ನವದೆಹಲಿ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಶಾಹನವಾಜ್ ಹುಸೈನ್ ವಿರುದ್ಧ ದಾಖಲೆ ಸಲ್ಲಿಸಲು ಪ್ರಕರಣ ದಾಖಲಿಸಿದ ಮಹಿಳೆಗೆ ಸುಪ್ರೀಂಕೋರ್ಟ್ ಶುಕ್ರವಾರ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ದೂರುದಾರ ಮಹಿಳೆಯ ವಕೀಲರ ಸಲ್ಲಿಕೆಗಳನ್ನು ಗಮನಿಸಿ, ಆಪಾದಿತ ಅಪರಾಧಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಬಿಜೆಪಿ ನಾಯಕನ ವಕೀಲರು ಮರೆಮಾಚಿದ್ದಾರೆ. ಅದನ್ನು ಸುಪ್ರೀಂ ಕೋರ್ಟ್‌ನ ದಾಖಲೆಗೆ ತರಬೇಕು ಎಂದಿದ್ದಾರೆ.
ಇದನ್ನೂ ಓದಿ: ಶಿವಾಜಿ ಪಾರ್ಕ್ ನಲ್ಲಿ ದಸರಾ ರ್‍ಯಾಲಿ: ಉದ್ಧವ್ ಠಾಕ್ರೆ ಬಣಕ್ಕೆ ಹೈಕೋರ್ಟ್ ಅನುಮತಿ
“ನೀವು ಏನನ್ನಾದರೂ ಸಲ್ಲಿಸಲು ಬಯಸಿದರೆ, ದಯವಿಟ್ಟು ಅವುಗಳನ್ನು ಒಂದು ವಾರದಲ್ಲಿ ಸಲ್ಲಿಸಿ. ನಾವು ಅಕ್ಟೋಬರ್ 12 ರಂದು ವಿಚಾರಣೆಗಾಗಿ ವಿಷಯವನ್ನು ಪರಿಗಣಿಸುತ್ತೇವೆ ”ಎಂದು ಪೀಠ ಮಹಿಳೆಯ ಪರ ವಾದ ಮಂಡಿಸಿದ ವಕೀಲ ಸಂದೀಪ್ ಕುಮಾರ್ ಸಿಂಗ್ ಗೆ ತಿಳಿಸಿದೆ.
2018 ರಲ್ಲಿ, ದೆಹಲಿ ಮೂಲದ ಮಹಿಳೆಯೊಬ್ಬರು ಹುಸೈನ್ ವಿರುದ್ಧ ಅತ್ಯಾಚಾರ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲು ಕೆಳ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಹುಸೈನ್ ಆರೋಪವನ್ನು ನಿರಾಕರಿಸಿದ್ದಾರೆ.