ನವದೆಹಲಿ:ಗುಜರಾತ್‌ನ ಕೆಳಹಂತದ ಕೋರ್ಟ್‌ಗಳ ನ್ಯಾಯಾಧೀಶರಿಗೆ ಪದೋನ್ನತಿ ನೀಡುವ ವಿಚಾರದ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
Advertisement
ಈ ಬಗ್ಗೆ ನ್ಯಾ.ಎಂ.ಆರ್.ಶಾ (ಈಗ ನಿವೃತ್ತ) ನೇತೃತ್ವದ ನ್ಯಾಯಪೀಠ ಮೇ 12ರಂದು ನಡೆದಿದ್ದ ವಿಚಾರಣೆ ವೇಳೆ ಪದೋನ್ನತಿ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿತ್ತು.
ಸೇವಾಹಿರಿತನ ಮತ್ತು ಅರ್ಹತೆಯನ್ನು ಪರಿಗಣಿಸಿ ನೀಡಲಾಗಿದ್ದ ಪದೋನ್ನತಿ ಪ್ರಶ್ನೆ ಮಾಡಿ ಇಬ್ಬರು ದಾವೆ ಹೂಡಿದ್ದರು. ಮೇ 22ರಿಂದ ಜು.2ರ ವರೆಗೆ ಸುಪ್ರೀಂಕೋರ್ಟ್‌ಗೆ ಬೇಸಗೆ ರಜೆ ಇದೆ.