Advertisement

ಸ್ಕೂಲು ಮತ್ತು ಸವಾಲು

06:11 PM Sep 15, 2020 | Suhan S |

ಪ್ರತಿವರ್ಷವೂ ಈ ಸಮಯಕ್ಕೆ, ದಸರಾ ರಜೆ ಹತ್ತಿರದಲ್ಲೇ ಇದೆ ಎಂಬಖುಷಿಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಇರುತ್ತಿದ್ದರು. ಆದರೆ ಈಗ,ಕೋವಿಡ್ ಕಾರಣದಿಂದ ಶಾಲೆಗಳು ಆರಂಭವಾಗಿಯೇ ಇಲ್ಲ. ಕೆಲವರು, ಡಿಸೆಂಬರ್‌ವರೆಗೂ ಶಾಲೆ ಆರಂಭಿಸದೇ ಇರುವುದೇ ಒಳ್ಳೆಯದು ಅನ್ನುತ್ತಿದ್ದಾರೆ. ಅಂಥ ಮಾತುಗಳ ಮಧ್ಯೆಯೇ, ಹೈಸ್ಕೂಲ್‌ನಿಂದಕಾಲೇಜು ಓದುವ ಮಕ್ಕಳಿಗೆ ಸೆಪ್ಟೆಂಬರ್‌ 21 ರಿಂದ ಶಾಲೆ ಆರಂಭಿಸಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಹಾಗೇನಾದರೂ ಆದರೆ, ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಎದುರಿಸಬೇಕಾದ ಸವಾಲುಗಳು ಏನೇನು?

Advertisement

ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಪರಮೋಚ್ಚ ಗುರಿ. ಆದರೆ ಕೋವಿಡ್ ಮಹಾಮಾರಿ ಎಲ್ಲೆಡೆ ಆವರಿಸಿರುವ ಈ ಸಂದರ್ಭದಲ್ಲಿ, ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ, ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈಗ ಅದೇ ಒಂದು ಕೊರಗಾಗಿ, ಸಮಸ್ಯೆಯಾಗಿ ಕಾಣತೊಡಗಿದೆ. ಕೋವಿಡ್ ಸೋಂಕು ಮಕ್ಕಳಿಗೆ ತಗುಲಿದರೆ ಗತಿಯೇನು ಎಂದು ಯೋಚಿಸಿ, ಶಾಲೆಗಳನ್ನು ಮುಚ್ಚಿದ್ದಾಯಿತು. ಎಷ್ಟು ದಿನಗಳ ಕಾಲ ಹಾಗೇ ಇರಲು ಸಾಧ್ಯ? ದೀರ್ಘ‌ ಅವಧಿಯ ರಜೆಯಿಂದ ಮಕ್ಕಳು ಓದಿನಿಂದ ವಿಮುಖರಾಗಬಹುದು ಎಂದು ಯೋಚಿಸಿ ಆನ್‌ ಲೈನ್‌ ಮೂಲಕ ಪಾಠ ಮಾಡಲುಕೆಲವು ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

