Advertisement

ಜಲ್ಲಿಕಟ್ಟು ತೀರ್ಪು ವಾರ ಕಾಲ ಬೇಡ: ಕೇಂದ್ರದ ಮನವಿಗೆ ಸುಪ್ರೀಂ ಅಸ್ತು

11:28 AM Jan 20, 2017 | Team Udayavani |

ಹೊಸದಿಲ್ಲಿ : ಜಲ್ಲಿಕಟ್ಟು ಕುರಿತಾದ ತೀರ್ಪನ್ನು ಇನ್ನೊಂದು ವಾರದ ಮಟ್ಟಿಗೆ ಪ್ರಕಟಿಸಬಾರದೆಂಬ ಕೇಂದ್ರ ಸರಕಾರದ ಮನವಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. 

Advertisement

ಜಲ್ಲಿಕಟ್ಟು ಕುರಿತಾಗಿ ನನ್ನ ಅಭಿಪ್ರಾಯವನ್ನು ಕೇಂದ್ರ ಸರಕಾರ ಕೇಳಿಲ್ಲ ಎಂದು ಈ ನಡುವೆ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಹೇಳಿದ್ದಾರೆ.

ಜಲ್ಲಿಕಟ್ಟು ನಿಷೇಧ ತೆರವು ಆಗ್ರಹಿಸಿ ಆಂದೋಲನ ನಿರತರಾಗಿರುವ ಡಿಎಂಕೆ ಕಾರ್ಯಕರ್ತರು ಇಂದು ಚೆನ್ನೈನ ಎಗ್‌ಮೋರ್‌ ರೈಲು ನಿಲ್ದಾಣದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ರೈಲ್‌ ರೋಕೋ ನಡೆಸಲು ಒಳ ನುಗಿದ್ದಾರೆ. 

ಡಿಎಂಕೆ ನಾಯಕರಾದ ದಯಾನಿಧಿ ಮಾರನ್‌ ಮತ್ತು ಕನಿಮೋಳಿ ಅವರು ರೈಲ್‌ ರೋಕೋ ಆಂದೋಲನಕ್ಕಾಗಿ ಚೆನ್ನೈ ಎಗ್‌ಮೋರ್‌ ರೈಲು ನಿಲ್ದಾಣದಲ್ಲಿ ಕಾರ್ಯಕರ್ತರೊಂದಿಗೆ ಸೇರಿಕೊಂಡಿದ್ದಾರೆ. 

ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next