Advertisement

ಶಾಲೆ ಪುನರಾರಂಭಿಸಲು ಅಭಿಪ್ರಾಯ ಸಂಗ್ರಹ

07:50 AM Jun 14, 2020 | Suhan S |

ಚಡಚಣ: ರಾಜ್ಯದಲ್ಲಿ ಶಾಲೆ-ಕಾಲೇಜುಗಳನ್ನು ಪುನರಾರಂಭಿಸುವ ವಿಚಾರದಲ್ಲಿ ಪಾಲಕರ ಅಭಿಪ್ರಾಯ ಪಡೆಯುವಂತೆ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಶಾಲೆಗಳನ್ನು ಪುನರಾರಂಭಿಸಲು ಎಸ್‌ಡಿಎಂಸಿ ಹಾಗೂ ಪಾಲಕರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ನಡೆಸುವಂತೆ ಶಾಲೆಗಳಿಗೆ ತಿಳಿಸಲಾಗಿತ್ತು.

Advertisement

ಈ ಹಿನ್ನೆಲೆಯಲ್ಲಿ ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಎಸ್‌ಡಿಎಂಸಿ ಹಾಗೂ ಪಾಲಕರ ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲೆಯ ಎಸ್‌ ಡಿಎಂಸಿ ಅಧ್ಯಕ್ಷ ಅಪ್ಪಾಸಾಬ ಆದಿಗೊಂಡೆಯವರು ವಹಿಸಿಕೊಂಡಿದ್ದರು. ಸಭೆಯಲ್ಲಿ ಚರ್ಚಿಸಿ ನಿರ್ಣಯ ತಗೆದುಕೊಳ್ಳಬಹುದಾದ ವಿಷಯಗಳ ಕುರಿತು ಎಸ್‌.ಆಯ್‌.ಕುಂಬಾರರವರು ತಿಳಿಸಿದರು. ಪ್ರಸ್ತುತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಂದಿನಂತೆ ತರಗತಿ ಆರಂಭಿಸುವುದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಾಳಿ ಪದ್ಧತಿಯಲ್ಲಿ ಶಾಲೆಗಳನ್ನು ನಡೆಸುವುದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಯ ಒಟ್ಟು ತರಗತಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ದಿನ ಬಿಟ್ಟು ದಿನ ಶಾಲೆ ನಡೆಸುವ ಬಗ್ಗೆ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ತಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪಾಲಕರ ಮತ್ತು ಎಸ್‌ಡಿಎಂಸಿಯವರುಗಳ ಅಭಿಪ್ರಾಯ ಸಂಗ್ರಹಿಸಲಾಯಿತು.

ಪ್ರೌಢ ಶಾಲೆಯ ಮುಖ್ಯಗುರು ವಿ.ಎಂ. ಮಾದರ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್‌.ಎಸ್‌.ಬಿಳೂರ, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಮದಗೊಂಡ ನಡಗೇರಿ, ಸೇಕವ್ವ ಹಾಲಳ್ಳಿ, ಭೀಮಣ್ಣಾ ಬಂಡಗರ, ಸಿದ್ದಪ್ಪ ಪೂಜಾರಿ, ಪ್ರಭುಲಿಂಗ ಮೇತ್ರೆ, ಮಲ್ಲು ಮಾನೆ, ಮಲ್ಲಿಕಾರ್ಜುನ ಮಳಾಬಗಿ, ಭೀರಪ್ಪ ಪಡೂಲ್ಕರ್‌ ಹಾಗೂ ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next