ಶಿವಮೊಗ್ಗ: ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಮಯದಲ್ಲಿ ಶಾಲೆ ಕಾಲೇಜುಗಳನ್ನೂ ಮುಚ್ಚುವಂತೆ ಸರ್ಕಾರ ಸೂಚಿಸಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಅಕ್ಷರ ಸ್ಕೂಲ್ ಮತ್ತು ಕಾಲೇಜು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಒಡೆತನದ ಅಕ್ಷರ ಸ್ಕೂಲ್ ಮತ್ತು ಕಾಲೇಜು ಇಂದೂ ತೆರೆದಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ಆಡಳಿತ ಪಕ್ಷದ ಶಾಸಕರ ಶಾಲೆಯಲ್ಲೇ ಕಿಮ್ಮತ್ತಿಲ್ಲ.
ಇದನ್ನೂ ಓದಿ:ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ದಂಡು: ಹುಂಡಿಯಲ್ಲಿ 500,1000 ಮುಖಬೆಲೆಯ ಹಳೆಯ ನೋಟುಗಳು
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಅಕ್ಷರ ಸ್ಕೂಲ್ ಮತ್ತು ಕಾಲೇಜಿನ ಆಡಳಿತ ಮಂಡಳಿಯು ಶಾಲಾ ಬಸ್ ಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದಿದೆ.