Advertisement
ಅವರು ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕಿನ 110ನೇ ಶಾಖೆಯನ್ನು ಉಪ್ಪುಂದದಲ್ಲಿ ಉದ್ಘಾಟಿಸಿ, ನವೋದಯ ಸ್ವ-ಸಹಾಯ ಸಂಘಗಳ ಸಾಧನ ಸಮಾವೇಶದಲ್ಲಿ ಮಾತನಾಡಿದರು.
Related Articles
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಮಾತನಾಡಿ, ಉತ್ತರ ಕರ್ನಾಟಕದ ಹಲವು ಕೈಗಾರಿಕೆ ಎಸ್‌ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ನೀಡಲಾಗಿದೆ. ನನ್ನ ನಿರಾಣಿ ಗ್ರೂಪ್‌ಗೆ 25 ವರ್ಷಗಳ ಹಿಂದೆ 12 ಕೋಟಿ ರೂ. ಸಾಲವನ್ನು ರಾಜೇಂದ್ರ ಕುಮಾರ್ ನೀಡಿದ್ದು ಇದರಿಂದಾಗಿ ಉದ್ಯಮ ಯಶಸ್ವಿಯಾಗಿ ಬೆಳೆದು ಇಂದು 75 ಸಾವಿರ ಮಂದಿ ದುಡಿಯಲು ಅವಕಾಶ ದೊರಕಿದೆ. ರಾಜೇಂದ್ರ ಕುಮಾರ್ ಕೇವಲ ಎಸ್‌ಡಿಸಿಸಿ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಲ್ಲ, ದೇಶದ ಶಕ್ತಿಯಾಗಿ ಬೆಳೆದಿದ್ದಾರೆ ಎಂದರು.
Advertisement
ಶ್ಲಾಘನೀಯ: ಪಾಟೀಲ್ಹೊಸ ಸ್ವ-ಸಹಾಯ ಗುಂಪುಗಳನ್ನು ಉದ್ಘಾಟಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಲು ರಾಜೇಂದ್ರ ಕುಮಾರ್ ಅವರ ಸ್ವಸಹಾಯ ಸಂಘದಿಂದ ಸಾಧ್ಯವಾಗಿದೆ. ಸರಕಾರ ಗಳು ಮಾಡ ಬೇಕಿರುವ ಕೆಲಸವನ್ನು ಮಾಡುತ್ತಿರುವ ಅವರನ್ನು ಅಭಿನಂದಿಸುತ್ತೇನೆ ಎಂದರು. ಆರ್ಥಿಕ ನೆರವು
ಕೋವಿಡ್‌ನಿಂದ ಮೃತಪಟ್ಟ ನವೋದಯ ಸ್ವಸಹಾಯ ಸಂಘದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್, ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ, ಮೃತ ಸದಸ್ಯರ ಚೈತನ್ಯ ವಿಮಾ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಲಾಯಿತು. ವಾಹನದ ಸಾಲ ಪತ್ರ ವಿತರಣೆ ಮಾಡಲಾಯಿತು. ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರು ಗಣಕೀಕರಣ ಉದ್ಘಾಟಿಸಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭದ್ರತಾ ಕೋಶ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ವಾಹನ ಸಾಲ ಪತ್ರ ವಿತರಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಲಾಕರ್ ಕೀಲಿಕೈ ಹಸ್ತಾಂತರಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ಉಪ್ಪುಂದ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ಕಟ್ಟಡದ ಮಾಲಕ ಹಿರಿಯಣ್ಣ ಶೆಟ್ಟಿ, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಸಿಇಒ ರವೀಂದ್ರ ಬಿ., ಉಪ್ಪುಂದ ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ ಭಟ್, ಭಾಸ್ಕರ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ಐಕಳಬಾವ ದೇವಿಪ್ರಸಾದ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಕೆ. ಜೈರಾಜ್ ಬಿ. ರೈ, ಬಿ. ಅಶೋಕ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ, ಪ್ರವೀಣ ಬಿ. ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಸಮ್ಮಾನ
ಉಪ್ಪುಂದ ಶಾಖಾ ವ್ಯವಸ್ಥಾಪಕ ಶಂಕರ ಶೆಟ್ಟಿ ಮತ್ತು ಕಟ್ಟಡದ ಮಾಲಕ ಹಿರಿಯಣ್ಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕೆ.ಸಿ. ರಾಜೇಶ್ ನಿರ್ವಹಿಸಿದರು. ಮೊಳವಳ್ಳಿ ಮಹೇಶ್ ಹೆಗ್ಡೆ ವಂದಿಸಿದರು. ಟೀಮ್ ವರ್ಕ್‌ನಿಂದ ಯಶಸ್ಸು: ಎಂಎನ್‌ಆರ್
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ನೂತನ ಉಪ್ಪುಂದ ಶಾಖೆಯಲ್ಲಿ 4 ಸಾವಿರ ಖಾತೆಗಳು ತೆರೆಯಲ್ಪಟ್ಟಿವೆ. ಇಲ್ಲಿನ ಜನರಿಗೆ ಆಭಾರಿಯಾಗಿದ್ದೇನೆ. ನವೋದಯ ಸ್ವ-ಸಹಾಯ ಸಂಘದ ಮೂಲಕ ಉಭಯ ಜಿಲ್ಲೆಗಳ ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರುವ ಮೂಲಕ ನೆಮ್ಮದಿಯ ಬದುಕು ನೀಡಿದೆ. ದ.ಕ. ಜಿಲ್ಲೆಯಲ್ಲಿ ಸಕಾಲಕ್ಕೆ ಸಾಲ ಸಿಗುವಂತೆ ಮಾಡಿರುವುದರಿಂದ ಆರ್ಥಿಕ ಸಂಕಷ್ಟದಿಂದ ಯಾರೂ ಕೂಡ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬ್ಯಾಂಕ್ ದೊಡ್ಡ ಮಟ್ಟಕ್ಕೆ ಬೆಳೆಯಲು ಬ್ಯಾಂಕ್ ಸಿಬಂದಿಯ ಪ್ರಾಮಾಣಿಕ ಸೇವೆ, ನವೋದಯ ಬಂಧುಗಳ ಒಗ್ಗಟ್ಟು ಹಾಗೂ ಗ್ರಾಹಕರೇ ಕಾರಣ. ಇದು ನನ್ನೊಬ್ಬನ ಸಾಧನೆ ಅಲ್ಲ ಟೀಮ್ ವರ್ಕ್‌ನಿಂದ ಸಾಧ್ಯವಾಗಿದೆ ಎಂದರು.