Advertisement
ಹಿಂದೂ ಯಾರೂ ಇಲ್ಲ… ಮುಂದೂ ಯಾರೂ ಇಲ್ಲ.. ಚೆನ್ನಮ್ಮಳಂಥವರು ಯಾರಿಲ್ಲ… //ಸೋಬಾನವ//
ಚೆನ್ನಮ್ಮನಂಥವರು ಯಾರಿಲ್ಲ ಭಾರತದಾಗ
ಫಿರಂಗ್ಯಾರ ಮೂಗ ಕೊಯ್ದಾಳ //ಸೋಬಾನವ //
Related Articles
Advertisement
ಚದುರಿ ಹೋದ ಕುಡಿಗಳು…: ಕಿತ್ತೂರು ಚೆನ್ನಮ್ಮ 1824ರ ಯುದ್ಧದ ನಂತರ ಬೈಲಹೊಂಗಲ ಸೆರೆಮನೆ ಸೇರುತ್ತಾಳೆ. ಸಂಗೊಳ್ಳಿ ರಾಯಣ್ಣ ಸೇರಿ ಅನೇಕರು ಮತ್ತೂಂದು ಸುತ್ತು ಹೋರಾಟ ಮಾಡುತ್ತಾರೆ. ಆಗ ಶಿವಲಿಂಗ ರುದ್ರಸರ್ಜನನ್ನು ದೊರೆಯಾಗಿ ನೇಮಿಸುತ್ತಾರೆ. ಆದರೆ, ರಾಯಣ್ಣನ ಕ್ರಾಂತಿಯೂ ವಿಫಲವಾದಾಗ, ಸತತ 3 ತಿಂಗಳ ಕಾಲ ಇಡೀ ಕಿತ್ತೂರು ಅರಮನೆಯನ್ನು ತುಪಾಕಿ ಇಟ್ಟು ಸಿಡಿಸಿ ಧ್ವಂಸ ಮಾಡಿದ ಬ್ರಿಟಿಷರು, ಚೆನ್ನಮ್ಮನ ವಂಶಸ್ಥರೆಲ್ಲರನ್ನೂ ಹಣ್ಣುಗಾಯಿ, ನೀರುಗಾಯಿ ಮಾಡುತ್ತಾರೆ. ಕಿತ್ತೂರಿನ ಕೋಟೆಯನ್ನು ಅಬ್ಬೇಪಾರಿಗಳ ಹೆಸರಿಗೆ ಬರೆದು, ಆ ಕುಟುಂಬಸ್ಥರೆಲ್ಲರನ್ನೂ ದಿಕ್ಕಾಪಾಲು ಮಾಡುತ್ತಾರೆ.
ಚೆನ್ನಮ್ಮನ ಕುಡಿಗಳು ಎಲ್ಲಿದ್ದಾರೆ?: ಪ್ರಸ್ತುಷಿಕ್ಷಿ, ಕಿತ್ತೂರು ಚೆನ್ನಮ್ಮಳ ದೇಸಾಯಿ ಮನೆತನದ ಒಟ್ಟು 11 ಕುಟುಂಬಗಳಿವೆ. ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು- ಹೀಗೆ 110 ಜನ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. 4 ಮನೆತನಗಳು ಮಹಾರಾಷ್ಟ್ರದ ಗಡಹಿಂಗ್ಲಜ್‌ನಲ್ಲಿ ವಾಸವಿದ್ದರೆ, ಇನ್ನುಳಿದವರು ಬೆಳಗಾವಿ, ಖಾನಾಪೂರದಲ್ಲಿ ಕಾಣಸಿಗುತ್ತಾರೆ. ಬಹಳ ಬೇಡಿಕೊಂಡಿದ್ದರಿಂದ, 1968ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರು ಕಿತ್ತೂರು ದೇಸಗತಿ ಕುಟುಂಬಗಳಿಗೆ 108 ಎಕರೆ ಭೂಮಿಯನ್ನು ಬೆಳಗಾವಿ ಖಾನಾಪೂರ ರಸ್ತೆಯಲ್ಲಿ ನೀಡಿದ್ದರು.
ಪ್ರತಿ ಕುಟುಂಬಕ್ಕೂ 10 ಎಕರೆ ಭೂಮಿ ಮಾತ್ರ ಇದೆ. ಹಾಗಿದ್ದೂ, ತಮ್ಮ ಮಕ್ಕಳನ್ನು ಓದಿಸಲು, ಬದುಕು ಕಟ್ಟಿಕೊಳ್ಳಲು ಆಗದವರು ತಮ್ಮ ಜಮೀನುಗಳನ್ನು ಮಾರಿಕೊಂಡು ಜೀವಿಸುತ್ತಿದ್ದಾರೆ. ಕಿತ್ತೂರಿನಲ್ಲಿನ ಕೋಟೆಯ 24 ಎಕರೆ ಭೂಮಿಯಲ್ಲಿ ಅತಿಕ್ರಮಣ ನಡೆದಿದೆ. ಇದರ ವಿರುದ್ಧ ಚೆನ್ನಮ್ಮನ ವಂಶಸ್ಥರು ಧ್ವನಿ ಎತ್ತಿದ್ದಾರೆ. “ನಮ್ಮ ವಂಶಸ್ಥರು ಕೋಟೆ ಸೇರಿ ಲಕ್ಷಾಂತರ ಎಕರೆ ಭೂಮಿಯನ್ನು ಸರ್ಕಾರಕ್ಕೆ, ಬಡವರಿಗೆ ಹಾಗೆಯೇ ಬಿಟ್ಟು ಕೊಟ್ಟ ಉದಾರತೆಗಾದರೂ ಮರ್ಯಾದೆ ಕೊಟ್ಟು, ಕೋಟೆಯನ್ನು ರಕ್ಷಿಸಿ. ಅದನ್ನು ಅಭಿವೃದ್ಧಿ ಮಾಡಿ, ಮುಂದಿನ ಪೀಳಿಗೆಗೆ ಚೆನ್ನಮ್ಮಳ ಆದರ್ಶಗಳನ್ನು ತಲುಪಿಸಬೇಕಿತ್ತು’ ಎನ್ನುವುದು, ಶಂಕರಸರ್ಜ ದೇಸಾಯಿ ಅವರ ಕಾಳಜಿ.
