ಹೈದರಾಬಾದ್: ಶ್ವಾನದಾಳಿಯ ಭೀತಿಯಿಂದ ಕಟ್ಟಡದ ಮೇಲಿಂದ ಜಿಗಿದಿದ್ದ ಫುಡ್ ಡೆಲಿವರಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಮೃತ ಪಟ್ಟಿರುವ ಘಟನೆ ತೆಲಂಗಾಣದಲ್ಲಿ ವರದಿ ಯಾಗಿದೆ.
23 ವರ್ಷದ ಫುಡ್ ಡೆಲಿವರಿ ಬಾಯ್ ಆಹಾರ ತಲುಪಿಸುವುದಕ್ಕೆ ಕಟ್ಟಡವೊಂದಕ್ಕೆ ತೆರ ಳಿದ್ದು, ಫುಡ್ ಆರ್ಡರ್ ಮಾಡಿದ್ದ ವ್ಯಕ್ತಿ ತಮ್ಮ ಸಾಕು ಶ್ವಾನವನ್ನು ಕಟ್ಟಿಹಾಕಿರಲಿಲ್ಲ. ಬಾಗಿಲು ತೆರೆಯುತ್ತಿದ್ದಂತೆ ಡೆಲಿವರಿ ಬಾಯ್‌ಗೆ ನಾಯಿ ಕಾಣಿಸಿದೆ. ಅದು ದಾಳಿ ಮಾಡ ಬಹುದೆಂದು ಹೆದರಿ ಓಡಲು ಆರಂಭಿಸಿದ್ದು, ಈ ವೇಳೆ ಕಟ್ಟಡದ 3ನೇ ಮಹಡಿಯಿಂದ ಬಿದ್ದಿದ್ದಾರೆ.
ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ. ಶ್ವಾನದ ಮಾಲಕರ ನಿರ್ಲಕ್ಷ್ಯದಿಂದಾಗಿ ಯುವಕ ಸಾವಿಗೀಡಾದ ಹಿನ್ನೆಲೆ ಕೇಸು ದಾಖಲಿಸಲಾಗಿದೆ.
ಶ್ವಾನದ ಮಾಲ ಕರು ಹಾಗೂ ಫುಡ್ ಡೆಲಿವರಿ ಸಂಸ್ಥೆ ಯುವಕನಿಗೆ ಪರಿಹಾರ ನೀಡಬೇಕು ಎಂದು ಕಾರ್ಮಿಕರ ಸಂಘಟನೆ ಆಗ್ರಹಿಸಿದೆ.