Advertisement

ಮೂರು ತಿಂಗಳಿಗೊಮ್ಮೆ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆ

03:17 PM May 25, 2022 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ತಡೆಗಟ್ಟುವ ಸಲುವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟರ ಹಿತರಕ್ಷಣಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಭೆ ಆರಂಭದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮುಖಂಡರಿಂದ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಎಸ್ಪಿ, ಸಮುದಾಯದ ಹಿತರಕ್ಷಣೆಗಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದರೂ ಮಾನಸಿಕ, ದೈಹಿಕವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿದರು.

ತ್ತೈಮಾಸಿಕ ಹಿತರಕ್ಷಣಾ ಸಭೆ: ಇಂತಹವುಗಳನ್ನು ತಡೆದು ಸಮಾಜದಲ್ಲಿ ಗೌರವಯುತ ಬದುಕು ದೊರ ಕಿಸಿಕೊಡಲು ಜಿಲ್ಲಾದ್ಯಂತ ಆಯಾ ಠಾಣೆ, ಉಪವಿಭಾಗ ಹಾಗೂ ಜಿಲ್ಲಾಮಟ್ಟದಲ್ಲಿ ತ್ತೈಮಾಸಿಕ ಹಿತರಕ್ಷಣಾ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆನೀಡಲಾಗುವುದು ಎಂದು ಹೇಳಿದರು.

ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ ಅವರು, ಪೊಲೀಸ್‌ ದೂರು ಪ್ರಾಧಿಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರಾಧಿಕಾರದಲ್ಲಿ ಇದುವ ರೆಗೂ ಎಷ್ಟುದೂರುಗಳು ದಾಖಲಾಗಿವೆ? ಎಷ್ಟು ಇತ್ಯರ್ಥವಾಗಿವೆ?, ಮಡಹಳ್ಳಿ ಗುಡ್ಡ ಕುಸಿತದಲ್ಲಿ ಎಷ್ಟು ಪ್ರಾಣಾಪಾಯದಲ್ಲಿ ಸಿಲುಕಿದ್ದಾರೆ ಎಂದು ಪ್ರಶ್ನಿಸಿದರು.

Advertisement

ರೌಡಿಪಟ್ಟಿಯಿಂದ ಕೈಬಿಡಿ: ನಗರದ ಜಿಲ್ಲಾಸ್ಪತ್ರೆ ಮುಂಭಾಗದ ಮದ್ಯದಂಗಡಿ ತೆರವುಗೊಳಿಸಬೇಕು.ಉತ್ತಮ ಜೀವನ ನಡೆಸುವವರನ್ನು ರೌಡಿಪಟ್ಟಿ ಯಿಂದ ಕೈಬಿಡುವಂತೆ ಸಭೆಯಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಜೂಜು ಕೇಂದ್ರ ಹೆಚ್ಚಳ: ನಗರಸಭೆ ಮಾಜಿ ಸದಸ್ಯ ಸುರೇಶ್‌ನಾಯಕ ಮಾತನಾಡಿ, ಪಟ್ಟಣದ ವಿವಿಧೆಡೆ ಗಳಲ್ಲಿ ಜೂಜು ಕೇಂದ್ರಗಳು ಅವ್ಯಹತವಾಗಿ ನಡೆ ಯುತ್ತಿವೆ. ರಿಕ್ರಿಯೇಷನ್‌ ಕ್ಲಬ್‌ಗಳ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಯಂ ತ್ರಿಸಬೇಕು, ನಗರದಲ್ಲಿ ಸಂಚಾರದಟ್ಟಣೆ ಅಧಿಕವಾಗಿದ್ದರೂ ಕೆಲ ಖಾಸಗಿ ಬಸ್‌ಗಳು, ಟೆಂಪೋಗಳಹಾವಳಿಯಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಪೊಲೀಸರಿಗೆ ಸೂಚನೆ: ಇದಕ್ಕೆ ಉತ್ತರಿಸಿದ ಎಸ್ಪಿ, ಕ್ಲಬ್‌ಗಳಿಗೆ ಪರವಾನಗಿ ಇರುತ್ತದೆ. ಇಲ್ಲದ ಕ್ಲಬ್‌ಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೇಮುಂದಿನ ಕ್ರಮ ವಹಿಸಲಾಗುವುದು. ಉನ್ನುಳಿದಂತೆ ಖಾಸಗಿ ಬಸ್‌, ಟೆಂಪೋಗಳನ್ನು ಪಾರ್ಕಿಂಗ್‌ಸ್ಥಳದಲ್ಲಿಯೇ ನಿಲ್ಲಿಸುವಂತೆ ಸೂಚಿಸಲು ಪೊಲೀಸರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಚಾ.ಗು.ನಾಗರಾಜು ಮಾತನಾಡಿ, ಪೊಲೀಸ್‌

ಠಾಣೆಗಳಲ್ಲಿ ಎಫ್ಐಆರ್‌ ದಾಖಲಿಸುವಾಗ ಪ್ರಭಾವಿಗಳ ಹಿತರಕ್ಷಣೆಗಾಗಿ ಸತ್ಯಾಸತ್ಯತೆ ಮರೆಮಾಚಲಾಗುತ್ತಿದೆ. ಪ್ರಕರಣವನ್ನು ವೈಜ್ಞಾನಿಕವಾಗಿ, ಕೂಲಂಕಶವಾಗಿ ಪರಿಶೀಲನೆ ಮಾಡಿ ಎಫ್ಐಆರ್‌ದಾಖ ಲಸಬೇಕು. ಎಸ್‌.ಸಿ., ಎಸ್‌.ಟಿ ಬಡಾವಣೆಗಳಿಗೆ ಸಿ.ಸಿ.ಕ್ಯಾಮೆರಾ ಅಳವಡಿಸುವಂತೆ ಕೋರಿದರು.

ಎಎಸ್ಪಿ ಕೆ.ಎಸ್‌.ಸುಂದರರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕೊಳ್ಳೇಗಾಲ ಡಿವೈಎಸ್‌ಪಿ ನಾಗರಾಜು, ಅಬಕಾರಿ ಆಯುಕ್ತ‌ ಶ್ರೀನಿ ವಾಸ್‌, ಉಪಆಯುಕ್ತ ಮೋಹನ್‌ ಕುಮಾರ್‌, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next