Advertisement

ದೇಗುಲಗಳ ಮೇಲೇಕೆ ಸರ್ಕಾರಿ ನಿಯಂತ್ರಣ?

06:00 AM Oct 13, 2018 | Team Udayavani |

ನವದೆಹಲಿ/ತಿರುವನಂತಪುರ: ಮಸೀದಿಗಳು, ಚರ್ಚ್‌ಗಳು ಸರ್ಕಾರದ ನಿಯಂತ್ರಣದಲ್ಲಿ ಇಲ್ಲದೇ ಇದ್ದ ಮೇಲೆ ದೇಗುಲಗಳು ಯಾಕೆ ಇರಬೇಕು? ಹೀಗಾಗಿ ದೇವಸ್ವಂ ಮಂಡಳಿಯ ರಚನೆಯೇ ಪ್ರಶ್ನಾರ್ಹ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್‌ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ಯು.ಯು.ಲಲಿತ್‌ ಮತ್ತು ನ್ಯಾ.ಕೆ.ಎಂ.ಜೋಸಫ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿದೆ. ಜತೆಗೆ ಕೇರಳ ಸರ್ಕಾರ ಮತ್ತು ತಿರುವಾಂಕೂರು ಮತ್ತು ಕೊಚ್ಚಿ ದೇವಸ್ವಂ ಮಂಡಳಿಗಳಿಗೆ ನೋಟಿಸ್‌ ಜಾರಿ ಮಾಡಿ, ಆರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

Advertisement

ಶಬರಿಮಲೆ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆ  ಯರು ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದಕ್ಕೆ ಪ್ರತಿಭಟನೆಗಳು ನಡೆದಿರುವಂತೆಯೇ ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್‌ ಸ್ವಾಮಿ ಮತ್ತು ಟಿ.ಜಿ.ಮೋಹನ್‌ದಾಸ್‌ ಈ ಅರ್ಜಿ ಸಲ್ಲಿಸಿ 
ದ್ದಾರೆ. 1950ರಲ್ಲಿ ಜಾರಿಗೆ ಬಂದ ತಿರುವಾಂಕೂರು-ಕೊಚ್ಚಿ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ಕೇರಳ ಹೈಕೋರ್ಟ್‌ ತೆಗೆದು ಹಾಕದೇ ಇರುವುದು ಸರಿಯಲ್ಲ. ಅದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಮತ್ತು ನಿರಂಕುಶವಾದದ್ದು ಎಂದು ಪ್ರತಿಪಾದಿಸಿದ್ದಾರೆ ಸ್ವಾಮಿ. ಜತೆಗೆ ದೇವಸ್ವಂ ಮಂಡಳಿಗಳು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿರಬೇಕು ಎಂದು ವಾದಿಸಿದ್ದಾರೆ.

ತಿರುವಾಂಕೂರು ಮತ್ತು ಕೊಚ್ಚಿ ದೇವಸ್ವಂ ಮಂಡಳಿಗಳಿಗೆ ಸದಸ್ಯರ ನೇಮಕ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಸರಿಯಾಗಿಲ್ಲ. ಅದು ಧಾರ್ಮಿಕ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಅವಹೇಳನವಾಗಿದೆ. ಜತೆಗೆ ಭಕ್ತರ ಹಕ್ಕುಗಳನ್ನು ಪ್ರಶ್ನಿಸಿದಂತಾಗಿದೆ ಎಂದು ಅರಿಕೆ ಮಾಡಿದ್ದಾರೆ. ಸರ್ಕಾರ ನೇರವಾಗಿ ದೇಗುಲದ ಆಡಳಿತವನ್ನು ವಶಕ್ಕೆ ಪಡೆಯುವಂತಿಲ್ಲ. ನಿಗದಿತ ದೇಗುಲದಲ್ಲಿ ಅವ್ಯವಹಾರ ಉಂಟಾಗಿದೆ ಎಂಬ ಬಗ್ಗೆ ಖಚಿತ ವಾದಾಗ ಮಾತ್ರ ಅದನ್ನು ತನ್ನ ವ್ಯಾಪ್ತಿಗೆ ಪಡೆದು  ಕೊಳ್ಳಬೇಕು. ತಪ್ಪು ಸರಿಪಡಿಸಿದ ಬಳಿಕ ದೇಗುಲವನ್ನು ಮತ್ತೆ ಹಳೆಯ ಆಡಳಿತ ಮಂಡಳಿಗೆ ನೀಡಬೇಕು ಎಂದು ತಮ್ಮ ಅರ್ಜಿಯಲ್ಲಿ ಸ್ವಾಮಿ ವಾದಿಸಿದ್ದಾರೆ.

