ಹೊಸದಿಲ್ಲಿ: ಸಲಿಂಗಿಗಳ ವಿವಾಹಕ್ಕೆ ಕಾನೂನುಸಮ್ಮತಿ ನೀಡಬೇಕೆಂಬ ಪ್ರಕರ ಣವನ್ನು ಸರ್ವೋಚ್ಚ ಪೀಠ ಈಗ ಪಂಚ ಸದಸ್ಯರ ವಿಸ್ತೃತಪೀಠಕ್ಕೆ ವರ್ಗಾಯಿಸಿದೆ. ಇದು ಅತ್ಯಂತ ಮಹತ್ವದ ವಿಚಾರ, ಈ ಬಗ್ಗೆ ಸೂಕ್ಷ್ಮವಾಗಿ ವಿಚಾರಣೆ ನಡೆಸಿ ತೀರ್ಮಾನಿಸಬೇಕಿದೆ ಎಂದು ನ್ಯಾಯ ಪೀಠ ಹೇಳಿದೆ. ಹಾಗೆಯೇ ಮುಂದಿನ ವಿಚಾರಣೆಯನ್ನು ಏ.18ಕ್ಕೆ ನಿಗದಿಪಡಿಸಿ, ನೇರಪ್ರಸಾರ ಮಾಡುವುದಾಗಿ ತಿಳಿಸಿದೆ.
ಇನ್ನೊಂದು ಕಡೆ ಕೇಂದ್ರ ಸರಕಾರ, ಸಲಿಂಗಿ ಸಂಬಂಧಕ್ಕೆ ಸರಕಾರದ ಒಪ್ಪಿಗೆ ಯಿದೆ. ಆದರೆ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೇಳುವುದು ಸರಿಯಲ್ಲ, ಇದು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ವಾದಿಸಿದೆ. ಇನ್ನು ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಬೇಕು ಎಂದು ಕೇಳಿರುವ ಅರ್ಜಿದಾರರು, ಹಿಂದೂ ವಿವಾಹ ಕಾಯ್ದೆ, ವಿದೇಶಿ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆಗಳು ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಸಮಾಜದ ಕೆಲವು ವರ್ಗಗಳು ಇಂತಹ ಮದುವೆಗಳನ್ನು ತಡೆಯಬಾರದು ಎಂದು ವಾದಿಸಿದ್ದಾರೆ.
ಕೇಂದ್ರ ಹೇಳುವುದೇನು?: ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ನಾವು ತೊಂದರೆ ನೀಡುವುದಿಲ್ಲ. ಸಲಿಂಗಿ ಸಂಬಂಧ ತಪ್ಪಲ್ಲ ಎಂದು ಈಗಾಗಲೇ ಹೇಳಲಾಗಿದೆ. ಈಗ ಸಲಿಂಗಿ ಮದುವೆಯನ್ನು ಒಂದು ಮೂಲ ಭೂತ ಹಕ್ಕಿನಂತೆ ಪರಿಗಣಿಸ ಬೇಕೆಂದು ಹೇಳುವುದು ಸರಿಯಲ್ಲ. ಇದು ಒಂದಿಡೀ ಸಮಾಜದ ಮೌಲ್ಯಗಳು, ಸೂಕ್ಷ್ಮ ಸಮ ತೋಲ ನವನ್ನು, ವೈಯಕ್ತಿಕ ಕಾನೂನು ಗಳನ್ನು ಹದಗೆಡಿಸುತ್ತದೆ ಎಂದಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಹೇಳಿದೆ.