ನವದೆಹಲಿ: ಮತಾಂತರ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತಾಂತರ ವಿರೋಧಿಸಿ ಜಾರಿಯಾಗಿರುವ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ಬಗ್ಗೆ ಮಾ.17ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ನ್ಯಾಯವಾದಿ ಮತ್ತು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ವಾದ ಮಂಡಿಸಿ ಆಮಿಷವೊಡ್ಡಿ ಮತಾಂತರ ನಡೆಸುವುದು ಹಾಗೂ ರಾಜ್ಯಗಳ ಕಾಯ್ದೆಗಳ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಅರ್ಜಿಗಳ ವಿಚಾರವೇ ಪ್ರತ್ಯೇಕ.
ರಾಜ್ಯಗಳ ಕಾಯ್ದೆಗಳಿಗೆ ನನ್ನ ಬೆಂಬಲ ಮತ್ತು ವಿರೋಧವೂ ಇಲ್ಲವೆಂದರು. ಆಮಿಷವೊಡ್ಡಿ ಮತಾಂತರ ವಿಚಾರದ ಬಗ್ಗೆ ಮಾತ್ರ ನನ್ನ ಅರ್ಜಿ ಎಂದರು. ಅದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ಮಾ.17ರಂದು ಎಲ್ಲಾ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದರು.