ಮಂಗಳೂರು/ಉಡುಪಿ: ಬೇಸಗೆ ರಜೆ ಮುಗಿಸಿ ಪುಟಾಣಿಗಳು ಬುಧವಾರ ಶಾಲೆಗೆ ಆಗಮಿಸಿದ್ದು, ಸಂಭ್ರಮ-ಸಡಗರದ ಶಾಲಾ ಪ್ರಾರಂಭೋತ್ಸವದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.
ಶಾಲಾ ಆವರಣ ತಳಿರು ತೋರಣಗಳಿಂದ ಅಲಂಕೃತವಾಗಿದ್ದರೆ, ಮಕ್ಕಳಿಗೆ ಉಡು ಗೊರೆ-ಸಿಹಿ ತಿನಿಸು ನೀಡಿ ಶಾಲೆಗೆ ಸ್ವಾಗತಿಸ ಲಾಯಿತು. ಹೊಸದಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಲಾಯಿತು.
ಜಿಲ್ಲೆಯ ವಿವಿಧ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿದರು. ದ.ಕ. ಡಿಡಿಪಿಐ ದಯಾನಂದ ನಾಯಕ್, ಬಿಇಒ ಸಹಿತ ಅಧಿಕಾರಿಗಳು ವಿವಿಧ ಶಾಲೆಗಳಿಗೆ ತೆರಳಿ ಪರಿಶೀಲಿಸಿದರು.
ದ.ಕ.ದಲ್ಲಿ ಮೊದಲ ದಿನ ಶೇ. 80ಕ್ಕೂ ಅಧಿಕ ಹಾಜರಾತಿಯಿತ್ತು. ಪಠ್ಯ ಪುಸ್ತಕ, ಸಮವಸ್ತ್ರ ಗಳನ್ನು ಬುಧವಾರವೇ ನೀಡಲಾಯಿತು.
Related Articles
ನೀರಿನ ಸಮಸ್ಯೆ ನಿವಾರಣೆ
ಉಡುಪಿ, ಬ್ರಹ್ಮಾವರ ಸಹಿತ ವಿವಿಧ ಶೈಕ್ಷಣಿಕ ವಲಯದ ಕೆಲವು ಶಾಲೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದರಿಂದ ಬಿಇಒ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿ, ನೀರಿನ ಸಮಸ್ಯೆ ಬಗೆಹರಿಸಿ ಕೊಂಡಿದ್ದಾರೆ. ನೀರು ಸರಬರಾಜು ಆಗುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಶಾಲೆಯಲ್ಲೂ ರಜೆ ಘೋಷಣೆ ಮಾಡಿಲ್ಲ.
ಇಂದು ಪಿಯು ತರಗತಿ ಆರಂಭ
ದ.ಕ. ಜಿಲ್ಲೆಯಲ್ಲಿ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ತರಗತಿಗಳು ಜೂ. 1ರಂದು ಆರಂಭವಾಗಲಿವೆ.