ಟ್‌  : 5ನೇ ತರಗತಿ ಮೇಲ್ಪಟ್ಟ ಮಕ್ಕಳನ್ನು ಶಾಲಾವಾಹನದಲ್ಲಿ ಕಳುಹಿಸುವುದಕ್ಕಿಂತ ಸೈಕಲ್‌ ತೆಗೆದುಕೊಡುವುದು ಉತ್ತಮ. 3ರಿಂದ 4ಕಿ.ಮೀ. ವ್ಯಾಪ್ತಿಯಲ್ಲಿಶಾಲೆ ಇದ್ದರೆ ಮಕ್ಕಳುಸೈಕಲ್‌ನಲ್ಲಿಹೋಗುವುದರಿಂದಶಾಲಾ ವಾಹನದ ಶುಲ್ಕಉಳಿಯಲಿದೆ. ಮಕ್ಕಳ ಆರೋಗ್ಯ ಕೂಡಸದೃಢವಾಗಿರುತ್ತದೆ.ಮಧ್ಯಮ ವರ್ಗದಜನರು ಕೊರೊನಾದಿಂದ ಸಾಕಷ್ಟು ಆರ್ಥಿಕವಾಗಿಸಂಕಷ್ಟ ಎದುರಿಸುತ್ತಿದ್ದಾರೆ.

ಶಾಲಾ ಶುಲ್ಕವನ್ನು ಪಾವತಿಸಲುಹೆಣಗಾಣ ಡಬೇಕಿದೆ.ಇಂತಹದ್ದರಲ್ಲಿ ವಾಹನಶುಲ್ಕ ಹೆಚ್ಚಳಮಾಡುವುದು ಸರಿಯಲ್ಲ ಎನ್ನುತ್ತಾರೆ ಪೋಷಕ ಶಿವಕುಮಾರ್‌.

ಹಿಂದಿನ ವರ್ಷಕ್ಕಿಂತ ಒಂದು ಸಾವಿರಹೆಚ್ಚಳ ಮಾಡಿದರೆ ಪರವಾಗಿಲ್ಲ. ಆದರೆ,ದುಪ್ಪಟ್ಟು ಹೆಚ್ಚಳ ಮಾಡಿದರೆ ಹೇಗೆ? ಇದು ನ್ಯಾಯಯುತವಾಗಿಲ್ಲ. ಖಾಸಗಿಶಾಲೆಗಳು ಹಿಂದಿನ ಎರಡು ವರ್ಷದ ಹಣವನ್ನು ಈಗ ಸೇರಿಸಿ ಪಡೆಯಲು ಮುಂದಾಗಿವೆ.

 

ಟೈಮ್‌ಲೈನ್‌ :

  • ಗಾರ್ಮೆಂಟ್ಸ್‌ಗಳು, ಶಾಲೆಗಳಿಂದ ಅಳತೆ ತೆಗೆದುಕೊಳ್ಳುತ್ತವೆ. ಫ್ಯಾಕ್ಟರಿಗೆ ದೊಡ್ಡ ಪ್ರಮಾಣದಲ್ಲಿ
  • ಬರುವ ಬಟ್ಟೆಯ ಬಂಡಾಲ್‌ಗ‌ಳನ್ನು ಮೊದಲ ಹಂತದಲ್ಲಿ ಕಟಿಂಗ್‌ಗೆ ಕಳುಹಿಸಿಕೊಟ್ಟು, ಅಳತೆಗೆ ತಕ್ಕಂತೆ ಮಾರ್ಕಿಂಗ್‌ ಮಾಡಿ,ಕಟಿಂಗ್‌ ಆದ ನಂತರ ಪ್ರತಿ ಭಾಗವನ್ನೂ ಹೊಲಿಯಲಾಗುತ್ತದೆ.
  • ಮೊದಲು ಪಾಕೆಟ್‌ ಹೊಲಿಯುವುದರಿಂದ ಶುರುವಾಗುವ ಕೆಲಸ, ಕಾಲರ್‌ ಹಾಕುವುದು, ಶೋಲ್ಡರ್‌ ಹಾಕುವುದು- ಹೀಗೆ ಅನೇಕ ಹಂತಗಳಲ್ಲಿ ಹೊಲಿಗೆಗೆ ಒಳಪಡುತ್ತದೆ. ಕೊನೆಯದಾಗಿ ಶರ್ಟಿನ ತುದಿಯನ್ನು ಹೊಲಿಯಲಾಗುತ್ತದೆ.
  • ಪೂರ್ತಿ ಹೊಲಿಗೆ ಮುಗಿಸಿದ ಸಮವಸ್ತ್ರವನ್ನು ಪರಿಶೀಲಿಸಲು ಇಬ್ಬರು ಅಧಿಕಾರಿಗಳಿರುತ್ತಾರೆ.
  • ಅಧಿಕಾರಿಗಳು ಪರಿಶೀಲಿಸಿ, ಸಮ್ಮತಿಸಿದ ಸಮವಸ್ತ್ರವನ್ನು ತೊಳೆಯುವ ವಿಭಾಗಕ್ಕೆ ಕಳುಹಿಸುತ್ತಾರೆ.
  • ಶುಚಿಗೊಂಡ ಯೂನಿಫಾರಂಗಳಿಗೆ ಇಸ್ತ್ರಿ ಮಾಡಲಾಗುತ್ತದೆ.
  • ಅಧಿಕಾರಿಗಳಿಂದ ಮತ್ತೆ ಪರಿಶೀಲನೆ. ತೇರ್ಗಡೆ ಹೊಂದಿದ ಸಮವಸ್ತ್ರ, ಪ್ಯಾಕಿಂಗ್‌ಗೆ ರವಾನೆ.
  • ಬಟ್ಟೆಯ ಅಳತೆ, ಇತರೆ ಎಲ್ಲ ಮಾಹಿತಿಯಿರುವ ಪ್ಯಾಕಿಂಗ್‌ ರೂಪದಲ್ಲಿ ಬರುವ ಸಮವಸ್ತ್ರಗಳಿಗೆ ಟೈ, ಬೆಲ್ಟ್, ಸಾಕ್ಸ್‌ಗಳನ್ನು ಸೇರಿಸಿ ಶಾಲೆಗಳಿಗೆ ಕಳುಹಿಸಲಾಗುತ್ತದೆ.
  • ಪೋಷಕರ ಕೈಸೇರುವ ಸಮವಸ್ತ್ರವನ್ನು ಪುಟಾಣಿ ಧರಿಸುತ್ತದೆ.

 

– ಮಂದಾರ ಸಾಗರ/ ಎನ್‌.ಎಲ್‌.ಶಿವಮಾದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next