ಹೊಸದಿಲ್ಲಿ: ಸಿಕ್ಕಿಂನಲ್ಲಿ ಇರುವ ನೇಪಾಲದವರನ್ನು (ಸಿಕ್ಕಿಮೀಸ್-ನೇಪಾಲಿಗರು) “ವಿದೇಶಿ ಮೂಲದ ವ್ಯಕ್ತಿಗಳು’ ಎಂದು ಜ.13ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಬದಲಾವಣೆ ಮಾಡಿದೆ.
ಜತೆಗೆ ಅವರು ವಲಸಿಗರಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾ|ಎಂ.ಆರ್‌ಶಾ ಹಾಗೂ ನ್ಯಾ|ಬಿ.ವಿ.ನಾಗರತ್ನ ಅವರ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಿತು. ಕೇಂದ್ರ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಆದೇಶವನ್ನು ಸರಿಪಡಿಸಬೇಕು’ ಎಂದು ಕೋರಿಕೊಂಡರು.
ಸಿಕ್ಕಿಂನಲ್ಲಿ ಇರುವ ಹಳೆಯ ವಸಾಹತುದಾರರಿಗೆ ತೆರಿಗೆ ವಿನಾಯತಿ ವಿಸ್ತರಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧಿಸಿದಂತೆ ಜ.13ರಂದು ತೀರ್ಪು ನೀಡಿತ್ತು. ಈ ವೇಳೆ ಸಿಕ್ಕಿಮೀಸ್ ನೇಪಾಲಿಗರನ್ನು ವಲಸಿಗರು ಎಂದು ಉಲ್ಲೇಖೀಸಿತ್ತು. ಈ ಬಳಿಕ ಸಿಕ್ಕಿಂನಲ್ಲಿ ಪ್ರತಿಭಟನೆಗಳು ನಡೆದಿದ್ದವು.