Advertisement

ಗಂಗಾವತಿ: ವಿದ್ಯಾರ್ಥಿ ವೇತನ ಎಸ್ ಎಸ್ ಪಿ ಪೋರ್ಟಲ್ ಕಾರ್ಯ ಸ್ಥಗಿತ; ವಿದ್ಯಾರ್ಥಿಗಳ ಪರದಾಟ

12:59 PM May 17, 2022 | Team Udayavani |

ಗಂಗಾವತಿ: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಎಸ್ಸಿ ಎಸ್ಟಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಸ್ ಎಸ್ ಪಿ ಪೋರ್ಟಲ್ ನಲ್ಲಿ  ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕಳೆದ ಒಂದು ವಾರದಿಂದ ಪರದಾಡುತ್ತಿದ್ದಾರೆ.

Advertisement

ಈಗಾಗಲೇ ಹತ್ತನೇ ತರಗತಿ ಪಿಯುಸಿ ದ್ವಿತೀಯ ಪಿಯುಸಿ ಇತರ ವೃತ್ತಿಪರ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡುತ್ತಿರುವ ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಎಸ್ ಎಸ್ ಪಿ ಪೋರ್ಟಲ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಇದೀಗ ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಪಿ  ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 22 ಆಗಿದ್ದು ಕಳೆದ ಒಂದು ವಾರದಿಂದ ಎಸ್ಸೆಸ್ಪಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ.

ಇದಕ್ಕೆ ಪ್ರಮುಖ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ನೋಂದಾಯಿತ ನಂಬರನ್ನು ಯಶಸ್ವಿ ಹೋಟಲಲ್ಲಿ ದಾಖಲಿಸಿದರೆ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಸದ್ಯವೇ ಸಿಇಟಿ ನೋಂದಣಿ ಸಂಖ್ಯೆಯನ್ನು ಅಪ್ ಲೋಡ್ ಮಾಡಲಾಗುತ್ತದೆ   ಎಂಬ ಸಂದೇಶ ಬರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ಕಂಪ್ಯೂಟರ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ .

ಈ ಕುರಿತು ಸಿಇಟಿ ಬೆಂಗ್ಳೂರಿನ ಘಟಕವನ್ನು ವಿದ್ಯಾರ್ಥಿಗಳು ಸಂಪರ್ಕ ಮಾಡಿದರೆ ಅಲ್ಲಿಂದ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ ಮತ್ತು ಇದಕ್ಕೆ ಸಂಬಂಧಿಸಿದಂತೆ ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸರಿಯಾದ ಮಾಹಿತಿ ಇಲ್ಲ.

Advertisement

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಇಲಾಖೆ ಕೂಡಲೇ ಸಿಇಟಿ ಘಟಕದ ಅಧಿಕಾರಿಗಳನ್ನು ಸಂಪರ್ಕ ಮಾಡಿ ವಿದ್ಯಾರ್ಥಿಗಳ ಸಿಇಟಿ ನೋಂದಣಿ ಸಂಖ್ಯೆಯನ್ನು ಯಶಸ್ವಿ ಪೋರ್ಟಲ್ ನೊಂದಿಗೆ ಜೋಡಣೆ ಮಾಡಿಸಬೇಕಿದೆ ಇಲ್ಲದಿದ್ದರೆ ವಿದ್ಯಾರ್ಥಿಗಳ ಪರದಾಟ ಮುಂದುವರಿಯುತ್ತದೆ .

ಈ ಕುರಿತು ಉದಯವಾಣಿ ಪತ್ರಿಕೆ ಈ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಪರದಾಟದ ಕುರಿತು ಪ್ರಶ್ನಿಸಿದಾಗ  ಈ ಕುರಿತು ತನಗೆ ಮಾಹಿತಿ ಇಲ್ಲ ಕೂಡಲೇ ಸಂಬಂಧಿಸಿದ ಸಿಇಟಿ ಘಟಕದ ಅಧಿಕಾರಿಗಳು ಸಮಾಜದ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಮತ್ತು ಪೋರ್ಟಲ್ ನ ನಿರ್ವಹಿಸುವ ಅಧಿಕಾರಿಗಳನ್ನು ಸಂಪರ್ಕ ಮಾಡಿ ಕೂಡಲೇ ಅದನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ   ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next