Advertisement

ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಘಟಕದ ಪದಾಧಿಕಾರಿಗಳ ಪದಗ್ರಹಣ

03:14 PM Feb 07, 2018 | Team Udayavani |

ಮಹಾನಗರ : ದಲಿತರ ಏಳಿಗೆಗಾಗಿ ಶ್ರಮಿಸಿದ ಕುದ್ಮು ಲ್‌ ರಂಗರಾವ್‌ ಅವರ ಹೆಸರನ್ನು ನಗರದ ಪುರಭವನಕ್ಕೆ
ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ ನಿರ್ಧರಿಸಿದ್ದು, ಇದು ಅತೀ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಶಾಸಕ ಜೆ.ಆರ್‌. ಲೋಬೋ ಹೇಳಿದರು.

Advertisement

ನಗರದ ಉರ್ವಾ ಬಿಲ್ಲವ ಸಂಘದಲ್ಲಿ ಮಂಗಳೂರು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ
ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿದ್ದ ಅನೇಕ ಪರಿಶಿಷ್ಟ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದು, ವಸತಿ ರಹಿತರಿಗೆ ಆಶ್ರಯ ಯೋಜನೆಯಲ್ಲಿ ಮನೆ, ಕಾಂಕ್ರೀಟ್‌ ರಸ್ತೆ, ದೈವಸ್ಥಾನ, ಭಜನ ಮಂದಿರದ ಅಭಿವೃದ್ಧಿಗೆ ನೆರವು, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌, ನೂತನ ಕುದ್ಮು ಲ್‌ ರಂಗರಾವ್‌ ಹಾಗೂ ಅಂಬೇಡ್ಕರ್‌ ಸಮುದಾಯ ಭವನ ಸೇರಿದಂತೆ ಪರಿಶಿಷ್ಟರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದರು.

ಆದೇಶ ಪತ್ರ ಹಸ್ತಾಂತರ
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಸ್ತಾಂತರಿಸಲಾಯಿತು.

ಗೌರವ ವಂದನೆ
ಕಾಂಗ್ರೆಸ್‌ ಪಕ್ಷಕ್ಕೆ ಸೇವೆ ಸಲ್ಲಿಸಿದ ರಾಜ್ಯ ಪರಿಶಿಷ್ಟ ಘಟಕದ ಸಂಚಾಲಕರಾದ ಟಿ.ಹೊನ್ನಯ್ಯ, ಮಾಜಿ ಪವರ್‌ ಲಿಫ್ಟರ್‌
ಚಾಂಪಿಯನ್‌ ಸಂಜೀವ ಬಲ್ಲಾಳ್‌ಬಾಗ್‌, ಮಾಜಿ ಮೂಡಾ ಅಧ್ಯಕ್ಷ ಬಿ.ಜಿ.ಸುವರ್ಣ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಸಾದ್‌ ಕಾಂಚನ್‌, ನಗರ ಬ್ಲಾಕ್‌ ಅಧ್ಯಕ್ಷ ವಿಶ್ವಾಸ್‌ ಕುಮಾರ್‌ ದಾಸ್‌ ಅವರಿಗೆ ಗೌರವ ವಂದನೆ ನಡೆಯಿತು.

Advertisement

ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷ ಶೇಕರ್‌ ಕುಕ್ಕೇಡಿ, ದಕ್ಷಿಣ ಬ್ಲಾಕ್‌ ಅಧ್ಯಕ್ಷ ಅಬ್ದುಲ್‌ ಸಲೀಂ, ಬ್ಲಾಕ್‌ ಪರಿಶಿಷ್ಟ ಘಟಕದ ಅಧ್ಯಕ್ಷ ಮಿಥುನ್‌ ಕುಮಾರ್‌ ಉರ್ವ, ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ, ಉಪಮೇಯರ್‌ ರಜನೀಶ್‌ ಕಾಪಿಕಾಡ್‌, ರಮಾನಂದ ಪೂಜಾರಿ, ಮೋಹನ್‌ ಮೆಂಡನ್‌, ಪಾಲಿಕೆ ಸದಸ್ಯರಾದ ಅಪ್ಪಿಲತಾ, ಪ್ರಕಾಶ್‌ ಬಿ. ಸಾಲ್ಯಾನ್‌, ರಾಧಾಕೃಷ್ಣ, ದಿನೇಶ್‌, ನೀರಜ್‌ ಪಾಲ್‌, ಸಂಶುದ್ದೀನ್‌, ಟಿ.ಸಿ. ಗಣೇಶ್‌, ಅಬ್ಲುಲ್ಲಾ ಬಿನ್ನು, ಖಾಲಿದ್‌ ಉಜಿರೆ, ಟಿ.ಕೆ. ಸುಧೀರ್‌, ವಿಜಯಲಕ್ಷ್ಮೀ, ಪ್ರವೀಣ್‌ ಚಂದ್ರ ಆಳ್ವ, ಪದ್ಮನಾಭ್‌ ಅಮೀನ್‌, ಪ್ರೇಮನಾಥ್‌ ಪಿ.ಬಿ. ಮುಖ್ಯ ಅತಿಥಿಗಳಾಗಿದ್ದರು. ರಘುರಾಜ್‌ ಕದ್ರಿ ನಿರೂಪಿಸಿ, ಪ್ರತಾಪ್‌ ಸಾಲ್ಯಾನ್‌ ಕದ್ರಿ ವಂದಿಸಿದರು. 

3.5 ಕೋಟಿ ರೂ. ವೆಚ್ಚದ ಸಮುದಾಯ ಭವನ
ನಗರದ ಬಾಬುಗುಡªದಲ್ಲಿ ಕುದ್ಮುಲ್‌ ರಂಗರಾವ್‌ ಹೆಸರಿನಲ್ಲಿ 3.50 ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ವಾಗಲಿದ್ದು, ಪರಿಶಿಷ್ಟ ಜಾತಿ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲು ಪ್ರಯೋಜನಕಾರಿಯಾಗಲಿದೆ.
– ಜೆ.ಆರ್‌. ಲೋಬೋ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next