Advertisement

ಬ್ಲೂವೇಲ್‌ಗೆ ಬ್ರೇಕ್‌: ಸಮಿತಿ ರಚನೆಗೆ ಸೂಚನೆ

11:07 AM Oct 14, 2017 | Team Udayavani |

ನವದೆಹಲಿ: ಮಾರಣಾಂತಿಕ ಬ್ಲೂವೇಲ್‌ ಗೇಮ್‌ಗೆ ದೇಶಾದ್ಯಂತ ಹಲವು ಮಕ್ಕಳು ಬಲಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್‌ ಕೇಳಿದೆ. ಅಂತರ್ಜಾಲದಲ್ಲಿ ಫೈರ್‌ವಾಲ್‌ ಮೂಲಕ ಇದನ್ನು ನಿರ್ಬಂ
ಧಿಸುವ ಬಗ್ಗೆ ತಜ್ಞರ ಸಮಿತಿ ರೂಪಿಸುವಂತೆ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಸೂಚಿಸಿದೆ.

Advertisement

ನಿರ್ದಿಷ್ಟ ಸರ್ವರ್‌ಗೆ ದತ್ತಾಂಶದ ಹರಿವನ್ನು ನಿರ್ಬಂಧಿಸಲು ಫೈರ್‌ವಾಲ್‌ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ಮೂಲಕ ಬ್ಲೂವೇಲ್‌ ಗೇಮ್‌ ಅಪ್ಲಿಕೇಶನ್‌ಗೆ ಭಾರತದ ಯಾವುದೇ ಅಂತರ್ಜಾಲ ಸೇವಾ ಪೂರೈಕೆದಾರರ ಮೂಲಕ  ಸರ್ವರ್‌ಗೆ ಸಂಪರ್ಕ ಸಾಧ್ಯವಾಗದಂತೆ  ತಡೆಯಬಹುದು. ಇದರಿಂದ ಯಾವುದೇ ಮೂಲದಿಂದ ಅಪ್ಲಿಕೇಶನ್‌ ಸಿಕ್ಕರೂ ಮಕ್ಕಳು ಆಟವಾಡಲು ಸಾಧ್ಯವಾಗುವುದಿಲ್ಲ.

ಇನ್ನೊಂದೆಡೆ, ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿ ರುವುದರಿಂದ ದೇಶದ ಯಾವುದೇ ಹೈಕೋರ್ಟ್ ಗಳು ಬ್ಲೂವೇಲ್‌ಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿಕೊಳ್ಳಬಾರದು ಎಂದು ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next