ಹೊಸದಿಲ್ಲಿ: ಜೋಶಿಮಠ ಕುಸಿತದ ಬಿಕ್ಕಟ್ಟಿನ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಜನವರಿ 10) ನಿರಾಕರಿಸಿದೆ. ಅಲ್ಲದೆ ಜನವರಿ 16 ರಂದು ವಿಚಾರಣೆಯನ್ನು ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠವು ” ಎಲ್ಲಾ ಮುಖ್ಯ ವಿಷಯಗಳು ಸುಪ್ರೀಂ ಕೋರ್ಟ್‌ಗೆ ಬರಬೇಕಾಗಿಲ್ಲ” ಎಂದು ಹೇಳಿದೆ.
“ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉತ್ತರಾಖಂಡದ ಜೋಶಿಮಠ ಪಟ್ಟಣದಲ್ಲಿನ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯನ್ನು ಕೋರಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಲ್ಲಿಸಿದ ಅರ್ಜಿಯನ್ನು ಎಸ್‌ಸಿ ವಿಚಾರಣೆ ನಡೆಸುತ್ತಿದೆ.
Related Articles
ಇದನ್ನೂ ಓದಿ:ದೇಶಕ್ಕಾಗಿ ಕಾದಾಡುವ ʼಪಠಾಣ್ʼ: ಟ್ರೇಲರ್ ನಲ್ಲಿ ಶಾರುಖ್, ಜಾನ್ ಅಬ್ರಹಾಂ ಫೈಟೇ ಹೈಲೈಟ್
ದೊಡ್ಡ ಪ್ರಮಾಣದ ಕೈಗಾರಿಕೀಕರಣದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಸರಸ್ವತಿ ವಾದಿಸಿದ್ದಾರೆ. ಉತ್ತರಾಖಂಡದ ಜನರಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಪರಿಹಾರವನ್ನು ಅವರು ಕೋರಿದ್ದಾರೆ.