Advertisement

ಮಳೆಗೆ ಕುಸಿದ ಶಾಲಾ ಕಾಂಪೌಂಡ್‌

07:33 AM Jul 09, 2019 | Team Udayavani |

ಧಾರವಾಡ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸತತ ಮೂರು ದಿನಗಳಿಂದ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಸೋಮವಾರ ಧಾರಾಕಾರ ಮಳೆ ಸುರಿದಿದೆ.

Advertisement

ಸಿದ್ದೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಗೋಡೆ ರವಿವಾರ ರಾತ್ರಿ ಕುಸಿದು ಬಿದ್ದಿದೆ. 1ರಿಂದ 7ನೇ ವರ್ಗದವರೆಗೆ ಇರುವ ಶಾಲೆಯಲ್ಲಿ 137 ಮಕ್ಕಳ ಹಾಜರಾತಿ ಇದ್ದು, ರಜೆ ದಿನ ಬಿದ್ದಿರುವ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸುದ್ದಿ ತಿಳಿದ ಕೂಡಲೇ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಖಾಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಕಾಂಪೌಂಡ್‌ ಗೋಡೆ ಹಾಗೂ ಕೊಠಡಿಗಳ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಶಾಲಾ ಪ್ರಧಾನ ಗುರುಗಳಿಗೆ ಸೂಚಿಸಿರುವ ಬಿಇಒ, ಯಾವುದೇ ಕಾರಣಕ್ಕೂ ದುರಸ್ತಿ ಇರುವ ಕೊಠಡಿಗಳ ಅಥವಾ ಗೋಡೆಗಳ ಬಳಿ ಮಕ್ಕಳನ್ನು ಕೂಡ್ರಿಸದಂತೆ ಸೂಚನೆ ನೀಡಿದ್ದಾರೆ.

ಸಂಚಾರ ಅಸ್ತವ್ಯಸ್ತ: ಸತತ ಮಳೆಯಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಶಿವಾಜಿ ಸರ್ಕಲ್ನಿಂದ ಮುರುಘಾ ಮಠದ ವರೆಗೆ ಸಂಚಾರದಲ್ಲಿ ತೊಂದರೆ ಉಂಟಾಗಿದೆ. ಈ ರಸ್ತೆಯಲ್ಲಿ ತಗ್ಗು-ಗುಂಡಿ ಹುಡುಕುವ ಬದಲಾಗಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವಂತಾಗಿದೆ. ಮಳೆ ನೀರಿನಿಂದ ಗುಂಡಿಗಳು ತುಂಬಿವೆ. ಬಸವೇಶ್ವರ ನಗರದ ಕೊಪ್ಪದಕೇರಿ ರಸ್ತೆಗಳು ಸೇರಿ ವಿವಿಧ ಕಾಲೋನಿಗಳ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಕಾರಣ ಸಂಚಾರದಲ್ಲಿ ತೊಂದರೆ ಆಗಿದೆ. ಇದರೊಂದಿಗೆ ಟೋಲ್ನಾಕಾ, ದೈವಜ್ಞ ಕಲ್ಯಾಣ ಮಂಟಪ, ಪಾಲಿಕೆ ವೃತ್ತದಲ್ಲಿಯೂ ಸಂಚಾರದಲ್ಲಿ ತೊಂದರೆ ಉಂಟಾಗುತ್ತಲಿದೆ. ಅದರಲ್ಲೂ ಟೋಲ್ನಾಕಾ ಬಳಿ ಮಳೆ ನೀರು ಕೆರೆಯಂತೆ ರಸ್ತೆಯಲ್ಲಿ ತುಂಬಿದ್ದು, ಸಂಚಾರದಲ್ಲಿ ಸಾಕಷ್ಟು ತಾಪತ್ರಯ ಉಂಟಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next