ನಗರ ಪ್ರದೇಶದ ಮಕ್ಕಳು ಈಗ ದಿನವೂ ಬೆಳಗ್ಗೆ ಶಾಲೆಯ ಸಮವಸ್ತ್ರ ಧರಿಸಿ ಲ್ಯಾಪ್‌ಟಾಪ್‌ ಮುಂದೆಕೂತು ಪಾಠಕೇಳುವುದುಕಡ್ಡಾಯಕೂಡಆಗಿದೆ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಕಾರಣ ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ಮೂಲಕ ಪಾಠ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ, ಹಳ್ಳಿಗಳಲ್ಲಿನ ಅದೆಷ್ಟೋ ಜನರು ಸ್ಮಾರ್ಟ್‌ಫೋನ್‌ ಖರೀದಿಸುವಷ್ಟು ಸಿರಿವಂತರೂ ಆಗಿಲ್ಲ. ಇಷ್ಟಲ್ಲದೆ, ಈಗಾಗಲೇನಡೆದಿರುವ ಮತ್ತು ನಡೆಯುತ್ತಿರುವ ಆನ್‌ ಲೈನ್‌ ಪಾಠ, ತರಗತಿ ಕೋಣೆಯಲ್ಲಿನ ಬೋಧನೆಯಷ್ಟು ಪರಿಣಾಮಕಾರಿಯೂ ಆಗಿಲ್ಲ. ಶಿಕ್ಷಕರು, ಪೋಷಕರು, ಇತರ ಸಿಬ್ಬಂದಿ ವರ್ಗದವರು ಈ ಸಮಯ ದಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಸದ್ಯ, ಈ ಕೋವಿಡ್  ಕಾಟ ತಪ್ಪಿದರೆ ಸಾಕಲ್ಲಪ್ಪ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಸೆಪ್ಟೆಂಬರ್‌21ರಿಂದ ಹೈಸ್ಕೂಲ್‌ ಮತ್ತುಕಾಲೇಜು ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಲಾಗುವುದು ಎಂಬ ಸುದ್ದಿಕೇಳಿಬರುತ್ತಿದೆ. ಒಂದೊಮ್ಮೆ ಹಾಗೇನಾದರೂ ಆದರೆ, ಅದರ ಬೆನ್ನಿಗೇ ಮನೆಯಲ್ಲಿರುವ ಮಕ್ಕಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡುವುದುಕಡ್ಡಾಯ ಆಗಲಿ, ದೊಡ್ಡ ಮಕ್ಕಳು ಶಾಲೆಯಲ್ಲಿ, ಚಿಕ್ಕ ಮಕ್ಕಳು ಮನೆಯಲ್ಲಿ ಪಾಠಕಲಿಯಲಿ ಎಂಬ ಕೂಗೂ ಹಲವರಿಂದ ಬರಬಹುದು. ಅಂತ ಸಂದರ್ಭವೇನಾದರೂ ಬಂದರೆ, ಅದರಿಂದಕಷ್ಟ ಆಗುವುದು ಪೋಷಕರಿಗೆ. ಹೇಗೆಂದರೆ, ಒಂದು ಚಿಕ್ಕ ಮಗು, ಒಂದು ದೊಡ್ಡ ಮಗುವನ್ನು ಹೊಂದಿದ ಪೋಷಕರು, ಶಾಲೆಗೆ ಹೋಗುವ ಮಗುವಿನಕಡೆ ಗಮನಕೊಡಬೇಕೋ ಅಥವಾ ಮನೆಯಲ್ಲಿಯೇ ಇರುವ ಮಗುವಿಗೆ ಪ್ರಾಶಸ್ತ್ಯ ಕೊಡಬೇಕೋ ಗೊತ್ತಾಗದೆಕಂಗಾಲಾಗುವ ಹಾಗೆ ಆಗುವ ಸಾಧ್ಯತೆಗಳಿವೆ. ಹಾಗಾಗಿಬಿಟ್ಟರೆ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತುಪೋಷಕರು- ಕೆಲವು ದಿನಗಳ ಮಟ್ಟಿಗಾದರೂ ಗೊಂದಲ ಮತ್ತು ಸವಾಲುಗಳ ಮಧ್ಯೆ ಒದ್ದಾಡುವುದು ಗ್ಯಾರಂಟಿ.­

ಶಿಕ್ಷಕರಿಗೆ ಇರುವ ಸವಾಲುಗಳು :

  • ಶಾಲೆಗಳಿಗೆ ಹೋಗಿ ಬರಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದು.
  • ಕೆಲವುಕಡೆಗಳಲ್ಲಿ ಕೋವಿಡ್ ಕಾರಣಕ್ಕೆ ಬಸ್‌ಗಳೇ ರದ್ದಾಗಿವೆ.
  • ಹಾಗಾಗಿ, ಬಸ್‌ಗಳನ್ನೇ ನಂಬಿ ಗ್ರಾಮಾಂತರ ಪ್ರದೇಶದ ಶಾಲೆಗೇ ಹೋಗುವ ಶಿಕ್ಷಕರು ಸಹಜವಾಗಿಯೇ ಪರದಾಡಬೇಕಾಗುತ್ತದೆ.
  • ಐವತ್ತು ದಾಟಿದವರು, ನಿವೃತ್ತಿ ಅಂಚಿನಲ್ಲಿರುವವರಿಗೆ ಸೋಂಕು ತಾಕೀತೆಂಬ ಆತಂಕ.
  • ಸದಾ ಸಾಮಾಜಿಕ ಅಂತರಕಾಯ್ದುಕೊಂಡು ಬೋಧನೆ ಮಾಡುವುದು ಅಸಾಧ್ಯವಾಗಿರುವುದು.
  • ಆನ್‌ಲೈನ್‌ ಬೋಧನೆಯಲ್ಲಿ ನೆಟ್‌ವರ್ಕ್‌ ಮತ್ತು ಸಾಧನ ಸಲಕರಣೆಗಳ ಸಮಸ್ಯೆ.
  • ಈಗಾಗಲೇ ಹೆಚ್ಚಾಕಮ್ಮಿ ಅರ್ಧ ಶೈಕ್ಷಣಿಕ ವರ್ಷ ಕಳೆಯುತ್ತಿರುವುದರಿಂದ ಪೂರ್ಣ ಪ್ರಮಾಣದ ಬೋಧನೆ ಕಲಿಕೆಗೆ ತೊಡಕಾಗಿರುವುದು.
  • ಮಕ್ಕಳೊಂದಿಗಿನ ನಿರಂತರ ಸಂಪರ್ಕ ಕಡಿತಗೊಂಡಿರುವುದರಿಂದ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗಿನ ಸಹ ಸಂಬಂಧದಲ್ಲಿ ಬಿಸುಪಿಲ್ಲದಿರುವುದು.
  • ಶಾಲಾ ವಾತಾವರಣವನ್ನು ಬೇರೆ ಬೋಧನಾ ವಿಧಾನಗಳಲ್ಲಿ ಸಾಧಿಸಲು ಸಾಧ್ಯವಾಗದೇ ಇರುವುದು.
  • ಕೋವಿಡ್ ನಂತರದ ಅವಧಿಯಲ್ಲಿ ಕುಗ್ಗಿಹೋಗಿರುವ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ದಾರಿ ಗೊತ್ತಾಗದಿರುವುದು.
  • ಕೋವಿಡ್ ಅವಧಿಯಲ್ಲಿಕಲಿಸಬೇಕೆಂಬ ಇಚ್ಛೆಗಿಂತ ಸೋಂಕಿನ ಭಯದಲ್ಲಿ ನಲುಗುವಂತಾಗಿರುವುದು
Advertisement

