Advertisement

ಶಾಲಾ ಬ್ಯಾಗ್‌ ಭಾರ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

11:49 PM Sep 22, 2022 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್‌ ಭಾರ ಕಡಿಮೆ ಮಾಡಲು ಸರಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ತುಮಕೂರಿನ ವಕೀಲ ರಮೇಶ್‌ ನಾಯಕ್‌ ಎಲ್‌.  ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

Advertisement

ರಾಜ್ಯದಲ್ಲಿ  ಶಾಲಾ ಆಡಳಿತಕ್ಕೆ ಸಂಬಂಧಿಸಿ  ಹಲವು ಕಾನೂನು, ನಿಯಮಗಳಿವೆ. ಸರ್ಕಾರ ಸಹ ಕಾಲಕಾಲಕ್ಕೆ ಅಧಿಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ ಶಾಲಾ ಬ್ಯಾಗ್‌ ಸಂಬಂಧ ಯಾವುದೇ ನಿರ್ದಿಷ್ಟ  ನಿಯಮವಿಲ್ಲ. 2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್‌ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕ ಮಂಡಿಸಲಾಗಿತ್ತು, ಆದರೆ ನಂತರ ಅದನ್ನು ಅಲ್ಲಿಗೆ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆದರೆ ಕೇಂದ್ರ ಸರ್ಕಾರ ಶಾಲಾ ಬ್ಯಾಗ್‌ ನೀತಿ 2020ಯಲ್ಲಿ ಮಕ್ಕಳ ಬ್ಯಾಗ್‌ ತೂಕದ ಮಿತಿ ಇಷ್ಟೇ ಇರಬೇಕೆಂದು ನಿಯಮವಿದೆ. ಆದರೆ ಆದು ಪಾಲನೆಯಾಗುತ್ತಿಲ್ಲ. ನಗರ/ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಅಧಿಕ ತೂಕದ ಬ್ಯಾಗ್‌ಗಳನ್ನು ಹೊತ್ತು ಪ್ರತಿದಿನವೂ ಶಾಲೆಗೆ ಹೋಗುವುದು ಸಾಮಾನ್ಯ ದೃಶ್ಯವಾಗಿದೆ ಎಂದು ವಿವರಿಸಲಾಗಿದೆ.

ಅಲ್ಲದೆ, ಆರೋಗ್ಯ ತಜ್ಞರ ನಾನಾ ಅಧ್ಯಯನಗಳ ಪ್ರಕಾರ ಭಾರಿ ತೂಕದ ಶಾಲಾ ಬ್ಯಾಗ್‌ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಜತೆಗೆ ಬ್ಯಾಗ್‌ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಅವರ ಬೆನ್ನು ಮತ್ತು ಕಾಲಿಗೆ ಹಾನಿಯಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next