Advertisement

ಮೊಡಂಕಾಪು ಪ.ಜಾ.-ಪಂ. ಬಾಲಕರ ಹಾಸ್ಟೆಲ್‌ ಕಟ್ಟಡ ಶಿಥಿಲ

10:35 PM Oct 18, 2019 | mahesh |

ಕಲ್ಲಡ್ಕ: ಐದು ದಶಕಗಳ ಪೂರ್ವದಲ್ಲಿ ನಿರ್ಮಾಣಗೊಂಡ, ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಮೊಡಂಕಾಪು ಪ. ಜಾತಿ-ಪಂಗಡದ ಬಾಲಕರ ಹಾಸ್ಟೆಲ್‌ ಕಟ್ಟಡ ಶಿಥಿಲವಾಗಿ ಅಪಾಯ ಆಹ್ವಾನಿಸುತ್ತಿದ್ದರೂ ಅಧಿಕಾರಿಗಳಿಂದ ಸುಣ್ಣಬಣ್ಣದ ನಿರ್ವಹಣೆ ಮುಂದುವರಿದಿದೆ.

Advertisement

ಕಟ್ಟಡದ ಪಂಚಾಂಗದಲ್ಲಿ, ಗೋಡೆಗಳಲ್ಲಿ ಬಿರುಕುಗಳಿವೆ. ಜೋರು ಮಳೆ ಬಂದರೆ ಛಾವಣಿ ಸೋರುತ್ತದೆ. 55 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ ಕಟ್ಟಡ ದುಃಸ್ಥಿತಿಯಲ್ಲಿದ್ದು, ನೂತನ ಕಟ್ಟಡ ನಿರ್ಮಾಣದ ಯೋಜನೆ ಹಾಕಬೇಕಾಗಿದೆ. ಆದರೆ ಇಲಾಖೆ ಕಟ್ಟಡಕ್ಕೆ ಬರೀ ಸುಣ್ಣ-ಬಣ್ಣದ ಲೇಪನ ಮಾಡಿ ಕೈತೊಳೆದುಕೊಳ್ಳುತ್ತಿದೆ.

10 ಲಕ್ಷ ರೂ. ಬಿಡುಗಡೆ
ಹಾಲಿ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್‌ ನಿರ್ವಹಣೆಗಾಗಿ ಅಂದಾಜು 10 ಲಕ್ಷ ರೂ. ಬಿಡುಗಡೆ ಆಗಿದೆ. ಅದರಲ್ಲಿ ಅಲ್ಲಲ್ಲಿ ದುರಸ್ತಿ, ಕಟ್ಟಡ ಪೂರ್ತಿ ಸುಣ್ಣ ಬಳಿದು ಮುಕ್ತಾಯ ಮಾಡುವುದು ಇಲಾಖೆಯ ಯೋಜನೆ.

ಕಟ್ಟಡ ದುರ್ಬಲ
ಹಾಸ್ಟೆಲ್‌ ಕಟ್ಟಡ ದುರ್ಬಲಗೊಂಡಿರುವು ದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಸುರಕ್ಷತೆಯ ಭೀತಿಯಿದೆ. ಇಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇ. 60ಕ್ಕೂ ಹೆಚ್ಚು ಮಂದಿ ಹೊರ ಜಿಲ್ಲೆಯವರು. ಇಲಾಖೆ ಕೂಡ ಹಾಸ್ಟೆಲ್‌ ಕಟ್ಟಡದ ಸುಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸಿದಂತಿಲ್ಲ. ಶಾಶ್ವತ ಅನುದಾನವನ್ನು ಬಿಡುಗಡೆಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕಾದ ಅನಿವಾರ್ಯವನ್ನು ಸರಕಾರಕ್ಕೆ ಮನದಟ್ಟು ಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭೀತಿಯಿಲ್ಲದೆ ಕಲಿಯುವ ವಾತಾವರಣ ನಿರ್ಮಾಣವಾಗಲಿದೆ.

ವರದಿ ಪಡೆದು ಸೂಕ್ತ ಕ್ರಮ
ಹಾಸ್ಟೆಲ್‌ ಕಟ್ಟಡ ದುರ್ಬಲಗೊಂಡಿರುವ ಬಗ್ಗೆ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿ ಹಾಗೂ ಎಂಜಿನಿಯರಿಂಗ್‌ ವಿಭಾಗದಿಂದ ವರದಿಯನ್ನು ಸ್ವೀಕರಿಸಿ
ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 - ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಶಾಸಕರು

Advertisement

ಮೇಲಧಿಕಾರಿಗಳ ಗಮನಕ್ಕೆ
ಹಾಸ್ಟೆಲ್‌ ಕಟ್ಟಡ ದುರಸ್ತಿಗಾಗಿ 10 ಲಕ್ಷ ರೂ. ಅನುದಾನ ಬಂದಿದೆ. ಮಳೆಗಾಲದಲ್ಲಿ ಮಳೆ ನೀರು ಸೋರುತ್ತಿರುವ ಹಿನ್ನೆಲೆಯಲ್ಲಿ ಹೆಂಚುಗಳನ್ನು ಬದಲಿಸಿದ್ದೇವೆ. ಗೋಡೆಗಳಿಗೆ ಪೈಂಟಿಂಗ್‌ ಆಗದೆ ಹಲವು ವರ್ಷಗಳಾದ ಕಾರಣ ಪೈಂಟಿಂಗ್‌ ಕೆಲಸ ನಡೆದಿದೆ. ಪ್ರತಿ ವರ್ಷ ರಿಪೇರಿ ಮಾಡುತ್ತಾ ಇದ್ದೇವೆ. ರಿಪೇರಿ ಕಾಮಗಾರಿಗೆ ಸರಕಾರಕ್ಕೆ 35 ಲಕ್ಷ ರೂ. ಹೆಚ್ಚುವರಿ ಪ್ರಸ್ತಾವನೆ ಕಳುಹಿಸಲಾಗಿದೆ. ನೂತನ ಕಟ್ಟಡ ನಿರ್ಮಾಣದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
 - ಮೋಹನ್‌, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ

- ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next