ಪೋಷಕರ ಆತಂಕಗಳು :

  • ಸದಾ ಆಟದ ಬಗ್ಗೆಯೇಯೋಚಿಸುವುದು ಮಕ್ಕಳ ಗುಣ.
  • ಅಕಸ್ಮಾತ್‌ ಚಿಕ್ಕ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲಿದರೆ, ಅವರು ಬೇಗ ಚೇತರಿಸಿಕೊಳ್ಳರು ಮತ್ತು ಏನಾದರೂ ಅನಾಹುತವಾದರೆ ಗತಿಯೇನು ಎಂಬ ಭಯ.
  • ಸಾಮಾಜಿಕ ಅಂತರಕಾಯ್ದುಕೊಳ್ಳಲು ಮಕ್ಕಳಿಗೆ ಸಾಧ್ಯವಾಗದೇ ಇರುವುದು.
  • ತುಂಟ ಮಕ್ಕಳನ್ನು ಮನೆಯಲ್ಲಿ ಸುಧಾರಿಸಲೂ ಸಾಧ್ಯವಾಗುತ್ತಿಲ್ಲ, ಶಾಲೆಗೆಕಳಿಸಲೂ ಮನಸ್ಸಾಗುತ್ತಿಲ್ಲ ಎಂಬ ತ್ರಿಶಂಕು ಸ್ಥಿತಿ. ·
  • ಆನ್‌ಲೈನ್‌ ತರಗತಿಗಳಿಗೆ ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿಸಲು ಆರ್ಥಿಕ ಮುಗ್ಗಟ್ಟು.
  • ನಿತ್ಯ ಆನ್‌ಲೈನ್‌ ತರಗತಿಯ ನೆಪದಲ್ಲಿ ಮಕ್ಕಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ಮುಂದೆ ಗಂಟೆಗಟ್ಟಲೆಕೂರುವುದರಿಂದ ಆರೋಗ್ಯ ಕೆಡಬಹುದೆಂಬ ಆತಂಕ.
  • ಸ್ನೇಹಮಯ ವಾತಾವರಣಮಾಯವಾಗಿ ತಿಂಗಳುಗಳೇಕಳೆದಿರುವುದರಿಂದ ಮಕ್ಕಳು ಮಾನಸಿಕವಾಗಿಖನ್ನರಾಗು ತ್ತಿದ್ದಾರೆಂಬ ಹೊಸ ಸಮಸ್ಯೆ.
  • ಒಂದೊಮ್ಮೆ ಶಾಲೆಗಳು ಆರಂಭವಾದರೆ, ಆಗಲೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸುವುದುಕಡ್ಡಾಯ ಆಗುತ್ತದೆ. ಇವೆರಡರ ಅತಿಯಾದ ಬಳಕೆಯೇ ಮಕ್ಕಳ ಆರೋಗ್ಯಕ್ಕೆ ಮಾರಕವಾದರೆ ಗತಿಯೇನು?

 

– ಕಂಡಕ್ಟರ್‌ ಸೋಮು, ಎಡೆಯೂರು

Advertisement

Udayavani is now on Telegram. Click here to join our channel and stay updated with the latest news.

Next