Advertisement
ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಭಾನುವಾರ ಮಾದಕ ಪದಾರ್ಥಗಳ ಸನ್ನಿವೇಶ ಕುರಿತು ನಡೆದ ಸಮಾವೇಶ ಸಭೆಯಲ್ಲಿ ಮಾತನಾಡಿ, ಮಾದಕ ಪದಾರ್ಥಗಳ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಲು ನಾಲ್ಕು ಸೂತ್ರಗಳ ಅಳವಡಿಸಬೇಕಾಗಿದೆ ಅವುಗಳು ಯಾವುದೆಂದರೆ “ಮಾದಕ ವಸ್ತುಗಳ ಪತ್ತೆ, ಸಂಪರ್ಕ ನಾಶ, ಅಪರಾಧಿಗಳ ಬಂಧನ ಮತ್ತು ವ್ಯಸನಿಗಳ ಪುನರ್ವಸತಿ”ಯಂತಹ ಕ್ರಮಗಳ ಅಳವಡಿಸಿಕೊಳ್ಳುವುದರಿಂದ ಮಾದಕ ಪದಾರ್ಥಗಳ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಸಾಧ್ಯ ಎಂದು ಹೇಳಿದರು.
Related Articles
Advertisement
ಛತ್ತೀಸ್‌ಗಢವು ಒಡಿಶಾ ಮತ್ತು ಆಂಧ್ರಪ್ರದೇಶ ಸೇರಿದಂತೆ ಏಳು ರಾಜ್ಯಗಳೊಂದಿಗೆ ಗಡಿಯ ಹಂಚಿಕೊಂಡಿದ್ದು, ಅಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡಲಾಗುತ್ತದೆ. ಛತ್ತೀಸ್‌ಗಢ ರಾಜ್ಯವೊಂದರಲ್ಲೇ 4.98 ಶೇಕಡಾ ಗಾಂಜಾ ಬಳಕೆ ವರದಿಯಾಗಿದೆ, ಇದು ರಾಷ್ಟ್ರೀಯ ಸರಾಸರಿ 2.83 ಶೇಕಡಾಕ್ಕಿಂತ ಹೆಚ್ಚಿದ್ದು ಇದು ಕಳವಳಕಾರಿ ವಿಷಯ ಎಂದು ಹೇಳಿದರು.
ಛತ್ತೀಸ್‌ಗಢಕ್ಕೆ 3 ದಿನಗಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸಮಾವೇಶಕ್ಕೂ ಮೊದಲು ನವ ರಾಯಪುರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ಕಚೇರಿಯ ವರ್ಚ್ಯುವಲ್ ಮೂಲಕ ಉದ್ಘಾಟಿಸಿದರು.