Advertisement

ಕುಡಿಯುವ ನೀರಿನ ಸಮಸ್ಯೆ

12:05 PM May 11, 2019 | keerthan |

ರಾಮನಗರ: ಜಿಲ್ಲೆ‌ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಆದರೆ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿ ಸುವಲ್ಲಿ ಸಂಪೂರ್ಣ ವಿಫ‌ಲಗೊಂಡಿದೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ದೂರಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಾಲಿ ಬಿಂದಿ ಗೆಗಳ ಪ್ರದರ್ಶನ ನಡೆಸಿದರು.

ಈ ವೇಳೆ ಮಾತನಾಡಿದ ವಾಟಾಳ್‌, ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುಂಡೇರಾದ ದೊಡ್ಡಿಯಲ್ಲಿ ನಾಗರಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಆಳವಾದ ಬಾವಿಯಲ್ಲಿನ ನೀರು ಪಡೆಯಲು ಹರಸಾಹಸ ಪಡುತ್ತಿ ದ್ದಾರೆ. ಚುನಾಯಿತ ಪ್ರತಿನಿಧಿಗಳು, ಸರ್ಕಾ ರದ ಆಡಳಿತದ ಚುಕ್ಕಾಣಿ ಹಿಡಿದಿರುವವರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸ ಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿ ದ್ದಾರೆ.

ಸಿಎಂ ಆದವರು ಜನರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಆದರೆ ಅವರು ತಮ್ಮ ದೇಹವೇ ಕಂಗಾಲಾಗಿದೆ ಎಂದು ರೆಸಾರ್ಟ್‌ ಸೇರಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ರಾಜ್ಯದ ಜನರು ನೀರಿಗಾಗಿ ಪರಿತಪ್ಪಿಸುತ್ತಿದ್ದರೆ, ರೆಸಾರ್ಟ್‌ ವಾಸ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಪ್ರತಿಕ್ರಿಯಿಸಿದರು.

ಕೆಂಗಲ್ಲ ಹನುಮಂತಯ್ಯ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ರ ಆಡಳಿತ ಕಂಡಿದ್ದೇವೆ. ಆದರೆ ಅವರ್ಯಾರೂ ಇಂತಹ ಕೆಟ್ಟ ಆಡಳಿತ ನೀಡಿಲ್ಲ. ಲೋಕಸಭೆ ಚುನಾವಣೆ ವೇಳೆಯೂ ಸಿಎಂ ಕುಮಾರಸ್ವಾಮಿ, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಿಲ್ಲ. ಅವರ ನಾಲಿಗೆ ಹಿಡಿತ ತಪ್ಪಿತ್ತು. ಇದರಿಂದಾಗಿ ಏನೇನೋ ಮಾತನಾ ಡುತ್ತಿದ್ದರು ಎಂದು ವ್ಯಂಗ್ಯವಾಡಿದರು.

Advertisement

ಸರ್ವ ಪಕ್ಷ ಸಭೆ ಕರೆದು ಸಮಸ್ಯೆ ಕುರಿತು ಚರ್ಚಿಸಿ: ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಡೀಸಿ, ಸಿಇಒ, ಎಸಿ, ತಹಸೀಲ್ದಾರ್‌ಗಳ ಜೊತೆ ಸಭೆ ನಡೆಸಿದರೆ ಉಪಯೋಗವಿಲ್ಲ. ಅಧಿಕಾರಿಗಳ ಜೊತೆಗೆ ಬರಗಾಲದ ಸಮಗ್ರ ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ಹಾಗೂ ಮೂರು ದಿನಗಳ ಕಾಲ ಶಾಸನ ಸಭೆ ಕರೆಯಬೇಕು ಎಂದು ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು. ಬರ ಪರಿಸ್ಥಿತಿ ನಿಭಾಯಿ ಸಲು ಸಿಎಂ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಮಿತಿಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು. ರಾಜಕರಣಿಗಳಲ್ಲಿ ಬದ್ಧತೆ ಇಲ್ಲ: ತಾವು 1967ರಲ್ಲಿ ಶಾಸಕನಾಗಿದ್ದ ವೇಳೆ ಕಲಬುರ್ಗಿ ಯಲ್ಲಿ ಬರಗಾಲ ಕುರಿತು ಅಧ್ಯಯನ ಪ್ರವಾ ಸ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆವು. ಇಂದು ಯಾವೊಬ್ಬ ರಾಜಕರಣಿಯೂ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ರಾಜಕಾರಣಿಗಳು ಬದ್ಧತೆ ಕಳೆದು ಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಧ್ಯಂತರ ಚುನಾವಣೆ: ಲೋಕಸಭೆ ಫ‌ಲಿ ತಾಂಶ ಬಳಿಕ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರ ಆಗ ಲಿದೆ. ಈಗಿನ ಪರಿಸ್ಥಿತಿ ನೋಡಿದರೆ ಮಧ್ಯಂತ ರ ಚುನಾವಣೆ ಬರಬಹುದು ಎನಿಸುತ್ತಿದೆ. ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವ ಣೆಗೆ ಸಾವಿರಾರು ಕೋಟಿ ರೂ. ವೆಚ್ಚವಾಗಿದೆ. ಮತ್ತೂಂದು ಚುನಾವಣೆ ಬೇಕಾಗಿಲ್ಲ. ಅಧಿಕಾರ ಸದುಪಯೋಗ ಪಡಿಸಿ ಕೊಂಡು ಆಡಳಿತ ನಡೆಸಿ ಎಂದು ಮೂರು ಪಕ್ಷಗಳಿಗೆ ವಾಟಾಳ್‌ ಸಲಹೆ ನೀಡಿದರು.

ಪಕ್ಷಗಳ ಆಪರೇಷನ್‌ ವಿರುದ್ಧ ಕಿಡಿ: ಅಧಿಕಾರ ಕ್ಕಾಗಿ ಬಿಜೆಪಿ ಆಪರೇಷನ್‌ ಕಮಲ ಮಾಡಲು ಹೊರಟಿದೆ. ಒಬ್ಬೊಬ್ಬ ಶಾಸಕನಿಗೆ 30 ರಿಂದ 40 ಕೋಟಿ ರುಪಾಯಿಗಳ ಆಮಿಷವೊ ಡ್ಡುತ್ತಿದ್ದಾರೆ. ಆಪರೇಷನ್‌ ಗೆ ಒಳಗಾದವರು ಮತ್ತು ಆಪರೇಷನ್‌ ಮಾಡುವವರ ಶಾಸಕ ಸ್ಥಾನ ರದ್ದಾಗಬೇಕು. ಅಂತಹವರು 10 ವರ್ಷ ಚುನಾವಣೆಯಲ್ಲಿ ನಿಲ್ಲದಂತೆ ಪಕ್ಷಾಂತ ರ ಕಾಯ್ದೆಗೆ ಕಡ್ಡಾಯವಾಗಿ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಎಂ. ಜಗದೀಶ್‌, ಗಾಯಿತ್ರಿಬಾಯಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next