Advertisement
ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಶಾಲೆಗಳ ಜತೆಗೆ ಕಳಪೆ ಸಾಧನೆಯ ಶಾಲೆಗಳ ಪಟ್ಟಿ ಸಿದ್ಧಪಡಿಸಲಿದ್ದು ಆ ಶಾಲೆಗಳ ಸುಧಾರಣೆಗೆ ಅಧ್ಯಯನ ನಡೆಸಿ ರೂಪು-ರೇಷೆ ರಚಿಸುವುದು ಇದರ ಉದ್ದೇಶವಾಗಿದೆ.
Related Articles
Advertisement
ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು, ಪ್ರಾಂಶುಪಾಲರು ಶಾಲೆಗಳಿಗೆ ಆದ್ಯತೆ ಮೇರೆಗೆ ಭೇಟಿ ನೀಡಿ, ಗುಣಮಟ್ಟ ಸುಧಾರಣೆಗೆ ಮಾರ್ಗದರ್ಶನ ನೀಡಬೇಕು. ಜಿಲ್ಲಾ ಮಟ್ಟದ ಅತ್ಯುತ್ತವಾಗಿ ಕಾರ್ಯನಿರ್ವಹಿಸುವ ಶಿಕ್ಷಕರು, ಶಾಲೆಗಳನ್ನು ಗುರುತಿಸಿ ಶಾಲಾ ನಾಯಕತ್ವ ಪರಿಚಯಿಸುವ ಹೊಸ ಆಯಾಮಗಳನ್ನು ಅವರಿಂದ ಪಡೆಯುವುದು. ಜಿಲ್ಲೆಗೆ ಕನಿಷ್ಠ ಒಂದು ಅತ್ಯುತ್ತಮ ಸರ್ಕಾರಿ ಶಾಲೆಯ ಅಧ್ಯಯನ ವರದಿ ರಾಜ್ಯದ ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ವಿಭಿನ್ನ ಪ್ರಯೋಗ :ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸುವ ಜತೆಗೆ ಮಕ್ಕಳು ಉಲ್ಲಾಸದಾಯಕವಾಗಿ ಕಲಿಯಲು ಪ್ರೇರಣೆ ನೀಡುವ ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಈ ರೀತಿಯ ವಿಭಿನ್ನ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿ ಶೈಕ್ಷಣಿಕ ವಲಯದ ಅತ್ಯುತ್ತಮ, ಎರಡು ಶಾಲೆಗಳ ಯಶಸ್ವಿ ಕಥನಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಯನ ರೂಪದಲ್ಲಿ ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಜಿಲ್ಲಾ ಉಪನಿರ್ದೇಶಕರು ಅದನ್ನು ರಾಜ್ಯಕ್ಕೆ ಸಲ್ಲಿಸುತ್ತಾರೆ. ನಂತರ ಅದನ್ನು ಇ-ಪೋರ್ಟಲ್‌ಗೆ ಅಪ್‌ಲೋಡ್‌ಮಾಡಲಾಗುತ್ತದೆ. ರಾಷ್ಟ್ರಮಟ್ಟದ ಶಾಲಾ ನಾಯಕತ್ವ ಸಮಾವೇಶದಲ್ಲಿ ಯಶೋಗಾಥೆಯನ್ನು ಹಂಚಿಕೊಳ್ಳಾಗುತ್ತದೆ ಎಂದು ಸರ್ವ ಶಿಕ್ಷಾ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅತ್ಯುತ್ತಮ ಶಾಲೆಯ ಯಶಸ್ವಿನ ಕಥನ(ಕೇಸ್‌ಸ್ಟಡೀ) ಸಿದ್ಧಪಡಿಸುವವರೇ ಅದಕ್ಕೆ ಶಿರ್ಷೀಕೆ ನೀಡಬೇಕು. ಬರಹಗಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಕೂಡ ನಮೂದಿಸಬೇಕು. ಶಾಲೆಯ ಸಂಕ್ಷಿಪ್ತ ಚಿತ್ರಣ, ಶಾಲೆಯ ಪ್ರಸ್ತುತ ಸನ್ನಿವೇಶ, ಸೌಲಭ್ಯ ಮತ್ತು ಕೊರತೆ, ಸವಾಲು, ಸಂದಿಗ್ಧತೆ, ಕ್ರಿಯಾಯೋಜನೆ, ಕಾರ್ಯತಂತ್ರ, ಫಲಗಳು, ಕಲಿಕೆಯಲ್ಲಿ ಬದಲಾವಣೆ ತರಲು ತೆಗೆದುಕೊಂಡ ಕ್ರಮ, ಶಾಲಾ ನಾಯಕತ್ವದ ಪಾತ್ರ, ಬದಲಾವಣೆಯ ಸಿದ್ಧಾಂತ, ಬದಲಾವಣೆಗೆ ಅನುಸರಿಸಿದ ತಂತ್ರ ಮತ್ತು ಮಂತ್ರ ಕೇಸ್ ಸ್ಟಡೀ ಒಳಗೊಂಡಿರಬೇಕು. – ರಾಜು ಖಾರ್ವಿ ಕೊಡೇರಿ