ನವದೆಹಲಿ: ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ 89 ವರ್ಷದ ತಾಯಿಯನ್ನು ರಿಜಿಸ್ಟರ್ ಕಚೇರಿಗೆ ಕರೆದೊಯ್ದು, ಹೆಬ್ಬೆಟ್ಟು ಒತ್ತಿಸಿಕೊಂಡು 2 ಕೋಟಿ ರೂ. ಮೌಲ್ಯದ ಆಸ್ತಿ ಮಾರಲು ಹೊರಟಿದ್ದ ಮಗನನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಅಮ್ಮನ ಯಾವುದೇ ಆಸ್ತಿಯನ್ನು ನಿರ್ವಹಣೆ ಮಾಡುವಂತಿಲ್ಲ ಎಂದು ಮಗನಿಗೆ ಆದೇಶಿಸಿದೆ.
ಇದನ್ನೂ ಓದಿ:ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್: ಸಿಎಂ ಬಸವರಾಜ ಬೊಮ್ಮಾಯಿ
ನೋಯ್ಡಾ ಮೂಲದ ವ್ಯಕ್ತಿಯೊಬ್ಬ ಅಸ್ವಸ್ಥ ತಾಯಿಯ ಆಸ್ತಿ ಮಾರಾಟ ಮಾಡಲು ಹೊರಟಿರುವುದಾಗಿ ಆತನ ಅಕ್ಕ-ತಂಗಿಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಮಾಡಿರುವ ನ್ಯಾಯಾಲಯ, “ನಿಮಗೆ ಅಮ್ಮನ ಆಸ್ತಿಯ ಬಗ್ಗೆಯೇ ಹೆಚ್ಚು ಆಸಕ್ತಿ ಇದ್ದಂತಿದೆ. ಇದು ಈಗಿನ ಎಲ್ಲಾ ವೃದ್ಧರ ಕಥೆಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
Related Articles
ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 17ರಂದು ನಡೆಸುವುದಾಗಿ ಹೇಳಿದೆ.