Advertisement

ಕಿರಾತಕ ಖ್ಯಾತಿಯ ಚಿತ್ರ ನಿರ್ದೇಶಕ ಪ್ರದೀಪ್​ ರಾಜ್ ಕೋವಿಡ್ ಗೆ ಬಲಿ

12:28 PM Jan 20, 2022 | Team Udayavani |

ಬೆಂಗಳೂರು : ಕನ್ನಡದ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಭರವಸೆ ಮೂಡಿಸಿದ್ದ ನಿರ್ದೇಶಕ ಪ್ರದೀಪ್​ ರಾಜ್​ ಅವರು ಗುರುವಾರ ನಿಧನ ಹೊಂದಿರುವುದಾಗಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Advertisement

ಪ್ರದೀಪ್​ ರಾಜ್​ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರದೀಪ್​ ರಾಜ್ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದರು, ಎಂದು ಸಹೋದರ ಪ್ರಶಾಂತ್​ ರಾಜ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಯಶ್​ ಅಭಿನಯದ ‘ಕಿರಾತಕ’ ಚಿತ್ರವನ್ನು ಪ್ರದೀಪ್​ ರಾಜ್​ ನಿರ್ದೇಶನ ಮಾಡಿ ಖ್ಯಾತಿ ಗಳಿಸಿದ್ದರು. ಕನ್ನಡದ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಸತೀಶ್​ ನೀನಾಸಂ ನಟನೆಯ ‘ಅಂಜದ ಗಂಡು’, ಕಾರ್ತಿಕ್​ ಜಯರಾಮ್​, ಚಿಕ್ಕಣ್ಣ  ಅಭಿನಯಿಸಿದ್ದ ‘ಬೆಂಗಳೂರು 560023’, ದುನಿಯಾ ವಿಜಿ​ ನಟನೆಯ ‘ರಜನಿ ಕಾಂತ’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು.

ಪಾಂಡಿಚೇರಿ ಮೂಲದವರಾದ ಪ್ರದೀಪ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ.20 ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next