ಆದರೆ, ವರ್ಷದಿಂದ ವರ್ಷಕ್ಕೆ ಕೋಟೆ ಶಿಥಿಲಗೊಳ್ಳುತ್ತಿದೆ. ಅಂದು ಕತ್ತೆ ಮೇಲೆ ಹೊತ್ತೂಯ್ದ ಚಿನ್ನದ ಸಂಪತ್ತುಗಳೆಲ್ಲ ಯಾರ್ಯಾರ ಪಾಲಾಗಿವೆಯೋ ಗೊತ್ತಿಲ್ಲ. ಚೆನ್ನಮ್ಮಳ ಕತ್ತಿ, ಕಿರೀಟ, ಕವಚ, ಮತ್ತು ಅವಳ ಸೈನ್ಯದಲ್ಲಿದ್ದವರ ಅನೇಕ ವಸ್ತುಗಳು ಲಂಡನ್ ವಸ್ತುಸಂಗ್ರಹಾಲಯ ಸೇರಿವೆ. ಅವುಗಳನ್ನು ಅಲ್ಲಿಂದ ತರುವ ಕೆಲಸವನ್ನಾದರೂ ಸರ್ಕಾರಗಳು ಮಾಡಬೇಕಿತ್ತು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದೇಸಾಯಿ ಕುಟುಂಬದ ಸದಸ್ಯರನ್ನು ಕಾಯಂ ಸದಸ್ಯರನ್ನಾಗಿಸುವಂತೆ ಮಾಡಿಕೊಂಡ ಮನವಿಗೆ ಬೆಲೆ ಸಿಕ್ಕಿಲ್ಲ. ಚೆನ್ನಮ್ಮ ಹುಟ್ಟಿದ ಕಾಕತಿಯಲ್ಲೂ ಅವಳ ಅರಮನೆ, ಅವಳು ಹುಟ್ಟಿದ ಮನೆ ಪಾಳುಬಿದ್ದಿವೆ. ಲಾವಣಿ, ಸೋಬಾನೆ ಪದ, ಚರಿತ್ರೆಯ ಪುಟಗಳಲ್ಲಿ ಮಾತ್ರವೇ ಚೆನ್ನಮ್ಮನ ಸ್ಮರಣೆ ಕಾಣುತ್ತಿದೆ.
ರಾಣಿ ಚೆನ್ನಮ್ಮ
ಶಿವಲಿಂಗ ರುದ್ರ ಸರ್ಜ (ಚೆನ್ನಮ್ಮಳ ದತ್ತಕ ಪುತ್ರ, ಮೊಮ್ಮಗ )
ಶಿವಲಿಂಗಪ್ಪ ಸರ್ಜ ದೇಸಾಯಿ
ಅಪ್ಪಾ ಸಾಹೇಬ ಸರ್ಜ ದೇಸಾಯಿ
ಮಲ್ಲಪ್ಪ ಸರ್ಜ ದೇಸಾಯಿ
ಶಂಕರ ಸರ್ಜ ದೇಸಾಯಿ
ಬಾಳಾಸಾಹೇಬ ಸರ್ಜ ದೇಸಾಯಿ
ಉದಯ ಸರ್ಜ ದೇಸಾಯಿ ಮೈಸೂರು ದಸರಾ ನಡೆದ ಮಾದರಿಯಲ್ಲಿ ಕಿತ್ತೂರು ಉತ್ಸವ ಕೂಡ ನಡೆಯಬೇಕು. ಅಲ್ಲಿ ಕಿತ್ತೂರು ವಂಶಸ್ಥರಿಗೆ ಸರ್ಕಾರದಿಂದ ಗೌರವ ಸಿಕ್ಕುವಂಥ ವ್ಯವಸ್ಥೆ ಮಾಡಬೇಕು. ಈ ದೇಶಕ್ಕೆ ಪ್ರಾಣ ಕೊಟ್ಟವರ ಹೊಟ್ಟೆಯಲ್ಲಿ ಹುಟ್ಟಿದವರನ್ನು ಕನಿಷ್ಠವಾಗಿ ನೋಡುವುದು ಶೋಭೆಯಲ್ಲ.
-ಉದಯಸರ್ಜ ದೇಸಾಯಿ, ರಾಣಿ ಚೆನ್ನಮ್ಮಳ ಮೊಮ್ಮಗ, 7ನೇ ತಲೆಮಾರು * ಬಸವರಾಜ್ ಹೊಂಗಲ್