10 ಲಕ್ಷ ವೆಚ್ಚ ಸಾಧ್ಯವಿಲ್ಲವೇ?: ಸುದ್ದಿ ವಾಹಿನಿಗಳ ಜತೆಗೆ ಮಾತನಾಡಿದ ಸಾಮಾಜಿಕ ಹೋರಾ ಟಗಾರ ರಾಹುಲ್‌ ಈಶ್ವರ್‌, ಶಬರಿಮಲೆ ದೇಗುಲದ ಬ್ಯಾಂಕ್‌ ಖಾತೆಯಲ್ಲಿ 831 ಕೋಟಿ ರೂ. ಹಣವಿದೆ. ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ 10 ಲಕ್ಷ ರೂ. ವೆಚ್ಚ ಮಾಡಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಂದು ಸಾವಿರ ಮಹಿಳೆಯರೂ ಸೇರಿದಂತೆ ಸಾವಿರಾರು ಮಂದಿ ಭಕ್ತರು ಶಬರಿಮಲೆ ದೇಗುಲದತ್ತತೆರಳಿ ಸಂಸ್ಕೃತಿ ಉಳಿಸುವ ಒತ್ತಾಯ ಮಾಡಲಿದ್ದೇವೆ ಎಂದಿದ್ದಾರೆ. ತೀವ್ರವಾಗಿ ಮಹಿಳಾ ಪರ ಹೋರಾಟ ನಡೆಸುವವರನ್ನು ದೇಗುಲ ಪ್ರವೇಶದಿಂದ ತಡೆಯಲಿದ್ದೇವೆ ಎಂದು ಹೇಳಿದ್ದಾರೆ.

16ಕ್ಕೆ ತೆರೆಯಲಿದೆ ಬಾಗಿಲು: ಈ ನಡುವೆ ಅ.16ರಂದು ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿದ್ದು, ತೀರ್ಪಿನ ವಿರುದಟಛಿ ಪ್ರತಿಭಟನೆಗಳು ತೀವ್ರಗೊಂಡಿವೆ. ದೇಗುಲಕ್ಕೆ ಆಭರಣ ಪೂರೈಸುವ ಪಂದಳಂ ರಾಜಮನೆತನ ತಿರುವನಂತಪುರದಲ್ಲಿರುವ ಸೆಕ್ರೆಟೇರಿಯಟ್‌ ಮುಂಭಾಗ
ದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಹೇಳಿದೆ.

Advertisement

ಮೂರು ದಿನ ಸಭೆ: ಈ ಬೆಳವಣಿಗೆಗಳ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅ.16, 23, 24ರಂದು ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟಗಳಲ್ಲಿ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ತೀರ್ಪಿನ ವಿರುದಟಛಿ ಸುಪ್ರೀಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುತ್ತಿಲ್ಲ ಎಂಬ ಸರ್ಕಾರದ ನಿಲುವಿನ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. 

ಅಲ್ಲಲ್ಲಿ ಪ್ರತಿಭಟನೆ: ಈ ನಡುವೆ ತೀರ್ಪಿನ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಯ್ಯಪ್ಪ ಭಕ್ತರಿಗೆ ಬೆಂಬಲ
ಸೂಚಿಸುತ್ತಿದ್ದಾರೆ. ಕೇರಳ ಮಾತ್ರವಲ್ಲ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ. ಎಲ್‌ಡಿಎಫ್ ಸರ್ಕಾರದ ಮೈತ್ರಿ ಪಕ್ಷವಾಗಿರುವ ಸಿಪಿಐ ಪ್ರತಿಭಟನೆಗಳನ್ನು ಟೀಕಿಸಿ, ವಿಚಾರವನ್ನು ರಾಜಕೀಯಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು
ಆರೋಪಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕಚೇರಿ ಎದುರು ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಕೇರಳ ಸರ್ಕಾರ ತೀರ್ಪಿನ ವಿರುದಟಛಿ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿತು. ಕೊಲ್ಲಂನಲ್ಲಿ ಮಾತನಾಡಿದ ಮಲಯಾಳಂ ನಟ ಕೊಲ್ಲಂ ತುಳಸಿ, ಶಬರಿಮಲೆ ಪ್ರವೇಶಿಸುವ ಮಹಿಳೆಯರನ್ನು 2 ಸೀಳು ಮಾಡಿ, ಒಂದನ್ನು ಸಿಎಂ ಕಚೇರಿಗೆ, ಮತ್ತೂಂದನ್ನು ನವದೆಹಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ. 

ಸಂಪ್ರದಾಯ ಕಾಪಾಡುತ್ತೇವೆ: ಚೆನ್ನೈನಲ್ಲಿರುವ ಮಹಿಳಾ ಅಯ್ಯಪ್ಪ ಭಕ್ತ ವೃಂದ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡದೇ ಇರುವ ಹಿಂದಿನ ಸಂಸ್ಕೃತಿಯನ್ನೇ ಪಾಲಿಸುವುದಾಗಿ ಘೋಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next